Darshan Devil; ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ಚಿತ್ರೀಕರಣ ಪ್ರಾರಂಭ..!

ದರ್ಶನ್ ಅಭಿನಯದ ಕಾಟೇರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅದರ ಬೆನ್ನಲ್ಲೇ ಡಿ ಬಾಸ್ ದರ್ಶನ್ ‘ಡೆವಿಲ್- ದಿ ಹೀರೋ’ ಚಿತ್ರವನ್ನು ಒಪ್ಪಿಕೊಂಡಿದ್ದರು. ದರ್ಶನ ಅಭಿನಯ ಡೆವಿಲ್ ಚಿತ್ರದ ಮೇಲೆಯೂ ನಿರೀಕ್ಷೆ ಬಹಳಾ ಇತ್ತು. ಪ್ಯಾನ್ ಇಂಡಿಯಾ ಸಿನಿಮಗಳ ರೀತಿ ದೊಡ್ಡ ಮಟ್ಟದಲ್ಲಿ ನಿರ್ಮಾಣಕ್ಕೆ ಚಿಂತಿಸಲಾಗಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದಾಗಿ ಚಿತ್ರೀಕರಣ ನಿಂತಿತ್ತು.
ಈಗ ‘ಡೆವಿಲ್- ದಿ ಹೀರೋ’ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕ ಪ್ರಕಾಶ್ ವೀರ್ ಸಜ್ಜಾಗಿದ್ದಾರೆ. ಡೆವಿಲ್‌ನ ಚಿತ್ರೀಕರಣ 2024ರ ಮಾರ್ಚ್‌ನಲ್ಲಿ ಪ್ರಾರಂಭವಾಗಿತ್ತು. ಆದರೆ, ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರಿಂದ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು. ಮಾರ್ಚ್ 11 ರಿಂದ ಚಿತ್ರತಂಡ ಮತ್ತೆ ಮತ್ತೆ ಚಿತ್ರೀಕರಣಕ್ಕೆ ಮರಳಲಿದೆ ಎಂದು ಮೂಲಗಳು ದೃಢಪಡಿಸಿವೆ. ಬಳಿಕ ದರ್ಶನ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ದರ್ಶನ್ ಹುಟ್ಟುಹಬ್ಬದಂದು ಟೀಸರ್ ಒಂದನ್ನು ಚಿತ್ರ ತಂಡ ಬಿಡುಗಡೆ ಮಾಡಿತ್ತು, ಇದು ಅಭಿಮಾನಿಗಳಲ್ಲಿ ಕಾತರ ಹುಟ್ಟುಹಾಕಿದೆ. ಡೆವಿಲ್- ದಿ ಹೀರೋ ಚಿತ್ರದಲ್ಲಿ ಬಹುಭಾಷಾ ನಟ ಮಹೇಶ್ ಮಂಜ್ರೇಕರ್ ನಟಿಸುತ್ತಿದ್ದಾರೆ. ನಾಯಕಿಯಾಗಿ ರಚನಾ ರೈ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ತಾರಾಗಣದ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ತಾರಕ್ ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ಡೆವಿಲ್ ಚಿತ್ರದ ಮೂಲಕ ದರ್ಶನ್ ಜೊತೆ ಮತ್ತೆ ಒಂದಾಗಿದ್ದಾರೆ.
ಚಿತ್ರವನ್ನು ಜೈ ಮಾತಾ ಕಂಬೈನ್ಸ್ ಪ್ರಸ್ತುತಪಡಿಸುತ್ತಿದ್ದು, ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸುತ್ತಿದ್ದಾರೆ. ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಆಡಿಯೋ ಹಕ್ಕುಗಳು ಈಗಾಗಲೇ ಸರೆಗಮ ಮ್ಯೂಸಿಕ್ ಪಡೆದುಕೊಂಡಿದೆ.
(Darshan Devil to resume filming from this Month)