ಕನ್ನಡ ಚಿತ್ರರಂಗದ ಸುತ್ತ ಸಾಗುವ First Day First Show

ಫಸ್ಟ್ ಡೇ ಫಸ್ಟ್ ಶೋ’ ( first day first show ) ಎಂದರೆ ಮೊದಲಿಗೆ ನೆನಪಿಗೆ ಬರುವುದು ಚಿತ್ರರಂಗ. ಒಂದು ಚಿತ್ರ ಬಿಡುಗಡೆಯಾದ ಮೊದಲ ಪ್ರದರ್ಶನ ಆ ಚಿತ್ರತಂಡಕ್ಕೆ ಬಹಳ ಮಹತ್ವದ್ದು. ಆ ಪ್ರದರ್ಶನವು ಚಿತ್ರತಂಡ ಭವಿಷ್ಯವನ್ನು ಬರೆಯುತ್ತದೆ. ಇಂಥದ್ದೊಂದು ವಿಷಯವನ್ನು ಇಟ್ಟುಕೊಂಡು, ಕನ್ನಡದಲ್ಲಿ ಇದೀಗ ‘ಫಸ್ಟ್ ಡೇ ಫಸ್ಟ್ ಶೋ’ ಎಂಬ ಚಿತ್ರ ತಯಾರಾಗಿದೆ.

ಗಿರೀಶ್ ನಿರ್ದೇಶನದ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರವು ಜುಲೈ 04ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ‌ ಸಂಘದಲ್ಲಿ ಇತ್ತೀಚೆಗೆ ನಡೆಯಿತು. ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಾ.ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಅಂಬರೀಶ್ ಅವರ ಅಭಿಮಾನಿಗಳು ಬೆಂಬಲ ಕೊಟ್ಟಿದ್ದು ವಿಶೇಷವಾಗಿತ್ತು. ನಿರ್ಮಾಪಕ ಸಾರಾ ಗೋವಿಂದು, ವೀರಕಪುತ್ರ ಶ್ರೀನಿವಾಸ್, ಮಾಸ್ಟರ್ ಮಂಜು, ಅಂಬರೀಶ್‍ ಅಭಿಮಾನಿಗಳಾದ ಬೇಲೂರು ಸೋಮಶೇಖರ್ ಹಾಗೂ ರುದ್ರೇಗೌಡ ಅಭಿಮಾನಿಗಳ ಪರವಾಗಿ ಹಾಜರಿದ್ದು, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಗಿರೀಶ್‍, ‘’ನಾನು‌ ಒಂದ್ ಕಥೆ ಹೇಳ್ಲಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದೆ. ಆ ಬಳಿಕ ‘ವಾವ್’ ಎಂಬ ಸಿನಿಮಾ ಮಾಡಿದೆ. ಕಳೆದ ವರ್ಷ ‘ಶಾಲಿವಾಹನ ಶಕೆ‌’ ಬಿಡುಗಡೆಯಾಗಿದ್ದು, ಇದು ನನ್ನ ನಾಲ್ಕನೇ ಚಿತ್ರ. ನನ್ನ ನಾಲ್ಕೂ ಚಿತ್ರಗಳು ಬೇರೆ ರೀತಿ ಅಭಿರುಚಿ ಚಿತ್ರಗಳು. ಇದು ಕಥೆ ಎನ್ನುವುದಕ್ಕಿಂತ ಇಡೀ ಚಿತ್ರರಂಗವನ್ನು ಪ್ರತಿನಿಧಿಸುವ  ಸಂಭ್ರಮ ಅಂದುಕೊಳ್ಳಬಹುದು’ ಎಂದರು.

ಈ ಟ್ರೇಲರ್‍ಗೆ ಬಹುಭಾಷಾ ನಟ ಪ್ರಕಾಶ್‍ ರೈ ತಮ್ಮ ಧ್ವನಿ ನೀಡಿದ್ದಾರೆ. ಹಿರಿಯ ನಟ ಶ್ರೀನಾಥ್ ಮಗ ಮತ್ತು ಒಂದು ಕಾಲದಲ್ಲಿ ಬಾಲನಟನಾಗಿ ಗುರುತಿಸಿಕೊಂಡಿದ್ದ ರೋಹಿತ್‍ ಶ್ರೀನಾಥ್‍ ಈ ಚಿತ್ರದ ಮೂಲಕ ನಟನೆಗೆ ವಾಪಸ್ಸಾಗಿದ್ದಾರೆ. ಮಿಕ್ಕಂತೆ ಜೀವಿತಾ ವಸಿಷ್ಟ, ರೋಹಿತ್ ಶ್ರೀನಾಥ್, ಬಿ.ಎಂ. ವೆಂಕಟೇಶ್, ಗಿಲ್ಲಿ ನಟ ಮುಂತಾದವರು ನಟಿಸಿದ್ದಾರೆ.

ಊರ್ಮಿಳಾ ಕಿರಣ್ ನಿರ್ಮಿಸಿರುವ ಈ ಚಿತ್ರಕ್ಕೆ ಉಜ್ವಲ್ ಚಂದ್ರ ಸಂಕಲನ, ರಾಕೇಶ್ ಸಿ. ತಿಲಕ್ ಹಾಗೂ ಅರುಣ್ ಕುಮಾರ್ ಛಾಯಾಗ್ರಹಣ, ಸ್ವಾಮಿನಾಥನ್ ಹಿನ್ನೆಲೆ ಸಂಗೀತವಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗಾಗಿ :-

  1. Покуреха порошки безвкусные (на язык), остальные горькие. Так проще всего определить. https://www.band.us/page/99926443/ уже ожидается что нибудь?

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ