Dhruva Sarja ಅಭಿನಯದ ‘KD’ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ

ಈ ವರ್ಷದ ನಿರೀಕ್ಷೆಯ ಚಿತ್ರಗಳಲ್ಲೊಂದು ಧ್ರುವ ಸರ್ಜಾ(Dhruva Sarja) ಅಭಿನಯದ ಮತ್ತು ‘ಜೋಗಿ’ ಪ್ರೇಮ್‍ ನಿರ್ದೇಶನದ ‘ಕೆಡಿ – ದಿ ಡೆವಿಲ್‍’. ಎಲ್ಲಾ ಅಂದುಕೊಂಡಂತೆ ಆದರೆ, ಚಿತ್ರವು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರ ಬಿಡುಗಡೆಯಾಗಲಿಲ್ಲ. ಇಷ್ಟಕ್ಕೂ ಚಿತ್ರದ ರಿಲೀಸ್‍ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಈಗ ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ಪ್ರೇಮ್‍, ಚಿತ್ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ‘ಕೆಡಿ – ದಿ ಡೆವಿಲ್‍’ ಚಿತ್ರದ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮುಂಬೈ, ಚೆನ್ನೈ, ಹೈದರಾಬಾದ್‍ ಮತ್ತು ಕೊಚ್ಚಿಯಲ್ಲಿ ನಡೆದ ಸಮಾರಂಭಗಳಲ್ಲಿ ಆಯಾ ಭಾಷೆಯ ಟೀಸರ್‍ ಬಿಡುಗಡೆಯಾಗಿವೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರೇಮ್‍ ಬಿಡುಗಡೆಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಸಮಾರಂಭದಲ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಂಜಯ್‍ ದತ್‍ ಮತ್ತು ಶಿಲ್ಪಾ ಶೆಟ್ಟಿ ಸಹ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೇಮ್‍, ‘ನಿರ್ಮಾಣದ ವಿಷಯದಲ್ಲಿ ಕೆವಿಎನ್ ಸಂಸ್ಥೆ ಯಾವುದಕ್ಕೂ ಕೊರತೆ ಮಾಡಿಲ್ಲ.  ನಿರ್ಮಾಪಕರೇ ನಮ್ಮ  ಚಿತ್ರದ ನಿಜವಾದ ಹೀರೋ. ನಿರ್ಮಪಕರಿಗೆ ನಮ್ಮ ಸಿನಿಮಾನ ಹೇಗೆ ತೆಗೆದುಕೊಂಡು ಹೋಗಬೇಕು ಎನ್ನುವ ಕನಸಿರಬೇಕು. ಅವರ ಸಿನಿಮಾ ಪ್ರೀತಿಗೆ ಧನ್ಯವಾದ. ಇದು 1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ.

ಕೆಡಿ ಅಂದ್ರೆ ಕಾಳಿದಾಸ, ಈತ ಎಷ್ಟು ಮುಗ್ಧನೋ, ಅಷ್ಟೇ ರಾ ಆಗಿರುತ್ತಾನೆ. 1970ರ ದಶಕದಲ್ಲಿದ್ದ ಬೆಂಗಳೂರಿನ ಸೆಟ್ಟನ್ನು ಮೋಹನ್ ಬಿ.ಕೆರೆ ಅವರು 18 ಎಕರೆ ಪ್ರದೇಶದಲ್ಲಿ ಹಾಕಿಕೊಟ್ಟಿದ್ದಾರೆ. ಅರ್ಜುನ್ ಜನ್ಯ ಅದ್ಭುತವಾದ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಒಟ್ಟು 160 ರಿಂದ 180 ದಿನಗಳವರೆಗೆ  ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಇನ್ನು ಮೂರು ತಿಂಗಳಲ್ಲಿ ಬಿಡುಗಡೆಯಾಗಲಿದೆ’ ಎಂದರು.

ಈ ಚಿತ್ರದ ನಿಜವಾದ ಹೀರೋ ಪ್ರೇಮ್‍ ಎನ್ನುವ ಧ್ರುವ ಸರ್ಜಾ, ‘ಇಷ್ಟು ದೊಡ್ಡ ಕಲಾವಿದರ ಜೊತೆಗೆ ನಟಿಸುವ ಅವಕಾಶ ಕೊಟ್ಟ ಕೆ.ವಿ.ಎನ್ ಸಂಸ್ಥೆಗೆ ಧನ್ಯವಾದ. ಸಂಜು ಬಾಬಾ, ಶಿಲ್ಪಾ ಶೆಟ್ಟಿ ಅವರ ಜತೆ ತುಂಬಾ ಕಲಿತೆ. ನಮ್ಮ ಸಿನಿಮಾದ ನಿಜವಾದ ಹೀರೋ ಅಂದರೆ ನಿರ್ದೇಶಕ ಪ್ರೇಮ್. ಅವರದ್ದು ಒಂಥರಾ ಅತೃಪ್ತ ಆತ್ಮ. ಅವರನ್ನು ತೃಪ್ತಿಪಡಿಸೋಕೆ ಸಾಧ್ಯವಿಲ್ಲ. ಏನು ಮಾಡಿದರೂ ಒನ್‍ ಮೋರ್‍ ಎನ್ನುತ್ತಾರೆ’ ಎಂದರು.

‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್‍ ಛಾಯಾಗ್ರಹಣ ಚಿತ್ರಕ್ಕಿದೆ.


ಹೆಚ್ಚಿನ ಓದಿಗಾಗಿ:

Leave a Reply

Your email address will not be published. Required fields are marked *

ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ ಕನ್ನಡಕ್ಕೆ ವಾಪಸ್ಸಾದ ‘ಜಿಂಕೆ ಮರಿ’ಯ ನಂದಿತಾ ಶ್ವೇತಾ ಮಗಳ ಜೊತೆ ಮಿಲನಾ ನಾಗರಾಜ್‌