GST

ಒಂದೇ ಚಿತ್ರದಲ್ಲಿ ಅಜ್ಜಿ, ಮಗ ಹಾಗೂ ಮೊಮ್ಮಗ; ‘GST’ ಸದ್ಯದಲ್ಲೇ ತೆರೆಗೆ

ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು ಸೃಜನ್‍ ಲೋಕೇಶ್‍ ನಿರ್ದೇಶನದ ಮತ್ತು ನಟನೆಯ ‘GST’. ಇದೀಗ ಚಿತ್ರ ಬಿಡುಗಡೆಗೆ ಸಿದ್ಧವಿದ್ದು, ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ‘U/A’ ಪ್ರಮಾಣಪತ್ರವನ್ನು ಪಡೆದಿದ್ದು,, ಸದ್ಯದಲ್ಲೇ ಬಿಡುಗಡೆ ಆಗಲಿದೆ. ‘GST’ ಚಿತ್ರ ಹಲವು ವಿಶೇಷತೆಗಳನ್ನೊಳಗೊಂಡಿದೆ. ಈ ಚಿತ್ರದಲ್ಲಿ ನಿರ್ಮಾಪಕ ಸಂದೇಶ್ ಪ್ರಮುಖ ಪಾತ್ರದಲ್ಲಿ ನಟಸಿದ್ದಾರೆ. ಅವರ ಪಾತ್ರ ಏನೆಂಬುದನ್ನು ನಿರ್ದೇಶಕ ಸೃಜನ್ ಲೋಕೇಶ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಅಜ್ಜಿ, ಮಗ…

Read More

ಸರ್ಕಾರಿ ಶಾಲೆ ಉಳಿಸುವುದೇ ಈ ವಿದ್ಯಾರ್ಥಿಗಳ ಏಕೈಕ ‘ಗುರಿ’ …

ಡಾ. ರಾಜಕುಮಾರ್‌ ಅವರ ಜನಪ್ರಿಯ ಚಿತ್ರಗಳ ಪೈಕಿ ‘ಗುರಿ’ ಸಹ ಒಂದು. ಈಗ ಇದೇ ಹೆಸರಿನ ಇನ್ನೊಂದು ಚಿತ್ರವು ಸದ್ದಿಲ್ಲದೆ ಮುಗಿದಿದ್ದು, ಚಿತ್ರದ ಟೀಸರ್‌ ಸಹ ಬಿಡುಗಡೆಯಾಗಿದೆ. ‘ಗುರಿ’ (Guri) ಒಂದು ಆ್ಯಕ್ಷನ್‍-ಸೆಂಟಿಮೆಂಟ್‍ ಚಿತ್ರವಾದರೆ, ಇದು ಸರ್ಕಾರಿ ಶಾಲೆಗಳನ್ನು ಉಳಿಸುವ ಒಂದು ಪ್ರಯತ್ನ. ಅದಕ್ಕೆ ಪೂರಕವಾಗಿ ಚಿತ್ರಕ್ಕೆ ’ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಅಡಿಬರಹ ಸಹ ಇದೆ. ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ ಎಸ್.ಆರ್ ಮತ್ತು ಚಿತ್ರಲೇಖಾ ಎಸ್ ನಿರ್ಮಾಣ ಮಾಡಿರುವ ‘ಗುರಿ’ ಚಿತ್ರಕ್ಕೆ ಸೆಲ್ವಂ ಮಾದಪ್ಪನ್‍…

Read More

‘ಕೌಂತೇಯ’ನಾದ Achyuth Kumar; ಹೊಸ ಕ್ರೈಂ ಸ್ಟೋರಿಗೆ ಚಾಲನೆ

‘ಕೌಂತೇಯ’ ಎಂದರೆ ಮಹಾಭಾರತದ ಕರ್ಣನ ಇನ್ನೊಂದು ಹೆಸರು. ಇದೀಗ ಇದೇ ಹೆಸರಿಟ್ಟುಕೊಂಡು, ಒಂದು ಚಿತ್ರ ಸದ್ದಿಲ್ಲದೆ ಪ್ರಾರಂಭವಾಗಿದೆ. ಹಾಗಂತ ಇದು ಪೌರಾಣಿಕ ಚಿತ್ರವಲ್ಲ, ಇದೊಂದು ಕ್ರೈಂ ಸ್ಟೋರಿಯಂತೆ. ಕಥೆಗೆ ಇದೇ ಹೆಸರು ಸೂಕ್ತ ಎಂದು ಈ ಹೆಸರು ಇಡಲಾಗಿದೆ. ‘ಕೌಂತೇಯ’ ಚಿತ್ರದ ಮುಹೂರ್ತ ಇತ್ತೀಚೆಗೆ ಸದ್ದಿಲ್ಲದೆ ಮುಗಿದಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ (Achyuth Kumar) ಹಾಗೂ ಶರಣ್ಯ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಹಿರಿಯ ನಟ ಶಶಿಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‍ ಮಾಡಿ ಚಿತ್ರತಂಡಕ್ಕೆ ಶುಭ…

Read More

ದೆವ್ವದ ಜೊತೆಗೆ ಬಂದ ಸುಧಾರಾಣಿ, ಎರಡೇ ಪಾತ್ರಗಳ ಸುತ್ತ ‘ಘೋಸ್ಟ್’

ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರದ ಮೂಲಕ ನಾಯಕಿಯಾದ ಸುಧಾರಾಣಿ, ಕಳೆದ 39 ವರ್ಷಗಳಲ್ಲಿ ನೂರಾರು ಚಿತ್ರಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದಾರೆ. ಈಗ ಮೊದಲ ಬಾರಿಗೆ ಅವರು ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಚಿತ್ರ ನಿರ್ಮಾಣ ಎಂದರೆ ಅದು ಪೂರ್ಣಪ್ರಮಾಣದ ಚಿತ್ರವಲ್ಲ, ಕಿರುಚಿತ್ರ. ಹೆಸರು ‘ಘೋಸ್ಟ್ – ದಿ ದೆವ್ವ’ (Ghost – The Devva). ಸುಧಾರಾಣಿ (Sudharani) ನಿರ್ಮಿಸಿ, ನಟಿಸಿದ ‘ಘೋಸ್ಟ್’, ಸಸ್ಪೆನ್ಸ್ ಥ್ರಿಲ್ಲರ್ ಅಂಶವನ್ನು ಹೊಂದಿದ್ದು, ಜಗತ್ತಿನಲ್ಲಿ ಒಳ್ಳೆಯದು ಹೇಗಿದೆಯೋ ಹಾಗೆಯೇ ಕೆಟ್ಟದ್ದು ಇದೆ ಎಂಬ ಅಂಶವನ್ನು ಸಾರುತ್ತದೆ….

Read More