Ekka

Yuva Rajkumar; ‘ಎಕ್ಕ ಮಾರ್ ಮಾರ್ ಮಾರ್ …’ ಎಂದು ಹೆಜ್ಜೆ ಹಾಕಿದ ಯುವ ರಾಜಕುಮಾರ್

ಯುವ ರಾಜಕುಮಾರ್‌ (Yuva Rajkumar) ಅಭಿನಯದ ‘ಎಕ್ಕ’ ಚಿತ್ರದ ಮುಹೂರ್ತದ ದಿನದಂದೇ ಚಿತ್ರವನ್ನು 2025ರ ಜೂನ್‍ 06ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಚಿತ್ರ ಬಿಡುಗಡೆಗೆ, ಇನ್ನು ಕೇವಲ ಎರಡೂವರೆ ತಿಂಗಳುಗಳು ಮಾತ್ರ ಇದೆ. ಹೀಗಿರುವಾಗಲೇ, ‘ಯಕ್ಕ’ ಚಿತ್ರದ ಮೊದಲ ಹಾಡು ಪುನೀತ್‍ ರಾಜಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ‘ಜಾಕಿ’ ಚಿತ್ರದ ‘ಎಕ್ಕ ರಾಜ ರಾಣಿ ನನ್ನ ಕೈಯೊಳಗೆ …’ ಹಾಡನ್ನು ನೆನಪಿಸುವ ‘ಎಕ್ಕ ಮಾರ್‌ ಮಾರ್‌ ಮಾರ್‌ …’ ಹಾಡು, ಆನಂದ್‍ ಆಡಿಯೋ ಯೂಟ್ಯೂಬ್‍ ಚಾನಲ್‍ನಲ್ಲಿ…

Read More
Vamana

Dhanveer Gowda; ಮುನಿಸಿನ ನಡುವೆಯೇ ‘ವಾಮನ’ ಚಿತ್ರದ ತಾಯಿ – ಮಗನ ಬಾಂಧವ್ಯದ ಹಾಡು ಬಿಡುಗಡೆ

ಧನ್ವೀರ್‌ ಗೌಡ (Dhanveer Gowda) ಅಭಿನಯದ ‘ವಾಮನ’ ಚಿತ್ರವು ಒಂದೂವರೆ ವರ್ಷಗಳ ಹಿಂದೆ ಬಿಡುಗಡೆಯಾಗಬೇಕಿತ್ತು. ಕೆಲವೇ ದಿನಗಳಿರುವಾಗ ರದ್ದಾಗುವುದರ ಜೊತೆಗೆ, ಚಿತ್ರ ಇನ್ನು ಬಿಡುಗಡೆಯೇ ಆಗುವುದಿಲ್ಲ ಎಂಬ ಮಾತೊಂದು ಕೇಳಿ ಬಂದಿತ್ತು. ಅದಕ್ಕೆ ಕಾರಣ ಧನ್ವೀರ್‌ ಮತ್ತು ನಿರ್ಮಾಪಕ ಚೇತನ್‍ ಗೌಡ ನಡುವಿನ ಮುನಿಸು ಎಂದು ಹೇಳಲಾಗಿತ್ತು. ಹೀಗಿರುವಾಗಲೇ, ಏಪ್ರಿಲ್‍ 10ರಂದು ‘ವಾಮನ’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಚಿತ್ರವೇನೋ ಬಿಡುಗಡೆಗೆ ಸಜ್ಜಾಗಿದ್ದರೂ, ನಿರ್ಮಾಪಕರು ಮತ್ತು ಧನ್ವೀರ್‌ ನಡುವಿನ ಮುನಿಸು ಬಗೆಹರಿದಂತೆ ಕಾಣುತ್ತಿಲ್ಲ. ಇತ್ತೀಚೆಗೆ ಚಿತ್ರದ…

Read More

Puneeth Rajkumar cutout; ಪುನೀತ್‍ ನೆನಪಲ್ಲಿ 50 ಅಡಿ ಕಟೌಟ್‍ ನಿಲ್ಲಿಸಿದ ‘ಅಪ್ಪು ಅಭಿಮಾನಿ’ ಚಿತ್ರತಂಡ

ಮೂರು ವರ್ಷಗಳ ಹಿಂದೆ ಪುನೀತ್‍ ರಾಜಕುಮಾರ್ (Puneeth Rajkumar) ಅಭಿನಯದ ‘ಜೇಮ್ಸ್’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ಪುನೀತ್‍ ರಾಜಕುಮಾರ್‍ ಅವರ 30 ಕಟೌಟ್‍ಗಳನ್ನು ವೀರೇಶ ಚಿತ್ರಮಂದಿರದಲ್ಲಿ ನಿಲ್ಲಿಸಿದ್ದು ನೆನಪಿರಬಹುದು. ಈ ಚಿತ್ರವು ಪುನೀತ್‍ ಹುಟ್ಟುಹಬ್ಬದ ಪ್ರಯುಕ್ತ 2022ರ ಮಾರ್ಚ್‍ 17ರಂದು ಬಿಡುಗಡೆಯಾಯಿತು. ಪುನೀತ್‍ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ಅಪ್ಪು’ವಿನಿಂದ ‘ಜೇಮ್ಸ್’ವರೆಗೂ 20 ವರ್ಷಗಳಲ್ಲಿ ಬಿಡುಗಡೆಯಾದ ಒಟ್ಟು 30 ಚಿತ್ರಗಳ ಕಟೌಟ್‍ಗಳನ್ನು ನಿಲ್ಲಿಸಲಾಗಿತ್ತು. ಈಗ ಪುನೀತ್‍ ನಿಧನದ ಮೂರೂವರೆ ವರ್ಷಗಳ ನಂತರ ನರ್ತಕಿ ಚಿತ್ರಮಂದಿರದ ಎದುರು…

Read More

Firefly; ಡಾ. ರಾಜಕುಮಾರ್ ಹುಟ್ಟುಹಬ್ಬಕ್ಕೆ ಮೊಮ್ಮಗಳ ಗಿಫ್ಟ್; ಏ. 24ಕ್ಕೆ ‘ಫೈರ್ ಫ್ಲೈ’ ಬಿಡುಗಡೆ

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಡಾ. ರಾಜಕುಮಾರ್ ಮೊಮ್ಮಗಳು ಮತ್ತು ಶಿವರಾಜಕುಮಾರ್ ಮಗಳು ನಿವೇದಿತಾ ನಿರ್ಮಾಣದ ಮೊದಲ ಚಿತ್ರ ‘ಫೈರ್ ಫ್ಲೈ’ (Firefly) ಕಳೆದ ವರ್ಷ ಬಿಡುಗಡೆಯಾಗಬೇಕಿತ್ತು. ದೀಪಾವಳಿಗೆ ಚಿತ್ರ ಬಿಡುಗಡೆ ಎಂದು ಘೋಷಣೆಯೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ. ಈಗ ಚಿತ್ರಕ್ಕೆ ಹೊಸ ಬಿಡುಗಡೆ ದಿನಾಂಕ ಸಿಕ್ಕಿದ್ದು, ಏಪ್ರಿಲ್‍ 24ರಂದು ಬಿಡುಗಡೆಯಾಗುತ್ತಿದೆ. ತಾತನ ಹುಟ್ಟುಹಬ್ಬದಂದು ಚಿತ್ರ ಬಿಡುಗಡೆ ಮಾಡಲು ಮೊಮ್ಮಗಳು ನಿರ್ಧರಿಸಿದ್ದಾರೆ. ನಿವೇದಿತಾ ತಮ್ಮ ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ…

Read More