Brat Tiltle Launch: ಕೃಷ್ಣ ಎಂಬ ‘ಬ್ರ್ಯಾಟ್’; ಪ್ಯಾನ್ ಇಂಡಿಯಾ ಸಿನಿಮಾದೊಂದಿಗೆ ಬಂದ ಶಶಾಂಕ್

- ‘ಬ್ರ್ಯಾಟ್’ ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ ಚಿತ್ರ
- ಪ್ಯಾನ್ ಇಂಡಿಯಾ ಸಿನಿಮಾದೊಂದಿಗೆ ಬಂದ ಶಶಾಂಕ್
- ಟೈಟಲ್ ಸಾಂಗ್ ರಾಹುಲ್ ಡಿಟ್-ಓ ಕಂಠ
‘ಡಾರ್ಲಿಂಗ್’ ಕೃಷ್ಣ (Darling Krishna) ಅಭಿನಯದಲ್ಲಿ ಇನ್ನೊಂದು ಚಿತ್ರವನ್ನು ಮಾಡುತ್ತಿರುವುದಾಗಿ ನಿರ್ದೇಶಕ ಶಶಾಂಕ್ (Shashank) ಕಳೆದ ವರ್ಷವೇ ಘೋಷಿಸಿದ್ದರು. ಆದರೆ, ಆ ಚಿತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿ, ಮಾಧ್ಯಮದವರೆದುರು ಬಂದಿದ್ದಾರೆ ಶಶಾಂಕ್. ಈ ಚಿತ್ರದ ಶೀರ್ಷಿಕೆ ಅನಾವರಣ ಶುಕ್ರವಾರ ಆಗಿದೆ. (Brat Tiltle Launch)

ಶಶಾಂಕ್ ನಿರ್ದೇಶನದ ಹೊಸ ಚಿತ್ರದ ಹೆಸರು ‘ಬ್ರ್ಯಾಟ್’. ಶೀರ್ಷಿಕೆ ಅನಾವರಣ ಮಾಡುವುದರ ಜೊತೆಗೆ, ಚಿತ್ರದ ಸಾರವನ್ನು ಹೇಳುವ ಹಾಡನ್ನು ಆನಂದ್ ಆಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ರಾಹುಲ್ ಡಿಟ್-ಓ (Rahul Dit-o) ಬರೆದು ಹಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದೂ ಭಾಷೆಗಳ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಇದು ಇವತ್ತಿನ ತಲೆಮಾರಿನ ಯುವಕರ ಕಥೆ ಎನ್ನುವ ಶಶಾಂಕ್, ‘ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರ. ಇವತ್ತಿನ ತಲೆಮಾರಿನ ಯುವಕರ ಕಥೆ. ಈ ಬ್ರ್ಯಾಟ್ ಎನ್ನುವ ಪಾತ್ರ, ಇವತ್ತಿನ ತಲೆಮಾರಿನ ಯುವಕರಿಗೆ ಕನೆಕ್ಟ್ ಆಗುವಂತಹ ಪಾತ್ರ. ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕೃಷ್ಣ ಅವರ ತಂದೆಯ ಪಾತ್ರ ಮಾಡಿದ್ದಾರೆ. ಇದು ತಂದೆ-ಮಗನ ಸಂಘರ್ಷ ಕುರಿತಾದ ಚಿತ್ರ. ಈ ಸಂಘರ್ಷದಲ್ಲಿ ಹಲವು ವಿಷಯಗಳು ಬಂದು ಹೋಗುತ್ತವೆ. ಇಲ್ಲಿ ತಂದೆಯ ದೃಷ್ಟಿಯಲ್ಲಿ ಮಗ ‘ಬ್ರ್ಯಾಟ್’ ಆಗಿರುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಕಥೆ. ಹಾಗಾಗಿ, ಈ ಶೀರ್ಷಿಕೆಯನ್ನು ಇಟ್ಟಿದ್ದೇವೆ’ ಎಂದರು.
ಇದುವರೆಗೂ ಈ ಜಾನರ್‍ನ ಚಿತ್ರ ಮಾಡಿರಲಿಲ್ಲ ಎನ್ನುವ ಶಶಾಂಕ್, ‘ನಾನು, ಕೃಷ್ಣ ಇಬ್ಬರೂ ಈ ತರಹದ ಚಿತ್ರ ಮಾಡಿರಲಿಲ್ಲ. ಈ ಶೈಲಿಯ ಚಿತ್ರ ಇಬ್ಬರಿಗೂ ಹೊಸತು. ನನ್ನ ಪ್ರತಿ ಸಿನಿಮಾದಲ್ಲೂ ಏನಾದರೂ ವಿಶೇಷವಾಗಿರಬೇಕು ಎಂದು ಪ್ರಯತ್ನಪಡುತ್ತೇನೆ. ಬೇರೆ ಬೇರೆ ಜಾನರ್ ಚಿತ್ರಗಳನ್ನು ಪ್ರಯತ್ನಿಸುತ್ತೇನೆ. ಒಂದೇ ತರಹ ಇದೆ ಎಂದನಿಸಬಾರದು’ ಎಂದರು.
‘ಬ್ರ್ಯಾಟ್’ (Brat) ಚಿತ್ರದಲ್ಲಿ ಕೃಷ್ಣ ಜೊತೆಗೆ ಮನೀಷಾ, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣವಿದೆ. ಈ ಹಿಂದೆ ‘First Rank ರಾಜು’ ಚಿತ್ರವನ್ನು ನಿರ್ಮಿಸಿದ್ದ ಮಂಜುನಾಥ್ ಕುಂದಕೂರು ‘ಬ್ರ್ಯಾಟ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
(Director Shashank has announced his latest film, Brat, featuring Darling Krishna in the lead role. This action thriller centers on Christy, portrayed by Krishna, and delves into the complexities of a father-son relationship, with Achyuth Kumar playing the father. The film is approximately 80% complete and aims for a release across multiple languages, including Kannada, Tamil, Telugu, Malayalam, and Hindi.)
2 thoughts on “Brat Tiltle Launch: ಕೃಷ್ಣ ಎಂಬ ‘ಬ್ರ್ಯಾಟ್’; ಪ್ಯಾನ್ ಇಂಡಿಯಾ ಸಿನಿಮಾದೊಂದಿಗೆ ಬಂದ ಶಶಾಂಕ್”