ಆಂಜನೇಯ ಅವತಾರವೆತ್ತಿದ ಗಣೇಶ್; ‘Yours Sincerely Raamʼ ಚಿತ್ರದ ಪೋಸ್ಟರ್ ಬಿಡುಗಡೆ

ಕನ್ನಡ ಚಿತ್ರರಂಗದ ತ್ಯಾಗರಾಜರು ಎಂದೇ ಖ್ಯಾತಿ ಪಡೆದಿರುವ ರಮೇಶ್ ಅರವಿಂದ್ ಹಾಗೂ ಗಣೇಶ್ ಜೊತೆಯಾಗಿ ನಟಿಸುತ್ತಿರುವ ‘Yours Sincerely Raamʼ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಂದು ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಹೊಸ ಪೋಸ್ಟರ್ ಬಿಡುಗಡೆ ಮಾಡಿ ಗಣೇಶ್‍ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ಗಣೇಶ್ ಜನ್ಮದಿನಕ್ಕೆ ಅನಾವರಣಗೊಂಡಿರುವ ಪೋಸ್ಟರ್‌ನಲ್ಲಿ ಗಣೇಶ್ ಹಿಂದೆಂದೂ ಕಾಣದ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಅವತಾರದಲ್ಲಿ ಮಳೆ ಹುಡ್ಗ ದರ್ಶನ ಕೊಟ್ಟಿದ್ದಾರೆ. ಹಿಮಾಲಯದ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬಂದಿರುವ ಪೋಸ್ಟರ್‍ನಲ್ಲಿ ರಾಮ ಸೈಕಲ್ ಮೇಲೆ ಕುಳಿತಿದ್ದು, ಭಜರಂಗಿ ಭುಜದಲ್ಲಿ ಪೋಸ್ಟ್ ಮ್ಯಾನ್ ಬ್ಯಾಗ್ ಕಾಣಿಸುತ್ತದೆ.
ಈಗಾಗಲೇ ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ‘Yours Sincerely Raamʼ ಚಿತ್ರಕ್ಕಾಗಿ ಚಿತ್ರೀಕರಣ ಮಾಡಲಾಗಿದೆ. ಈ ವಾರ ಬೆಂಗಳೂರಿನಲ್ಲಿ ಇನ್ನೊಂದು ಹಂತದ ಚಿತ್ರೀಕರಣ ನಡೆಯಲಿದ್ದು, ಆ ನಂತರ ಕಾಶ್ಮೀರದಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆಯಂತೆ. ಚಿತ್ರತಂಡ ಸುಮಾರು 30 ದಿನಗಳಾ ಕಾಲ ಬೀಡುಬಿಟ್ಟು, ಚಿತ್ರೀಕರಣ ಮುಗಿಸಲಿದೆ ಎನ್ನುತ್ತಾರೆ ನಿರ್ಮಾಪಕ ವಿಖ್ಯಾತ್.
‘ಕಾಶ್ಮೀರದಲ್ಲಿ ಚಿತ್ರದ ಕಥೆಯ ಬಹುಭಾಗ ನಡೆಯಲಿದ್ದು, ಇಷ್ಟರಲ್ಲಿ ಚಿತ್ರೀಕರಣ ಮುಗಿಯಬೇಕಿತ್ತು. ಆದರೆ, ಕಾಶ್ಮೀರದಲ್ಲಿ ಟೆನ್ಶನ್ ಇದ್ದ ಕಾರಣ, ಚಿತ್ರೀಕರಣ ಮುಂದೂಡಬೇಕಾಯಿತು. ಸಾಧ್ಯವಾದಷ್ಟು ಬೇಗ ಚಿತ್ರೀಕರಣ ಮುಗಿಸಿ, ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ವಿಖ್ಯಾತ್.
ʻಪುಷ್ಪಕ ವಿಮಾನ’, ‘ಇನ್ಸ್‌ಪೆಕ್ಟರ್ ವಿಕ್ರಮ್’, ‘ಮಾನ್ಸೂನ್ ರಾಗ’ ಮುಂತಾದ ಚಿತ್ರಗಳಣ‍್ನು ನಿರ್ಮಿಸಿರುವ ವಿಖ್ಯಾತ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಐರಾ ಫಿಲ್ಮ್ಸ್ ಮತ್ತು ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಸತ್ಯ ರಾಯಲ, ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ಈ ಚಿತ್ರಕ್ಕಿದೆ.
ಇದನ್ನೂ ಓದಿ:-
ಓದು ಮುಂದುವರೆಸಿ ಇಲ್ಲಿ:-
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
One thought on “ಆಂಜನೇಯ ಅವತಾರವೆತ್ತಿದ ಗಣೇಶ್; ‘Yours Sincerely Raamʼ ಚಿತ್ರದ ಪೋಸ್ಟರ್ ಬಿಡುಗಡೆ”