Doora Theera Yaana; ಮಂಸೋರೆ ಕಡೆಯಿಂದ ದೂರ ಪ್ರಯಾಣಕ್ಕೊಂದು ಹಾಡು …

ಕಳೆದ ವರ್ಷ ‘ದೂರ ತೀರ ಯಾನ’ (Doora Theera Yaana) ಚಿತ್ರವನ್ನು ಪ್ರಾರಂಭಿಸಿದ್ದ ನಿರ್ದೇಶಕ ಮಂಸೋರೆ (Mansore), ಈ ವರ್ಷ ಜುಲೈ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ‘ದೂರ ತೀರ ಯಾನ’ ಚಿತ್ರವು ಜುಲೈ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರ ಪ್ರಾರಂಭವಾಗಿದೆ.
ಮೊದಲ ಹಂತವಾಗಿ ಚಿತ್ರದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನವೀನ್ ಶಂಕರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. MRT ಮ್ಯೂಸಿಕ್ ಚಾನಲ್‍ನಲ್ಲಿ ಬಿಡುಗಡೆ ಮಾಡಲಾಗಿರುವ ‘ದೂರ ತೀರ ಯಾನ …’ ಎಂಬ ಹಾಡಿಗೆ ಸಂಗೀತ ನಿರ್ದೇಶಕ ಬಕ್ಕೇಶ್ ಮತ್ತು ಈಶ ಸುಚಿ ಧ್ವನಿಯಾಗಿದ್ದಾರೆ. ಕಿರಣ್ ಕಾವೇರಪ್ಪ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಇದು ಪ್ರಯಾಣಕ್ಕೆ ಹೇಳಿ ಮಾಡಿಸಿದ ಹಾಡು ಎನ್ನುವ ಮಂಸೋರೆ, ‘ಪ್ರಯಾಣ ಮಾಡುವಾಗ ನಾವು ಹಲವು ಹಾಡುಗಳನ್ನು ಕೇಳುತ್ತಿರುತ್ತೇವೆ. ಪ್ರಯಾಣಕ್ಕೆಂದೇ ಒಂದು ಹಾಡು ಬೇಕಿತ್ತು. ಇದು ನನಗಾಗಿ ಮಾಡಿಕೊಂಡ ಹಾಡು. ಈ ಹಾಡು ನನಗೆ ವೈಯಕ್ತಿಕವಾಗಿ ಬಹಳ ಖುಷಿಕೊಟ್ಟಿದೆ. ಸಾಮಾನ್ಯವಾಗಿ ಪ್ರೀ-ಕ್ಲೈಮ್ಯಾಕ್ಸ್ನಲ್ಲಿ ಡ್ರಾಮಾ ಅಥವಾ ಫೈಟ್ ಇರುತ್ತದೆ. ನಮ್ಮ ಚಿತ್ರದಲ್ಲಿ ಈ ಹಾಡು ಬರುತ್ತದೆ’ ಎಂದರು.
ಕನ್ನಡ ಚಿತ್ರರಂಗಕ್ಕೆ ಒಂದು ಬದಲಾವಣೆಯ ಅವಶ್ಯಕತೆ ಇದೆ ಎನ್ನುವ ಮಂಸೋರೆ, ‘ಈ ಚಿತ್ರದ ಮೂಲಕ ನಮ್ಮ ಗುರುತನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ. ಕನ್ನಡ ಚಿತ್ರರಂಗ ಬೇರೆ ರೀತಿಯಲ್ಲಿ ಪುನಃ ತನ್ನ ಗುರುತನ್ನು ಸ್ಥಾಪಿಸಬೇಕು, ನಮ್ಮ ಸೊಗಡನ್ನು ತೋರಿಸಬೇಕು. ಆ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ನಮ್ಮ ಚಿತ್ರದ ಹಾಡುಗಳಲ್ಲಿ ಒಂದೇ ಒಂದು ಇಂಗ್ಲಿಷ್ ಪದ ಬಳಸದೇ ಹಾಡುಗಳನ್ನು ಮಾಡಿದ್ದೇವೆ’ ಎಂದರು.
‘ದೂರ ತೀರ ಯಾನ’ ಚಿತ್ರದಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ರೋಣದ ಬಕ್ಕೇಶ್ ಸಂಗೀತವಿದೆ. ಒಟ್ಟು ಆರು ಹಾಡುಗಳು ಮತ್ತು ಎರಡು ಬಿಟ್‍ಗಳಿವೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
Secondary school math tuition іs essential in Singapore, offering structured support fߋr your child’s secondary journey. Υou know lah, Singapore…
anavar steroid results References: https://maps.google.no/
d ball steroid for sale References: https://u.to
It’s very straightforward to find out any topic on web as compared to books, as I found this paragraph at…
Anavar is a popular anabolic steroid used by bodybuilders and athletes to increase muscle mass, strength, and overall performance. While…
One thought on “Doora Theera Yaana; ಮಂಸೋರೆ ಕಡೆಯಿಂದ ದೂರ ಪ್ರಯಾಣಕ್ಕೊಂದು ಹಾಡು …”