‘ನಾತಿಚರಾಮಿ’ಯ ಗೌರಿ ಈಗ ‘Doora Teera Yana’ದಲ್ಲಿ …
ಮಂಸೋರೆ (Manso Re) ನಿರ್ದೇಶನದ ‘ದೂರ ತೀರ ಯಾನ’ (Doora Teera Yana) ಚಿತ್ರವು ಜುಲೈ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಮಿಕ್ಕಂತೆ ಉಳಿದ ತಾರಾಬಳಗವನ್ನು ಮಂಸೋರೆ ಗೌಪ್ಯವಾಗಿಟ್ಟಿದ್ದರು. ಈಗ ಚಿತ್ರದ ಇನ್ನೊಬ್ಬ ಪಾತ್ರಧಾರಿಯನ್ನು ಅವರು ಮೊದಲ ಬಾರಿಗೆ ಪರಿಚಯಿಸಿದ್ದಾರೆ.

‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ಹರಿಹರನ್ (Sruthi Hariharan) ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಶ್ರುತಿ, ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಚಿತ್ರದಲ್ಲಿ ಗೌರಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಈ ಚಿತ್ರವು ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇದು ಕೇವಲ ಪ್ರಶಸ್ತಿಯ ಕಾರಣಕಷ್ಟೇ ಅಲ್ಲದೇ, ಈ ಸಿನಿಮಾದ ಕಥಾವಸ್ತುವೂ ಸಾಕಷ್ಟು ಚರ್ಚಿತವಾಗಿತ್ತು. ಈಗ ಕೆಲವು ವರ್ಷಗಳ ನಂತರ ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ನಟಿಸಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಅವರು ಗೌರಿ ಪಾತ್ರವನ್ನು ಈ ಚಿತ್ರದಲ್ಲೂ ಮುಂದುವರೆಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಿರ್ದೇಶಕರು ತಮ್ಮದೇ ಸಿನಿಮಾದ ಪಾತ್ರಗಳನ್ನು ಮತ್ತೊಂದು ಸಿನಿಮಾದಲ್ಲಿ ತರುವುದರ ಮೂಲಕ ತಮ್ಮದೇ ಆದ ಸಿನಿಮಾ ಪ್ರಪಂಚವನ್ನು ಸೃಷ್ಟಿಸಿರುವುದು ಅಪರೂಪ. ಅಂತಹ ಪ್ರಯೋಗವನ್ನು ಮಂಸೋರೆ, ‘ದೂರ ತೀರ ಯಾನ’ ಚಿತ್ರದಲ್ಲಿ ಮಾಡುತ್ತಿದ್ದಾರೆ.
‘ದೂರ ತೀರ ಯಾನ’ ಚಿತ್ರವು ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣ ಪತ್ರ ಪಡೆದಿದ್ದು, ಬಿಡುಗಡೆಗೆ ಅಣಿಯಾಗುತ್ತಿದೆ. ಜೂನ್ 28ರ ಶನಿವಾರ, ಈ ಚಿತ್ರದ ಟ್ರೇಲರನ್ನು ಸುದೀಪ್, ಬೆಳಗ್ಗೆ 11 ಗಂಟೆಗೆ ಅನಾವರಣಗೊಳಿಸಲಿದ್ದಾರೆ.
‘ದೂರ ತೀರ ಯಾನ’ ಚಿತ್ರವನ್ನು ಡಿ ಕ್ರಿಯೇಷನ್ಸ್ ಬ್ಯಾನರ್‍ನಡಿ ದೇವರಾಜ್ ನಿರ್ಮಿಸುತ್ತಿದ್ದು, ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಂಸೋರೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಬಕ್ಕೇಶ್ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದನ್ನೂ ಓದಿ:-
ಓದು ಮುಂದುವರೆಸಿ ಇಲ್ಲಿ..
کراتین مای پروتئین یک کیلویی، یکی از محبوبترین و بهترین مکملهای کراتین در جهان است که به دلیل خلوص و…
Chào mừng bạn đến với E28BET – Trang Web Cờ Bạc Trực Tuyến Số 1 Châu Á Thái Bình Dương.…
کراتین مای پروتئین یک کیلویی، یکی از محبوبترین و بهترین مکملهای کراتین در جهان است که به دلیل خلوص و…
کراتین مای پروتئین یک کیلویی، یکی از محبوبترین و بهترین مکملهای کراتین در جهان است که به دلیل خلوص و…
Nel frattempo ti segnaliamo che puoi provare alcune delle slot Red Tiger (come Thor’s Lightning, Ninja Ways e Mystery Reels)…





**mindvault**
mindvault is a premium cognitive support formula created for adults 45+. It’s thoughtfully designed to help maintain clear thinking