ನವಿಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆ ‘Eltuu Muthaa’

ಮುಗ್ದ ಸ್ವಭಾವದ ನವೀಲನ್ನು ಕೆಣಕಿದರೆ, ಅದು ಕೆರಳಿದರೆ,‌ ಆಗ ಕಾಳಿಂಗ ಸರ್ಪವನ್ನು ಕೊಲ್ಲುತ್ತದಂತೆ. ಇಂಥದ್ದೊಂದು ಕಥೆಯನ್ನು ಇಟ್ಟುಕೊಂಡು ಹೊಸಬರ ತಂಡವೊಂದು ಸದ್ದಿಲ್ಲದೆ ‘ಎಲ್ಟು ಮುತ್ತಾ’ (Eltuu Muthaa) ಎಂಬ ಚಿತ್ರವನ್ನು ಮಾಡಿ ಮುಗಿಸಿದೆ. ಕಳೆದ ವರ್ಷ ಪ್ರಾರಂಭವಾದ ಈ ಚಿತ್ರವು, ಇದೀಗ ಮುಕ್ತಾಯವಾಗಿದ್ದು, ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಅದಕ್ಕೂ ಮೊದಲು ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಪತ್ನಿ ಶೈಲಜಾ ವಿಜಯ್ ಕಿರಗಂದೂರು ಟೀಸರ್‌ ಬಿಡಗುಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ಎಲ್ಟು ಮುತ್ತ’ ಚಿತ್ರವನ್ನು ರಾ.ಸೂರ್ಯ ಬರೆದು ನಿರ್ದೇಶಿಸಿರುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸಾವಿನ ಸಂದರ್ಭದಲ್ಲಿ ಡೋಲು ಹೊಡೆಯುವವರ ಸುತ್ತಲ್ಲಿನ ಕಥೆ ಇರುವ ಚಿತ್ರವು, ಎಲ್ಟು ಮತ್ತು ಮುತ್ತಾ ಎಂಬ ಎರಡು ಪಾತ್ರಗಳ ಸುತ್ತ ಸುತ್ತುತ್ತದಂತೆ.

ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಎನ್ನುವ ರಾ. ಸೂರ್ಯ, ‘ನವಿಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆ ನಮ್ಮ ಚಿತ್ರದ ಕಥೆಗೆ ಸ್ಪೂರ್ತಿ. ತನ್ನ ಕುಣಿತದಿಂದ ಎಲ್ಲರ ಗಮನ ಸೆಳೆಯುವ ಮುಗ್ದ ಸ್ವಭಾವದ ನವಿಲು,‌ ಕೆರಳಿದರೆ ಕಾಳಿಂಗ ಸರ್ಪವನ್ನು ಕೊಲ್ಲುತ್ತದೆ. ಇದನ್ನೇ ನಾವು ಪಾತ್ರಗಳ ಮೂಲಕ ಹೇಳಿದ್ದೇವೆ. ಇದು ಕೊಡಗು ಭಾಗದಲ್ಲಿ ನಡೆಯುವ ಕಥೆ. ಹೆಚ್ಚಿನ ಚಿತ್ರೀಕರಣ ಕೊಡಗಿನಲ್ಲೇ ಆಗಿದೆ. ಸಂಭಾಷಣೆ ಕೂಡ ಮಡಿಕೇರಿ ಕನ್ನಡ ಭಾಷೆಯಲ್ಲೇ ಇರುತ್ತದೆ’ ಎಂದರು. ಇನ್ನು, ಅವರು ಚಿತ್ರದಲ್ಲಿ ಎಲ್ಟು ಪಾತ್ರ ಮಾಡಿದ್ದಾರೆ.

ಶೌರ್ಯ ಪ್ರತಾಪ್‍ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾಗುತ್ತಿದ್ದು, ಚಿತ್ರದಲ್ಲಿ ಮುತ್ತನ ಪಾತ್ರ ಮಾಡಿದ್ದಾರಂತೆ. ‘ನಾನು ಕಲಾವಿದ ಆಗುವುದು ನನ್ನ ತಂದೆಗೆ ಇಷ್ಟವಿರಲಿಲ್ಲ. ಕೆಲಸ ಮಾಡಿ ನಾನು ಒಳ್ಳೆಯ ಸ್ಥಾನಕ್ಕೆ ಬರಬೇಕು ಎಂಬುದು ಅವರ ಆಸೆಯಾಗಿತ್ತು. ನಮ್ಮ ತಂದೆಯ ಇಚ್ಚೆಯಂತೆ ಓದಿ ಒಳ್ಳೆಯ ಸ್ಥಾನಕ್ಕೆ ಬಂದು ಈಗ ನಟ ಆಗಿದ್ದೇನೆ. ನನ್ನ ಹಾಗೂ ನನ್ನ ತಂದೆ ಇಬ್ಬರ ಆಸೆಯೂ ಈಡೇರಿದೆ. ನಟನಾಗಷ್ಟೇ ಅಲ್ಲದೆ ಸಹ ನಿರ್ದೇಶಕನಾಗಿ ಹಾಗೂ ಸಹ ಬರಹಗಾರನಗೂ ಕಾರ್ಯ ನಿರ್ವಹಿಸಿದ್ದೇನೆ’ ಎಂದರು.

‘ಎಲ್ಟು ಮುತ್ತಾ’ ಚಿತ್ರವನ್ನು ಹೈ5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ   ಶ್ರೀನಿವಾಸನ್ ನಿರ್ಮಿಸಿದ್ದು, ಚಿತ್ರದಲ್ಲಿ ಕಾಕ್ರೋಚ್‍ ಸುಧಿ, ಪ್ರಿಯಾಂಕಾ ಮಳಲಿ, ನವೀನ್‍ ಪಡೀಲ್‍, ಯಮುನಾ ಶ್ರೀನಿಧಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರಸನ್ನ ಕೇಶವ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. Обращайтесь к нам снова https://bio.site/kkediogi конспирация достойная, товар оказался отличным, кроли заценили. будем еще работать

One thought on “ನವಿಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆ ‘Eltuu Muthaa’

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ