‘Daiji’ ಚಿತ್ರಕ್ಕೆ ದಿಗಂತ್‍ ಎಂಟ್ರಿ; Ramesh Aravind ಸಹೋದರನ ಪಾತ್ರದಲ್ಲಿ ನಟನೆ

daiji ramesh aravind

ದಿಗಂತ್‍ ಇತ್ತೀಚಿನ ದಿನಗಳಲ್ಲಿ ನಾಯಕನಾಗಿಯೂ ಅಲ್ಲದೆ, ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಉತ್ತರಕಾಂಡ’, ‘ಲಾಫಿಂಗ್‍ ಬುದ್ಧ’ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದೀಗ ರಮೇಶ್‍ ಅರವಿಂದ್‍ ಅಭಿನಯದ ‘ದೈಜಿ’ (Daiji) ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ರಮೇಶ್‍ ಅರವಿಂದ್‍ (Ramesh Aravind) ಅಭಿನಯದ 106ನೇ ಚಿತ್ರವಾದ ‘ದೈಜಿ’ ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿತ್ತು. ಈ ಚಿತ್ರಕ್ಕೆ ಇದೀಗ ದಿಗಂತ್‍ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಮೇಶ್ ಅರವಿಂದ್ ಅವರು ಸೂರ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ, ದಿಗಂತ್‍ ಈ ಚಿತ್ರದಲ್ಲಿ ಗಗನ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸತತವಾಗಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ ಶೇ. 50ರಷ್ಟು ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ.

ಈ ಹಿಂದೆ ರಮೇಶ್‍ ಅಭಿನಯದ ‘ಶಿವಾಜಿ ಸುರತ್ಕಲ್‍’ ಮತ್ತು ‘ಶಿವಾಜಿ ಸುರತ್ಕಲ್‍ 2’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಆಕಾಶ್‍ ಶ್ರೀವತ್ಸ, ಈ ಚಿತ್ರಕ್ಕೂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಧನಂಜಯ್‍ ಅಭಿನಯದ ‘ಬದ್ಮಾಶ್‍’, ‘ಸಾರಾಂಶ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ರವಿ ಕಶ್ಯಪ್‍, ‘ದೈಜಿ’ ಚಿತ್ರವನ್ನು ವಿಭಾ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಶ್ರೀಷ ಕೂದುವಳ್ಳಿ ಛಾಯಾಗ್ರಹಣವಿದೆ.

‘ಎಡಗೈ ಅಪಘಾತಕ್ಕೆ ಕಾರಣ’ ಎಂಬ ಚಿತ್ರದಲ್ಲಿ ದಿಗಂತ್‍ ಎಡಚನಾಗಿ ಅಭಿನಯಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಇದನ್ನೂ ಓದಿ:-


One thought on “‘Daiji’ ಚಿತ್ರಕ್ಕೆ ದಿಗಂತ್‍ ಎಂಟ್ರಿ; Ramesh Aravind ಸಹೋದರನ ಪಾತ್ರದಲ್ಲಿ ನಟನೆ

Leave a Reply

Your email address will not be published. Required fields are marked *