Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ವಾನದ ಸುತ್ತ ಸುತ್ತವ ‘777 ಚಾರ್ಲಿ’ ಮತ್ತು ‘ನಾನು ಮತ್ತು ಗುಂಡ’ ಚಿತ್ರಗಳು ಬಿಡುಗಡೆಯಾಗಿವೆ. ಸದ್ಯದಲ್ಲೇ ‘ನಾನು ಮತ್ತು ಗುಂಡ 2’ ಚಿತ್ರಗಳು ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಎಂಬ ಇನ್ನೊಂದು ಚಿತ್ರ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.
ಒಂದಿಷ್ಟು ಹೊಸಬರು ಸೇರಿಕೊಂಡು ಉತ್ತರ ಕರ್ನಾಟದ ಜವಾರಿ ಭಾಷೆಯಲ್ಲೊಂದು ‘ಪಪ್ಪಿ’ (Puppy) ಎಂಬ ಸಿನಿಮಾ ಮಾಡಿದ್ದು, ಈ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದೆ. ಈ ಚಿತ್ರ್ಕೆಕ್ಕೆ ಇದೀಗ ಧ್ರುವ ಸರ್ಜಾ ಬೆಂಬಲ ನೀಡಿದ್ದು, ಚಿತ್ರ ಮೇ 01ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಈ ಹಿಂದೆ ‘ಫಸ್ಟ್ ಲವ್’ ಎಂಬ ಚಿತ್ರ ಮಾಡಿದ್ದ ಆಯುಷ್ ಮಲ್ಲಿ ಸಾರಥ್ಯದಲ್ಲಿ ಮೂಡಿಬಂದಿರುವ ಚಿತ್ರವೇ ‘ಪಪ್ಪಿ’. ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ಪಪ್ಪಿ ಚಿತ್ರವನ್ನು ಧ್ರುವ ಸರ್ಜಾ ಅರ್ಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಪತ್ರಿಕಗೋಷ್ಠಿಯಲ್ಲಿ ಚಿತ್ರದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ಪಪ್ಪಿ’ ಚಿತ್ರದ ಕುರಿತು ಮಾತನಾಡಿದ ಧ್ರುವ ಸರ್ಜಾ, ‘ಈ ಚಿತ್ರವನ್ನು ನಾನು ನೋಡಿದ್ದೇನೆ. ಜಗದೀಶ್ ಹಾಗೂ ಆದಿತ್ಯ ಅವರು ತುಂಬಾ ಒಳ್ಳೆಯ ನಟರು. ರೇಣುಕಾ ಮೇಡಂ, ದುರ್ಗಪ್ಪ ಎಲ್ಲರೂ ನೈಜವಾಗಿ ನಟಿಸಿದ್ದಾರೆ. ಇವರೆಲ್ಲರೂ ಇಷ್ಟು ಚೆನ್ನಾಗಿ ನಟಿಸಿದ್ದಾರೆ ಎಂದರೆ ಕಾರಣಕರ್ತ ನಿರ್ದೇಶಕರು. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ. ಎಲ್ಲಾ ಹೊಸ ಪ್ರತಿಭೆಗಳನ್ನು ಕನ್ನಡಾಭಿಮಾನಿಗಳು ಕೈಬಿಡಬೇಡಿ. ಇಡೀ ‘ಪಪ್ಪಿ’ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.

ನಿರ್ದೇಶಕರಾದ ಆಯುಷ್ ಮಲ್ಲಿ ಮಾತನಾಡಿ, ‘’ಪಪ್ಪಿ’ ಟ್ರೇಲರ್ ಅರ್ಗನಿಕ್ ಆಗಿ ಎಲ್ಲ ಕಡೆ ತಲುಪಿದೆ. ನಾವು ಯಾವುದೇ ರೀತಿ ಬೂಸ್ಟ್ ಮಾಡಿಲ್ಲ. ಟ್ರೇಲರ್ ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ. ಟ್ರೇಲರ್ ರಿಲೀಸ್ ಆದ ಬಳಿಕ ಧ್ರುವ ಅಣ್ಣ ಕಡೆಯಿಂದ ಕಾಲ್ ಬಂತು. ‘ನಾನು ನಿನ್ನ ಜೊತೆಗೆ ಇರುತ್ತೇನೆ. ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರಬೇಕು. ಉತ್ತರ ಕರ್ನಾಟಕದವರು ಚಿತ್ರರಂಗಕ್ಕೆ ಬರಬೇಕು ಎಂದು ಎನರ್ಜಿ ತುಂಬಿದರು. ವಿನಯ್ ರಾಜಕುಮಾರ್, ರಮ್ಯಾ, ರಾಣಾ ದಗ್ಗುಭಾಟಿ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ರಾಜ್ ಬಿ. ಶೆಟ್ಟಿ ಅವರು ಕೂಡ ಟ್ರೇಲರ್ ನೋಡಿ ಇಷ್ಟಪಟ್ಟು, ಉತ್ತರ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಹೇಳಿದ್ದಾರೆ’ ಎಂದರು.
ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ಥಳೀಯ ಕಲಾವಿರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದೃಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಬಿ. ಸುರೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ.
ಹಾಸ್ಯದ ಜೊತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪಪ್ಪಿ’ಗೆ ಅಂದಪ್ಪ ಸಂಕನೂರು ಬಂಡವಾಳ ಹೂಡಿದ್ದಾರೆ. ಕೆ.ಆರ್.ಜಿ ಸ್ಟುಡಿಯೋಸ್ ‘ಪಪ್ಪಿ’ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
Покуреха порошки безвкусные (на язык), остальные горькие. Так проще всего определить. https://www.band.us/page/99926443/ уже ожидается что нибудь?
Hi there to all, as I am genuinely eager of reading this weblog’s post to be updated regularly. It consists…
I absolutely love your blog and find the majority of your post’s to be exactly what I’m looking for. Would…
Hi to all, for the reason that I am actually eager of reading this website’s post to be updated regularly.…
These are in fact impressive ideas in about blogging. You have touched some fastidious things here. Any way keep up…
One thought on “Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ”