Chomana Dudi; ಚೋಮನ ದುಡಿಗೆ ಅರ್ಧಶತಕ; ಕಾರಂತ ದ್ವಯರ ಅದ್ಭುತಗಳ ಮೆಲುಕು


ಕನ್ನಡ ಸಿನಿಮಾ ಪರಂಪರೆಯನ್ನು ನೋಡುತ್ತಾ ಬಂದರೆ ಅಲ್ಲಿ ರೂಪಾಂತರಗಳನ್ನು ಹೆಚ್ಚು ಕಾಣುತ್ತೇವೆ. ಮೊದಲ ವಾಕ್ಚಿತ್ರ ಸತಿ ಸುಲೋಚನ ನಾಟಕವನ್ನೇ ಸಿನಿಮಾ ಮಾಡಿದ್ದಾಗಿತ್ತು. ಇದು ರಂಗಭೂಮಿಯ ರೂಪಾಂತರ ಎಂದು ನಾವು ನೋಡಬಹುದು. ಧ್ವನಿ ಇರುವ ಚಿತ್ರಕ್ಕೂ ಮೊದಲೇ ಕಾದಂಬರಿ ಆಧಾರಿತ ಸಿನಿಮಾ ಬಂದಿತ್ತು. ದೇವುಡು ನರಸಿಂಹ ಶಾಸ್ತ್ರಿ ಅವರ ʻಕಳ್ಳರ ಕೂಟʼ ಕಾದಂಬರಿಯನ್ನು ʻಕರುಣೆಯೇ ಕುಟುಂಬದ ಕಣ್ಣುʼ ಎಂಬ ಸಿನಿಮಾ ಆಗಿ ಮಾಡಲಾಗಿತ್ತು. ಈ ಸಂಪ್ರದಾಯ ಈಗಲೂ ಮುಂದುವರೆದಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಾಹಿತ್ಯ ಲೋಕ ಮತ್ತು ಸಿನಿಮಾ ಜಗತ್ತು ಒಂದನ್ನೊಂದು ಅವಲಂಬಿಸಿಯೇ ನಡೆದಿದೆ.
ಈ ಕಾದಂಬರಿ ಆಧರಿತ ಚಿತ್ರಗಳಲ್ಲಿ ನಾವು 2025ರ ಏಪ್ರಿಲ್‌ನಲ್ಲಿ ನೆನಪಿಸಿಕೊಳ್ಳುವಂತಹ ಸಿನಿಮಾ ಅಂದರೆ ಅದು ಕಾರಂತ ದ್ವಯರು ಸೇರಿ ಮಾಡಿದ ʻಜೋಮನ ದುಡಿʼ (Chomana Dudi) ಚಿತ್ರ. ಕೋಟ ಶಿವರಾಮ ಕಾರಂತರು (Kota Shivaram Karanth) ರಚಿಸಿದ ಈ ಕಾದಂಬರಿ 1975ರಲ್ಲಿ ಚಲನ ಚಿತ್ರವಾಗಿ ತೆರೆಕಂಡಿತು. ಅಂದರೆ ಈ ವರ್ಷಕ್ಕೆ ಅರ್ಧಶತಕ ಪೂರೈಸಿದಂತೆ.

ಶಿವರಾಮ ಕಾರಂತರ 45 ಕಾದಂಬರಿಗಳಲ್ಲಿ 6 ಸಿನಿಮಾ ಆಗಿದೆ. ಅದರಲ್ಲಿ ಒಂದನ್ನು ಕಾರಂತರೇ ನಿರ್ದೇಶಿಸಿದ್ದಾರೆ. ಸಿನಿಮಾ ರೂಪ ಪಡೆದ ಮೊದಲ ಕಾದಂಬರಿ ಚೋಮನ ದುಡಿ. ಸರಸಮ್ಮನ ಸಮಾಧಿ, ಬೆಟ್ಟದ ಜೀವ, ಚಿಗುರಿದ ಕನಸು ಮತ್ತು ಮೂಕಜ್ಜಿಯ ಕನಸುಗಳು ಕಾದಂಬರಿ ಸಿನಿಮಾ ಆಗಿದೆ. ಕಾರಂತರೆ ʻಮಲೆಯ ಮಕ್ಕಳುʼ ಎಂದು ʻಕುಡಿಯರ ಕೂಸುʼ ಕಾದಂಬರಿಯನ್ನು ನಿರ್ದೇಶಿಸಿದ್ದರು.
ಚೋಮನ ದುಡಿ ಕಾದಂಬರಿ ಮತ್ತು ಸಿನಿಮಾದ ಆಶಯ ಒಂದೇ ರೀತಿ ಇದೆ. ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಅಲ್ಲದೇ ಸಿನಿಮಾದ ಮೂರು ವಿಭಾಗದಲ್ಲಿ ಶಿವರಾಮ ಕಾರಂತರೇ ಕಾರ್ಯನಿರ್ವಹಿಸಿದ್ದಾರೆ. ಕಾದಂಬರಿಯನ್ನು ಸಿನಿಮಾಕ್ಕಾಗಿ ಕಥೆಯಾಗಿದ್ದು, ಸಂಭಾಷಣೆ ಬರೆದದ್ದು ಮತ್ತು ಚಿತ್ರಕ್ಕೆ ಚಿತ್ರಕಥೆಯನ್ನು ಕಾರಂತರೇ ಮಾಡಿದ್ದರು.
ಆಗಿನ ಕಾಲದಲ್ಲಿ ಇದ್ದ ಬ್ರಿಟಿಷ್ ಸರ್ಕಾರದ ಆಳ್ವಿಕೆ, ಚೋಮನ ಸಾಗುವಳಿಯ ಬಯಕೆ, ಮಲೆನಾಡಿನ ವಾಣಿಜ್ಯ ಕೃಷಿಗೆ ಆಳಾಗಿ ದುಡಿಯಲು ತೆರಳುತ್ತಿದ್ದ ಘಟ್ಟದ ಕೆಳಗಿನ ಜನ. ಇದೆಲ್ಲದರ ಜೊತೆ ದಲಿತ ಸಂವೇದನೆ ಕಾದಂಬರಿ ಮತ್ತು ಸಿನಿಮಾದಲ್ಲಿ ಚಿತ್ರಿತವಾಗಿದೆ. ಈ ಕಥನ ಕನ್ನಡಕ್ಕೆ ಎರಡನೇ ಸ್ವರ್ಣ ಪದಕವನ್ನು ತಂದುಕೊಟ್ಟಿತು.
ಚೋಮನ ದುಡಿಯನ್ನು ಬಿ.ವಿ. ಕಾರಂತರು (B.V. Karanth) ನಿರ್ದೇಶನ ಮಾಡಿದ್ದಾರೆ. ಶಿವರಾಮ ಕಾರಂತರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ವ್ಯಕ್ತಿ ಬಿ.ವಿ.ಕೆ. ಕಾರಂತರ ಬಾಲವನದಲ್ಲಿ ಕಾಲಕಳೆದಿದ್ದರು. ಚೋಮನ ದುಡಿಯ ಮೂಲಕ ಕಾರಂತ ದ್ವಯರು ಒಂದು ಸೃಜನಾತ್ಮಕ ಕಾರ್ಯದಲ್ಲಿ ತೊಡಗಿಕೊಂಡರು ಎಂದರೆ ತಪ್ಪಾಗದು. ಚೋಮನ ದುಡಿ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಸಂಗೀತವನ್ನೂ ಬಿ.ವಿ. ಕಾರಂತರೇ ಮಾಡಿದ್ದರು.





- Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …
- Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ
- Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್
- Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್
- ತುಳು ಭಾಷೆಯ ‘Daskath’, ಈಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ
(“Chomana Dudi” (1975) is a poignant Kannada film directed by B.V. Karanth, based on the novel by Shivaram Karanth. The narrative centers on Choma, an untouchable bonded laborer portrayed by M.V. Vasudeva Rao, who yearns to cultivate his own land—a dream thwarted by the rigid caste system. Despite acquiring a pair of bullocks, societal constraints prevent him from farming independently. His life spirals into tragedy: one son dies when Brahmins refuse to save him from drowning due to his untouchable status, another son converts to Christianity seeking a better life, and his daughter, Belli, is exploited by the landlord. In his anguish, Choma finds solace in playing his drum, symbolizing his suppressed emotions and resistance. The film is acclaimed for its raw depiction of social injustice and received multiple awards, including the National Film Award for Best Feature Film and Best Actor for Vasudeva Rao.)