
ಎರಡು ದಿನಗಳಲ್ಲಿ ಮೂರು ಕೋಟಿ ರೂ ಗಳಿಕೆ ಮಾಡಿದ ‘Su From So’
ಒಂದು ಕಡೆ ಜನಪ್ರಿಯ ನಟರ ಚಿತ್ರಗಳೇ ನಿರೀಕ್ಷೆಗೆ ನಿಲುಕದೆ ಬಾಕ್ಸ್ ಆಫೀಸ್ನಲ್ಲಿ ನೆಲ ಕಚ್ಚುವಾಗ, ಹೊಸಬರ ಚಿತ್ರವೊಂದು ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲೊಂದು ದೊಡ್ಡ ಗಳಿಕೆ ಮಾಡುತ್ತಿದೆ. ಅದೇ ‘ಸು ಫ್ರಮ್ ಸೋ’ (Su From So). ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಚಿತ್ರವನ್ನು ಜನ ಮುಗಿಬಿದ್ದು ನೋಡುತ್ತಿರುವುದಷ್ಟೇ ಅಲ್ಲ, ಎರಡೇ ದಿನಗಳಲ್ಲಿ ಮೂರು ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ. ‘ಸು ಫ್ರಮ್ ಸೋ’ ಹಾರರ್ ಕಾಮಿಡಿ ಜಾನರ್ನ ಚಿತ್ರ. ‘ಸು ಫ್ರಮ್ ಸೋ’ ಎಂದರೆ ಸುಲೋಚನ ಹಾಗೂ ಸೋಮೇಶ್ವರ ಎಂದರು. ಮೊದಲನೆಯದು…