‘45 Movieಗೆ ಗೆಟ್ಟೋ ಕಿಡ್ಸ್ ಹಾಡು; ಬೆಂಗಳೂರಿಗೆ ಬಂದ ಉಗಾಂಡದ ತಂಡ

Arjun Janya 45 Movie

ಶಿವರಾಜಕುಮಾರ್‌, ಉಪೇಮದ್ರ ಮತ್ತು ರಾಜ್‍ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರದ (45 Movie) ಒಂದು ಪ್ರಮೋಷನಲ್‍ ಹಾಡಿನ ಚಿತ್ರೀಕರಣ ಹೊರತುಪಡಿಸಿದರೆ, ಮಿಕ್ಕಂತೆ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಮಧ್ಯೆ, ಚಿತ್ರದ ಪ್ರಮೋಷನಲ್‍ ಹಾಡಿನ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದ್ದು, ಈ ಹಾಡಿನಲ್ಲಿ ಉಗಾಂಡದ ಗೆಟ್ಟೋ ಕಿಡ್ಸ್ ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

ಈ ಹಾಡಿನಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಶೆಟ್ಟಿ ಜೊತೆಗೆ ಯುಗಾಂಡದ ಜನಪ್ರಿಯ ಗೆಟ್ಟೋ ಕಿಡ್ಸ್ ತಂಡದವು ಸಹ ಕಾಣಿಸಿಕೊಳ್ಳಲಿದ್ದು, ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಈ ತಂಡದವರು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ, ಈ ತಂಡದವರನ್ನು ಬರಮಾಡಿಕೊಂಡಿದ್ದಾರೆ.

ಈ ಹಾಡಿನ ಕುರಿತು ಮಾತನಾಡುವ ನಿರ್ದೇಶಕ ಅರ್ಜುನ್ ಜನ್ಯ, ‘ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಪ್ರಮೋಷನಲ್‍ ಹಾಡುಗಳು ಇರುತ್ತವೆ. ಆದರೆ, ನಾವು ಸ್ವಲ್ಪ ವಿಭಿನ್ನವಾಗಿ ಮಾಡೋಣ ಅಂದುಕೊಂಡಿದ್ದೇವೆ. ತಮ್ಮ ಅಮೋಘ ನೃತ್ಯದಿಂದ ಇಡೀ ವಿಶ್ವದಲ್ಲೇ ಪ್ರಸಿದ್ದರಾಗಿರುವ ಉಗಾಂಡದ ‘ಗೆಟ್ಟೋ ಕಿಡ್ಸ್’ ನೃತ್ಯಗಾರರ ತಂಡ ಈ ಹಾಡಿನ ಭಾಗವಾಗಲಿದೆ. ಇವರು ಇದೇ ಮೊದಲು ಭಾರತಕ್ಕೆ ಆಗಮಿಸಿ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ಹಾಡಿಗಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಕನ್ನಡದಲ್ಲಿ ಎಂ.ಸಿ. ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ’ ಎಂದರು. 

ಸೂರಜ್‍ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್‍ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ. ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ. ‘45’ ಚಿತ್ರವು ಆಗಸ್ಟ್ 15ರಂದು ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ:-


ಓದು ಮುಂದುವರೆಸಿ ಇಲ್ಲಿ….

One thought on “‘45 Movieಗೆ ಗೆಟ್ಟೋ ಕಿಡ್ಸ್ ಹಾಡು; ಬೆಂಗಳೂರಿಗೆ ಬಂದ ಉಗಾಂಡದ ತಂಡ

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!