ಐದು ಪಾತ್ರಗಳು, ಐದು ಕಥೆಗಳು, ಒಂದು ‘ಸೀಸ್ ಕಡ್ಡಿ’ …

ಬೇರೆ ಬೇರೆ ಕಥೆಗಳನ್ನು ಬೆಸೆಯುವ ಚಿತ್ರಗಳು ಕನ್ನಡದಲ್ಲಿ ಹಲವು ಬಂದಿವೆ. ಈಗ ಆ ಸಾಲಿಗೆ ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಸೀಸ್ ಕಡ್ಡಿ’ ಚಿತ್ರವನ್ನು ಸಹ ಸೇರಿಸಬಹುದು. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರತನ್ ಗಂಗಾಧರ್, ‘ಪುಸ್ತಕವೊಂದನ್ನು ಓದಿದಾಗ ಅದರಲ್ಲಿ ಪೆನ್ಸಿಲ್‍ನ ನಾನಾ ಸೂಕ್ಷ್ಮಗಳ ವಿವರವಿತ್ತು. ಅದನ್ನು ಐದು ಪಾತ್ರಗಳನ್ನಾಗಿಸಿ, ಅದಕ್ಕೆ ಹೊಂದಿಕೊಂಡಂತೆ ಐದು ಕಥೆಗಳನ್ನು ಸೃಷ್ಟಿಸಿ, ಆ ಕಥೆಗಳೆಲ್ಲ ಒಂದು ಬಿಂದುವಿನಲ್ಲಿ ಸಂಧಿಸುವ ಪ್ರಯತ್ನ ಮಾಡಿದೆ. ಈ ಚಿತ್ರದಲ್ಲಿ ಬೇರೆಬೇರೆ ಬಗೆಯ ಕನ್ನಡ ಭಾಷಾ ಶೈಲಿಯೂ ಮಿಳಿತವಾಗಿದೆ. ಬೆಂಗಳೂರು ಕನ್ನಡ, ಹವ್ಯಕ ಕನ್ನಡ, ತುಮಕೂರು ಭಾಗದ, ಹಳ್ಳಿಗಾಡಿನ ಶೈಲಿಯ ಕನ್ನಡ ಹಾಗೂ ಮೈಸೂರು ಸೀಮೆಯ ಕನ್ನಡದ ಬಳಕೆ ಕೂಡಾ ಪ್ರೇಕ್ಷಕರಿಗೆ ಹೊಸಾ ಅನುಭೂತಿ ನೀಡಲಿದೆ’ ಎಂದರು.
ಗ್ರಹಣ ಪ್ರೊಡಕ್ಷನ್ ಮೂಲಕ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಲ್ಯ ಸ್ನೇಹಿತರಾದ ಇವರೆಲ್ಲರೂ ಒಟ್ಟಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದಕ್ಕೆ ಕಾರಣ ಸಿನಿಮಾ ವ್ಯಾಮೋಹ.
ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಕೆ.ಸಿ. ಬಾಲಸಾರಂಗನ್ ಸಂಗೀತವಿದ್ದು, ಚಿತ್ರದಲ್ಲಿ ಸಿತಿನ್ ಅಪ್ಪಯ್ಯ, ಬಿ ಎಸ್ ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ ಮುಂತಾದವರು ನಟಿಸಿದ್ದಾರೆ.
‘ಸೀಸ್ ಕಡ್ಡಿ’ ಚಿತ್ರವು ಜೂನ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
It is a pity, that I can not participate in discussion now. I do not own the necessary information. But…
One thought on “ಐದು ಪಾತ್ರಗಳು, ಐದು ಕಥೆಗಳು, ಒಂದು ‘ಸೀಸ್ ಕಡ್ಡಿ’ …”