Duniya Vijay; ನಯನತಾರಾ ಎದುರು ವಿಲನ್‍ ಆದ ‘ದುನಿಯಾ’ ವಿಜಯ್‍; ತಮಿಳು ಚಿತ್ರದಲ್ಲಿ ನಟನೆ

ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಬ್ಯುಸಿಯಾಗಿರುವ ನಟ ಎಂದರೆ ಅದು ‘ದುನಿಯಾ’ ವಿಜಯ್‍. ಸದ್ಯ ಅವರು, ‘ಲ್ಯಾಂಡ್‍ ಲಾರ್ಡ್‍’ ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣ ಇನ್ನಷ್ಟೇ ಮುಗಿಯಬೇಕಿದೆ. ಇದರ ಜೊತೆಗೆ ‘ಸಿಟಿ ಲೈಟ್ಸ್’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿನಯ್‍ ರಾಜಕುಮಾರ್‍ ಮತ್ತು ವಿಜಯ್‍ ಮಗಳು ಮೊನೀಷಾ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ, ವಿಜಯ್‍ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

ವಿಶೇಷವೆಂದರೆ, ವಿಜಯ್‍ ಈ ಬಾರಿ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಹೋಗಿದ್ದ ‘ದುನಿಯಾ’ ವಿಜಯ್‍, ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್‍ 2’ ಚಿತ್ರದಲ್ಲಿ ಅವರು ವಿಲನ್‍ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

2020ರಲ್ಲಿ ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್‍’ ಚಿತ್ರವು ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಈಗ ‘ಮೂಕುತಿ ಅಮ್ಮನ್‍ 2’ ಎಂಬ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರವನ್ನು ಸಿ. ಸುಂದರ್‍ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ನಯನತಾರಾ, ರೆಜಿನಾ ಕಸಾಂಡ್ರ, ವಿಜಯ್‍ ಮುಂತಾದವರು ನಟಿಸುತ್ತಿದ್ದಾರೆ. ತೆಲುಗು ಚಿತ್ರದಲ್ಲಿ ವಿಲನ್‍ ಆಗಿ ನಟಿಸಿದ್ದ ವಿಜಯ್‍, ಈಗ ತಮಿಳು ಚಿತ್ರದಲ್ಲೂ ವಿಲನ್‍ ಆಗಿ ನಟಿಸುತ್ತಿದ್ದಾರೆ.

‘ಮೂಕುತಿ ಅಮ್ಮನ್‍ 2’ ಚಿತ್ರದ ಮುಹೂರ್ತ, ಶುಕ್ರವಾರ ಚೆನ್ನೈನಲ್ಲಿ ನಡೆದಿದೆ. ಈ ಮುಹೂರ್ತದಲ್ಲಿ ವಿಜಯ್‍ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಯನತಾರಾ, ಖುಷ್ಬೂ, ಮೀನಾ, ರೆಜಿನಾ, ಯೋಗಿ ಬಾಬು, ಸುಂದರ್‍ ಸಿ ಮುಂತಾದವರು ಭಾಗವಹಿಸಿದ್ದರು.

(Kannada actor and director Duniya Vijay, recently made his Telugu debut with Veera Simha Reddy will be debuting in Tamil with the upcoming sequel in which he plays the antagonist)

Leave a Reply

Your email address will not be published. Required fields are marked *