ಧ್ರುವ ಸರ್ಜಾ ಬಿಡುಗಡೆ ಮಾಡಿದರು ‘Suthradaari’ ಚಿತ್ರದ ಟ್ರೇಲರ್

ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ‘ಸೂತ್ರಧಾರಿ’ (Suthradaari) ಚಿತ್ರವು ಮೇ 09ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಧ್ರುವ ಸರ್ಜಾ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ತಾನು ಇಲ್ಲಿಗೆ ಬರಲು ಎರಡು ಕಾರಣ ಎಂದು ಮಾತು ಶುರು ಮಾಡಿದ ಧ್ರುವ ಸರ್ಜಾ, ‘ನಮ್ಮ ‘ಪೊಗರು’ ಚಿತ್ರದ ಇವೆಂಟ್ ಆಯೋಜನೆ ಮಾಡಿದ್ದು ನವರಸನ್. ನನ್ನ ಬಾಲ್ಯದ ಗೆಳೆಯ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು. ಹಾಗಾಗಿ, ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಬಂದೆ. ಈ ಚಿತ್ರವನ್ನು ಮೇ 09ರಂದು ಕುಟುಂಬ ಸಮೇತ ನೋಡುತ್ತೇನೆ’ ಎಂದರು.
ತಮ್ಮ ಈಗಲ್ ಮೀಡಿಯಾ ಸಂಸ್ಥೆಗೆ ಓಂಕಾರ ಹಾಕಿದ್ದು ಧ್ರುವ ಸರ್ಜಾ ಎಂದ ನಿರ್ಮಾಪಕ ನವರಸನ್, ‘ನಾವು ಇಲ್ಲಿಯವರೆಗೂ ಸಾಕಷ್ಟು ಇವೆಂಟ್‍ಗಳನ್ನು ಮಾಡಿದ್ದೇವೆ. ಅದಕ್ಕೆ ಓಂಕಾರ ಹಾಕಿದ್ದು ಧ್ರುವ ಸರ್ಜಾ. ‘ಪೊಗರು’ ಚಿತ್ರದ ಮೂಲಕ ನಮ್ಮ ಇವೆಂಟ್ ಶುರುವಾಗಿದ್ದು. ‘ಸೂತ್ರಧಾರಿ’ ಚಿತ್ರದ ಮೂಲಕ ಚಂದನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ’ ಎಂದರು.
ಚಂದನ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಸರ್ಜಾ ಕುಟುಂಬದವರಂತೆ. ಹಾಗಂತ ಚಂದನ್ ಹೇಳಿಕೊಂಡಿದ್ದಾರೆ. ‘ಧ್ರುವ ಅವರ ಮೊದಲ ಚಿತ್ರ ‘ಅದ್ದೂರಿ’ಯ ಬಿಡುಗಡೆ ದಿನದ ನೆನಪಾಗುತ್ತಿದೆ. ಬಿಡುಗಡೆಯ ಹಿಂದಿನ ದಿನ ಬೆಳಗ್ಗಿನ ಜಾವದವರೆಗೂ ಅವರು ಹಾಗೂ ನಾನು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದು, ಮಾರ್ನಿಂಗ್ ಶೋ ಮುಗಿದ ಕೂಡಲೆ ಜನ ಧ್ರುವ ಅವರ ಅಭಿನಯ ನೋಡಿ ಸಂಭ್ರಮಿಸಿದ್ದು ಇಂದು ನೆನಪಿಗೆ ಬರುತ್ತಿದೆ. ಈಗ ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದೇನೆ. ನಾನು ನಾಯಕನಾಗಲೂ ನವರಸನ್ ಅವರೆ ಪ್ರಮುಖ ಕಾರಣ’ ಎಂದರು ಚಂದನ್ ಶೆಟ್ಟಿ.
‘ಸೂತ್ರಧಾರಿ’ ಚಿತ್ರಕ್ಕೆ ಕಿರಣ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಚಂದನ್ ಜೊತೆಗೆ ಅಪೂರ್ವ, ತಬಲಾ ನಾಣಿ ಮುಂತಾದವರು ನಟಿಸಿದ್ದಾರೆ. ನಟನೆ ಜೊತೆಗೆ ಚಿತ್ರದ ಸಂಗೀತದ ಜವಾಬ್ದಾರಿಯನ್ನೂ ಚಂದನ್ ಶೆಟ್ಟಿ ಹೊತ್ತಿದ್ದಾರೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] ಪ್ರತಿಯೊಬ್ಬರಲ್ಲೂ ಇರುವ ರಾಕ್ಷಸನ ಕಥೆ ‘ಗ್… […]
[…] ಪ್ರತಿಯೊಬ್ಬರಲ್ಲೂ ಇರುವ ರಾಕ್ಷಸನ ಕಥೆ ‘ಗ್ರೀನ್’; ಟೀಸರ್ ಬಿಡುಗಡೆ […]
[…] […]
[…] […]
[…] […]