Duniya Vijay as Landlord: ಭೀಮ ಈಗ ‘ಲ್ಯಾಂಡ್ ಲಾರ್ಡ್’; ‘ಕಾಟೇರ’ ನಿರ್ದೇಶಕರಿಂದ ಭೂ ಒಡೆತನದ ಹೋರಾಟದ ಕಥೆ

ದುನಿಯಾ ವಿಜಯ್ ಜನ್ಮದಿನದಂದು ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಭೀಮ ಚಿತ್ರದ ಯಶಸ್ಸಿನ ನಂತರ ವಿಜಯ್ ಅವರೇ ಮತ್ತೊಂದು ಸಿನಿಮಾ ತಮಗೆ ತಾವೇ ನಿರ್ದೇಶಿಸಿಕೊಳ್ಳುತ್ತಾರೆ ಎಂಬ ಮಾತು ಗಾಂಧೀನಗರದಲ್ಲಿತ್ತು. ಆದರೆ, ದರ್ಶನ್‌ಗೆ ಕಾಟೇರ ಮಾಡಿದ ಜಡೇಶ್ ಹಂಪಿ ಅವರು ದುನಿಯಾ ವಿಜಯ್ ಅವರ 29ನೇ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ಲ್ಯಾಂಡ್ ಲಾರ್ಡ್’ ಎಂದು ಹೆಸರಿಡಲಾಗಿದೆ. ವಿಜಯ್ ಹುಟ್ಟು ಹಬ್ಬದಂದು ಟೈಟಲ್ ರಿವಿಲ್ ಮಾಡಲಾಗಿದೆ.

ರಾಚಯ್ಯ ಎಂಬ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಹಾಡು ಮತ್ತು ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಬಾಕಿ ಇದ್ದು ಉಳಿದಂತೆ ಶೇಕಡ 70ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. 2025 ಆಗಸ್ಟ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಲ್ಲದೆ ಸಿನಿ ತಂಡ. ಇದು ಯಾವುದೇ ಹೋರಾಟ ಅಥವಾ ಭೂಮಿಗೆ ಸಂಬಂಧಿಸಿದ ಕಥೆಯಲ್ಲ. ಭೂಮಿ ಒಡೆಯನಾಗಬೇಕೆಂದು ಹೊರಟವನ ಕಥೆ. ಅಪ್ಪ–ಮಗಳ ಭಾವನಾತ್ಮಕ ಸನ್ನಿವೇಶಗಳನ್ನು ಹೊಂದಿರುವ ಚಿತ್ರ’ ಎಂದು ನಿರ್ದೇಶಕ ಜಡೇಶ್ ಹೇಳಿದ್ದಾರೆ.
‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎಂಬ ಟ್ಯಾಗ್‌ಲೈನ್ ಹೊಂದಿದೆ. ದೇವಾಲಯದ ಎದುರು ದೇವರ ರಥವೊಂದು ಹೊತ್ತಿ ಉರಿಯುತ್ತಿರುವ ಪೋಸ್ಟರ್ ಅನ್ನು ಚಿತ್ರತಂಡ ಈ ಹಿಂದೆ ಹಂಚಿಕೊಂಡಿತ್ತು.
ಈ ಚಿತ್ರದಲ್ಲಿ ವಿಜಯ್‌ಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ. ದುನಿಯಾ ವಿಜಯ್ ಅವರ ಮಗಳಾಗಿ ಮೋನಿಕಾ ನಟಿಸಿದ್ದಾರೆ. ಉಮಾಶ್ರೀ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಬಿ.ಸುರೇಶ್ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ‘ಸಾರಥಿ’ ಸಿನಿಮಾದ ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
(Challenging Star Darshan’s film director, Jadesh Kumar Hampi, has announced his next project. Jadesh is now working on a new movie starring Duniya Vijay. The film’s title, Landlord, was officially revealed on the occasion of Duniya Vijay’s birthday.)