Mohanlal; ನಾನು ಕೆಟ್ಟ ನಟ ಅಲ್ಲ, ನನಗೊಂದು ಅವಕಾಶ ಕೊಡಿ ಎಂದ ಮೋಹನ್ ಲಾಲ್

- “ನನಗೊಂದು ಅವಕಾಶ ಕೊಡಿ. ನಾನೇನು ಕೆಟ್ಟ ನಟನಲ್ಲ“
- ಅವಕಾಶ ಕೊಡಿ ಎಂದು ಮೋಹನ್ ಲಾಲ್ ಬೇಡಿಕೆ ಇಟ್ಟಿದ್ಯಾಕೆ..?
- ‘ಕಾಂತಾರ – ಅಧ್ಯಾಯ 1’ ರಲ್ಲಿ ನಟಿಸುತ್ತಾರಾ ಮೋಹನ್ ಲಾಲ್?
ರಿಷಭ್ ಶೆಟ್ಟಿ (Rishab Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ (Kantara Chapter 1) ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ (Mohanlal) ನಟಿಸುತ್ತಿರುವ ಸಾಧ್ಯತೆ ಇದೆ ಎಂದು ಕೆಲವು ದಿನಗಳ ಹಿಂದೆ ಸುದ್ದಿಯೊಂದು ಕೇಳಿಬಂದಿತ್ತು. ನಿಜಕ್ಕೂ ಆ ಚಿತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಿದ್ದಾರಾ? ಎಂಬ ಪ್ರಶ್ನೆಗೆ, ‘ನನಗೆ ಗೊತ್ತಿಲ್ಲ. ನನಗೊಂದು ಅವಕಾಶ ಕೊಡಿ. ನಾನೇನು ಕೆಟ್ಟ ನಟನಲ್ಲ. ನನಗೊಂದು ಪಾತ್ರ ಕೊಡಿ’ ಎಂದು ಮೋಹನ್ ಲಾಲ್ ಹೇಳಿದ್ದಾರೆ.
ಈ ವರ್ಷದ ಬಹುನಿರೀಕ್ಷಿತ ಮಲಯಾಳಂ ಚಿತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ‘L2E: ಎಂಪುರಾನ್’ ಚಿತ್ರ ಸಹ ಒಂದು. 2019ರಲ್ಲಿ ಬಿಡುಗಡೆಯಾದ ‘ಲೂಸಿಫರ್’ ಚಿತ್ರದ ಮುಂದುವರೆದ ಭಾಗವಾದ ‘L2E: ಎಂಪುರಾನ್’, ಮಾರ್ಚ್ 27ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆಯು ವಿತರಿಸುತ್ತಿದೆ.
ಈ ಚಿತ್ರದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಟೋವಿನೋ ಥಾಮಸ್, ಮಂಜು ವಾರಿಯರ್, ಇಂದ್ರಜಿತ್ ಸುಕುಮಾರನ್, ಅಭಿಮನ್ಯು ಸಿಂಗ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡವು ಬುಧವಾರ ಬೆಂಗಳೂರಿಗೆ ಬಂದಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ಲಾಲ್, ‘ಕಳೆದ 50 ವರ್ಷಗಳಿಂದ ಹಲವು ಚಿತ್ರಗಳನ್ನು ಮಾಡಿದ್ದೇನೆ. ಕನ್ನಡದಲ್ಲೂ ಚಿತ್ರಗಳಲ್ಲಿ ನಟಿಸಿದ್ದೇನೆ. ಡಾ. ರಾಜಕುಮಾರ್ ಕುಟುಂಬ, ವಿಷ್ಣುವರ್ಧನ್, ಸುದೀಪ್ ಮುಂತಾದವರ ಜೊತೆಗೆ ಒಳ್ಳೆಯ ಒಡನಾಟವಿದೆ. ಇದು ‘ಲೂಸಿಫರ್’ ಚಿತ್ರದ ಸೀಕ್ವೆಲ್ ಎನ್ನುವುದಕ್ಕಿಂತ, ಇದೊಂದು ಪ್ರಪಂಚ ಎನ್ನಬಹುದು. ಇದೊಂದು ಕಾದಂಬರಿ ಇದ್ದಂತೆ. ಇದನ್ನು ಒಂದು ಸಿನಿಮಾ ಮಾಡುವುದಕ್ಕೆ ಸಾಧ್ಯವಿಲ್ಲ. ಇದರಲ್ಲಿ ಮೂರು ಚಿತ್ರಗಳಿದ್ದು, ಇದು ಎರಡನೆಯ ಚಿತ್ರ. ಇದಲ್ಲದೆ ಇನ್ನೊಂದು ಚಿತ್ರವಿದೆ. ಇದರ ಯಶಸ್ಸಿನಿಂದ ಮೂರನೆಯ ಚಿತ್ರ ಅವಲಂಬಿತವಾಗಿದೆ. ‘ಲೂಸಿಫರ್’ ಗೆದ್ದಿದ್ದರಿಂದ ಈ ಚಿತ್ರ ಮಾಡಿದ್ದೇವೆ. ಮೂರನೆಯದು ಬರಬೇಕೆಂದರೆ, ಇದು ಗೆಲ್ಲಬೇಕು. ಈ ಚಿತ್ರಕ್ಕೆ ಪ್ರಪಂಚದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಎಲ್ಲರೂ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ನಮ್ಮನ್ನು ನಂಬಿದ್ದಕ್ಕೆ ಧನ್ಯವಾದಗಳು.
‘L2E: ಎಂಪುರಾನ್’ ಚಿತ್ರವು ರಾಜ್ಯಾದ್ಯಂತ 1350 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಮಲಯಾಳಂ ಚಿತ್ರವೊಂದು ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಮುಂಗಡ ಬುಕಿಂಗ್ ಶುರುವಾಗಿದ್ದು, 200ಕ್ಕೂ ಹೆಚ್ಚು ಪ್ರದರ್ಶನಗಳು ಹೌಸ್‍ಫುಲ್ ಆಗಿವೆ.
(Recent reports have speculated that Malayalam superstar Mohanlal might portray the father of Rishab Shetty’s character in the upcoming Kannada film “Kantara: Chapter 1.” However, as of now, there has been no official confirmation regarding Mohanlal’s involvement in the project. Fans are eagerly awaiting an official announcement to clarify these casting rumors.)
One thought on “Mohanlal; ನಾನು ಕೆಟ್ಟ ನಟ ಅಲ್ಲ, ನನಗೊಂದು ಅವಕಾಶ ಕೊಡಿ ಎಂದ ಮೋಹನ್ ಲಾಲ್”