ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ Raja Vardan ಹೊಸ ಚಿತ್ರ

chandra chooda and Rajvardhan combination kannada movie

ಒಂದೂವರೆ ವರ್ಷಗಳ ಹಿಂದೆ, ‘ಅನ್‍ಲಾಕ್‍ ರಾಘವ’ ನಾಯಕ ಮಿಲಿಂದ್‍ ಗೌತಮ್‍ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸುತ್ತಿರುವುದಾಗಿ ‘ಬಿಗ್‍ ಬಾಸ್‍’ ಸ್ಪರ್ಧಿ ಚಂದ್ರಚೂಡ್‍ ಘೋಷಿಸಿದ್ದರು. ಅದಕ್ಕೂ ಒಂದೂವರೆ ವರ್ಷದ ಮೊದಲು ನಾಗಶೇಖರ್‍ ಅಭಿನಯದಲ್ಲಿ ‘ಪಾದರಾಯ’ ಎಂಬ ಪ್ಯಾನ್‍ ಇಂಡಿಯಾ ಚಿತ್ರವನ್ನು ಮಾಡುವುದಾಗಿ ಪತ್ರಿಕಾಗೋಷ್ಠಿ ಸಹ ಮಾಡಿದ್ದರು. ಈ ಎರಡೂ ಚಿತ್ರಗಳು ಸುದ್ದಿಯಾಯಿತೇ ಹೊರತು, ಮುಂದುವರೆಯಲೇ ಇಲ್ಲ.

ಹೀಗಿರುವಾಗಲೇ, ಚಕ್ರವರ್ತಿ ಚಂದ್ರಚೂಡ್‍ ಇನ್ನೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿರುವ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿ ರಾಜವರ್ಧನ್‍ (Raja Vardan) ಅಭಿನಯದಲ್ಲಿ ಅವರು ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಚಿತ್ರರಂಗದ ಇಬ್ಬರು ಜನಪ್ರಿಯ ವ್ಯಕ್ತಿಗಳು ಲಾಂಚ್‍ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಚಕ್ರವರ್ತಿ ಚಂದ್ರಚೂಡ್‍ ಅವರು ಸುದೀಪ್‍ ಮ್ಯಾನೇಜರ್‍ ಆಗಿ ಗುರುತಿಸಿಕೊಂಡಿರುವುದರಿಂದ, ಆ ಇಬ್ಬರಲ್ಲಿ ಸುದೀಪ್‍ ಒಬ್ಬರು ಎಂದು ಅಂದಾಜಿಸಲಾಗಿದೆ.

ಪಕ್ಕಾ ಕನ್ನಡದ ಸೂಗಡಿನ ಮಾಸ್ ಮನರಂಜನೆಯ ಕಥೆಯನ್ನು ರಾಜವರ್ಧನ್‍ಗಾಗಿ ಚಕ್ರವರ್ತಿ ಚಂದ್ರಚೂಡ್‍ ಬರೆದಿದ್ದು, ಅದನ್ನು ತಾವೇ ನಿರ್ದೇಶನ ಮಾಡುತ್ತಿದ್ದಾರೆ. ಹಲವು ತಿಂಗಳುಗಳಿಂದ ಈ ಚಿತ್ರದ ಕುರಿತು ಚರ್ಚೆಗಳು ನಡೆಯುತ್ತಿದ್ದು, ಮೇ ತಿಂಗಳಲ್ಲಿ ಇನ್ನಷ್ಟು ವಿವರಗಳು ಹೊರಬೀಳುವ ಸಾಧ್ಯತೆ ಇದೆ.

ಕಳೆದ ಒಂದು ವರ್ಷದಲ್ಲಿ ರಾಜವರ್ಧನ್‍ ಅಭಿನಯದ ‘ಪ್ರಣಯಂ’, ‘ಹಿರಣ್ಯ’ ಮತ್ತು ‘ಗಜರಾಮ’ ಚಿತ್ರಗಳು ಬಿಡುಗಡೆಯಾಗಿದ್ದು, ಈ ಮೂರೂ ಚಿತ್ರಗಳು ಹೆಚ್ಚು ಸದ್ದು ಮಾಡಲಿಲ್ಲ. ಈ ಮಧ್ಯೆ, ಅವರು ತೆಲುಗಿನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

One thought on “ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ Raja Vardan ಹೊಸ ಚಿತ್ರ

Leave a Reply

Your email address will not be published. Required fields are marked *