L2: Empuraan ಚಿತ್ರದ 17 ದೃಶ್ಯಗಳಿಗೆ ಕತ್ತರಿ; ಸದ್ಯದಲ್ಲೇ ಹೊಸ ಅವತರಣಿಕೆ

ಮೋಹನ್‌ ಲಾಲ್ (Mohanlal) ಮತ್ತು ಪೃಥ್ವಿರಾಜ್‍ ಸುಕುಮಾರನ್‍ (prudhvi raj sukumaran) ಅಭಿನಯದ ‘ಎಲ್‌2: ಎಂಪುರಾನ್‍’ (L2: Empuraan) ಚಿತ್ರವು ಬಿಡುಗಡೆಯಾಗಿ, ಮಲಯಾಳಂ ಚಿತ್ರರಂಗದ ಅತೀ ದೊಡ್ಡ ಓಪನಿಂಗ್‍ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ನಾಲ್ಕು ದಿನಗಳಲ್ಲಿ 100 ಕೋಟಿ ಕ್ಲಬ್‍ ಸೇರಿದೆ ಎಂದು ಸ್ವತಃ ಚಿತ್ರ ನಿರ್ಮಾಣ ಮಾಡಿರುವ ಆಶೀರ್ವಾದ್‍ ಸಿನಿಮಾಸ್‍ ಘೋಷಿಸಿದೆ.

ಈ ಮಧ್ಯೆ, ಚಿತ್ರವು ವಿವಾದಕ್ಕೆ ಸಿಲುಕಿದೆ. ಚಿತ್ರದಲ್ಲಿ ಗುಜರಾತ್‍ ಗಲಭೆಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಅವಹೇಳನಕಾರಿ ವಿಷಯಗಳಿವೆ ಎಂದು ವಿವಾದ ಶುರುವಾದ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಒಂದಿಷ್ಟು ದೃಶ್ಯಗಳನ್ನು ಕತ್ತರಿಸಲು ಚಿತ್ರತಂಡ ತೀರ್ಮಾನಿಸಿದೆ. ಪ್ರಮುಖವಾಗಿ ಚಿತ್ರದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದ್ದು, ಸದ್ಯದಲ್ಲೇ ಚಿತ್ರವನ್ನು ರೀ-ಸೆನ್ಸಾರ್ ‍ಮಾಡಿಸಿ, ಹೊಸ ಅವತರಣಿಕೆಯನ್ನು ಬುಧವಾರದ ನಂತರ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

ಯುಗಾದಿ ಮತ್ತು ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಮತ್ತು ಸೋಮವಾರ ರಜೆ ಇರುವ ಕಾರಣ, ಹೊಸ ಆವೃತ್ತಿಯನ್ನು ಮಂಗಳವಾರ ಸೆನ್ಸಾರ್‌ ಮಂಡಳಿಗೆ ಸಲ್ಲಿಸಲಾಗುವುದು. ಮಂಗಳವಾರ ಸೆನ್ಸಾರ್‍ ಮಾಡಿಸಿ, ಬುಧವಾರದ ನಂತರ ಎಲ್ಲ ಚಿತ್ರಮಂದಿರಗಳಲ್ಲಿ ಹೊಸ ಆವೃತ್ತಿ ತಲುಪಲಿದೆ ಎಂದು ಚಿತ್ರತಂಡ ಹೇಳಿದೆ.

2019ರಲ್ಲಿ ಬಿಡುಗಡೆಯಾದ ‘ಲೂಸಿಫರ್‍’ ಚಿತ್ರದ ಮುಂದುವರೆದ ಭಾಗವಾದ ‘L2E: ಎಂಪುರಾನ್’ ಚಿತ್ರದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಟೋವಿನೋ ಥಾಮಸ್, ಮಂಜು ವಾರಿಯರ್‌, ಇಂದ್ರಜಿತ್‍ ಸುಕುಮಾರನ್‍, ಅಭಿಮನ್ಯು ಸಿಂಗ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಈ ಚಿತ್ರವನ್ನು ಪೃಥ್ವಿರಾಜ್‍ ಸುಕುಮಾರನ್‍ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಸಂಸ್ಥೆಯು ಕರ್ನಾಟಕದಲ್ಲಿ ಬಿಡುಗಡೆ ಮಾಡಿದೆ.


(The Malayalam film L2: Empuraan, directed by Prithviraj Sukumaran and starring Mohanlal, has come under scrutiny due to its depiction of the 2002 Gujarat riots. The Central Board of Film Certification (CBFC) has mandated 17 cuts to the film, leading the filmmakers to implement several changes to address concerns raised by various groups.​
Details of the Controversy: Depiction of Gujarat Riots: The film includes a sequence portraying the 2002 Gujarat riots, featuring a character named Baba Bajrangi as an antagonist. This has drawn criticism from right-wing organizations, including the Rashtriya Swayamsevak Sangh (RSS), which accused the film of promoting an anti-Hindu narrative)

One thought on “L2: Empuraan ಚಿತ್ರದ 17 ದೃಶ್ಯಗಳಿಗೆ ಕತ್ತರಿ; ಸದ್ಯದಲ್ಲೇ ಹೊಸ ಅವತರಣಿಕೆ

Leave a Reply

Your email address will not be published. Required fields are marked *