Raju James Bond; ಲಂಡನ್‍ನಲ್ಲಿ ‘ರಾಜು ಜೇಮ್ಸ್ ಬಾಂಡ್’; ‘ಕಣ್ಮಣಿ’ ಜೊತೆಗೆ ಪ್ರೇಮಗೀತೆ

Raju-James-Bond-Kanmani-Song

ಕಳೆದ ವರ್ಷದ ಡಿಸೆಂಬರ್‍ 27ರಂದು ಬಿಡುಗಡೆ ಆಗಬೇಕಿದ್ದ ಗುರುನಂದನ್‍ ಅಭಿನಯದ ‘ರಾಜು ಜೇಮ್ಸ್ ಬಾಂಡ್‍’ ಎಂಬ ರೊಮ್ಯಾಂಟಿಕ್‍ ಕಾಮಿಡಿ ಚಿತ್ರದ ಬಿಡುಗಡೆಗೆ ಇದೀಗ ಹೊಸ ಮುಹೂರ್ತ ಸಿಕ್ಕಿದೆ. ಚಿತ್ರವು ಇದೀಗ ಪ್ರೇಮಿಗಳ ದಿನದಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಗುರುನಂದನ್‍, ‘ರಾಜು ಜೇಮ್ಸ್ ಬಾಂಡ್‍’ ಆಗಿ ನಟಿಸಿರುವ ಈ ಚಿತ್ರದ ಪ್ರಚಾರ ಕೆಲಸಗಳು ಈಗಾಗಲೇ ಶುರುವಾಗಿವೆ. ಈ ಮಧ್ಯೆ, ಚಿತ್ರದ ‘ಕಣ್ಮಣಿ’ ಎಂಬ ಹಾಡು ಇತ್ತೀಚಿಗೆ A2 ಮ್ಯೂಸಿಕ್ ಚಾನಲ್‌ ನಲ್ಲಿ ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಹಾಡಿದ್ದಾರೆ‌. ಜ್ಯೋತಿ ವ್ಯಾಸರಾಜ್ ಹಾಡು ಬರೆದಿದ್ದಾರೆ.

ಡಾ. ರಾಜಕುಮಾರ್‍ ಅಭಿನಯಿಸಿದ್ದ ಜೇಮ್ಸ್‌ ಬಾಂಡ್ ಚಿತ್ರದ ಕಥೆಯೇ ಬೇರೆ. ‘ರಾಜು ಜೇಮ್ಸ್ ಬಾಂಡ್’ ಚಿತ್ರದ ಕಥೆಯೇ ಬೇರೆ ನಿರ್ದೇಶಕ ದೀಪಕ್‍ ಮಧುವನಹಳ್ಳಿ, ‘ಕಣ್ಮಣಿ’ ಒಂದು ರೊಮ್ಯಾಂಟಿಕ್‍ ಹಾಡಾಗಿದ್ದು, ಸಂಜಿತ್ ಹೆಗ್ಡೆ ಅವರ ಧ್ವನಿಯಲ್ಲಿ ಕೇಳುವುದೆ ಚೆಂದ. ಲಂಡನ್‌ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡಿನಲ್ಲಿ ಗುರುನಂದನ್ ಹಾಗೂ ಮೃದುಲ ಕಾಣಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ ಹಾಡಿನ ಶ್ರೀಮಂತಿಕೆಯನ್ನು‌ ಮತ್ತಷ್ಟು ಹೆಚ್ಚಿಸಿದೆ’ ಎಂದರು. ಇದು ದೀಪಕ್‍ ಅಭಿನಯದ ನಾಲ್ಕನೇ ಚಿತ್ರವಾಗಿದ್ದು, ಈ ಹಿಂದೆ ‘ಭಾಗ್ಯರಾಜ್‍’ ಮತ್ತು ‘ಕಳ್‍ಬೆಟ್ಟದ ದರೋಡೆಕೋರರು’ ಚಿತ್ರಗಳು ಬಿಡುಗಡೆಯಾಗಿವೆ. ‘ಅನ್‍ಲಾಕ್‍ ರಾಘವ’ ಚಿತ್ರವು ಫೆಬ್ರವರಿ 07ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಗುರುನಂದನ್‍ ಮಾತನಾಡಿ, ‘ಈ ಹಾಡಿನಲ್ಲಿ ನಾನು ಚೆನ್ನಾಗಿ ನೃತ್ಯ ಮಾಡಿದ್ದೀನಿ ಅಂದರೆ ಅದಕ್ಕೆ ಮುರಳಿ ಮಾಸ್ಟರ್ ಕಾರಣ. ನಮ್ಮ ಚಿತ್ರ ಡಿಸೆಂಬರ್ ಕೊನೆಯಲ್ಲೇ ಬಿಡುಗಡೆಯಾಗಬೇಕಿತ್ತು.‌ ಆದರೆ ಎರಡು ದೊಡ್ಡ ಚಿತ್ರಗಳು ಅದೇ ಸಮಯಕ್ಕೆ ಬಿಡುಗಡೆಯಾದ್ದುದ್ದರಿಂದ ನಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿ, ಇದೀಗ ಫೆಬ್ರವರಿ 14ರಂದು ಚಿತ್ರ ಬಿಡುಗಡೆ ಮಾಡಲಿದ್ದೇವೆ’ ಎಂದರು.

ಕರ್ಮ ಬ್ರೋಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ರಾಜು ಜೇಮ್ಸ್ ಬಾಂಡ್‍’ ಚಿತ್ರವು ನೇಪಾಳಿ ಭಾಷೆಗೆ ಡಬ್ ಆಗುತ್ತಿದ್ದು, ಚಿತ್ರದ ಹಕ್ಕುಗಳು ಮಾರಾಟವಾಗಿವೆಯಂತೆ. ಕರ್ನಾಟಕದಲ್ಲಿ ಸತ್ಯ ಪಿಕ್ಚರ್ಸ್‌ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

ಚಿತ್ರದಲ್ಲಿ ಗುರುನಂದನ್‍, ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ನಟಿಸಿದ್ದಾರೆ. ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರು ಈ ಚಿತ್ರದ ನಿರ್ಮಾಪಕರು.

(Gurunandan Starrer ʻRaju James Bondʼ To Release On Valentine’s Day. Raju James Bond film melodious and romantic love song Kanmani)

Leave a Reply

Your email address will not be published. Required fields are marked *