Aviram Kanteerava; ಕನ್ನಡದ ಚಿತ್ರ ಚೀನಿ ಭಾಷೆಗೆ; ಹೊಸ ಹೆಗ್ಗಳಿಕೆಗೆ ಪಾತ್ರವಾದ ‘ಕರಳೆ’

ಕನ್ನಡದ ಚಿತ್ರವೊಂದನ್ನು ಬೇರೆ ಭಾಷೆಗಳಿಗೆ ಡಬ್‍ ಆಗಿ ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುವುದು ಹೊಸ ವಿಷಯವಲ್ಲ. ಆದರೆ, ಕನ್ನಡ ಚಿತ್ರವೊಂದು ಅಂತರಾಷ್ಟ್ರೀಯ ಭಾಷೆಗೆ ಡಬ್‍ ಆಗಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯೋಗ ಕನ್ನಡದಲ್ಲಾಗುತ್ತಿದೆ. ಈ ಹಿಂದೆ ‘ಕಲಿವೀರ’ ಮತ್ತು ‘ಕನ್ನಡದೇಶದೊಳ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಅವಿರಾಮ್ ಕಂಠೀರವ (Aviram Kanteerava), ಇನ್ನೊಂದು ವಿಭಿನ್ನ ಕಥೆ ಇರುವ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದೇ ‘ಕರಳೆ’ (Karale). ಭಾರತದ ಪ್ರಮುಖ ಭಾಷೆ ಕನ್ನಡ ಜೊತೆಗೆ ನೆರೆ ರಾಷ್ಟ್ರ ಚೀನಾದ ಮಾಂಡರೀನ್‍…

Read More

Yash; ‘ನಾವು ಬರುವುದರಿಂದ ಚಿತ್ರ ಗೆಲ್ಲುವುದಿಲ್ಲ, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ …’

ದೊಡ್ಡ ಸ್ಟಾರ್‌ ನಟರು ತಮ್ಮ ಚಿತ್ರಗಳ ಪ್ರಚಾರ ಮಾಡಿದರೆ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಹಾಗಾಗಿ, ಬಹಳಷ್ಟು ಜನ ತಮ್ಮ ಚಿತ್ರಗಳ ಪೋಸ್ಟರ್, ಟೀಸರ್, ಟ್ರೇಲರ್‌ಗಳನ್ನು ದೊಡ್ಡ ನಟರಿಂದ ಬಿಡುಗಡೆ ಮಾಡಿಸುವುದಕ್ಕೆ ಮುಂದಾಗುತ್ತಿದ್ದಾರೆ. ಆದರೆ, ನಾವು ಬರುವುದರಿಂದ ಚಿತ್ರ ಗೆಲ್ಲುವುದಿಲ್ಲ, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ ಎಂದು ಯಶ್‍ (Yash) ಹೇಳಿದ್ದಾರೆ. ಯೋಗರಾಜ್‍ ಭಟ್‍ ನಿರ್ದೇಶನದ ‘ಮನದ ಕಡಲು’ ಚಿತ್ರವು ಮಾರ್ಚ್ 28ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಲುಲು ಮಾಲ್‍ನಲ್ಲಿ ನಡೆದ…

Read More

Meghana Gaonkar; ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮೇಘನಾ; ಇದು ಮದುವೆ ಸುದ್ದಿ ಅಲ್ಲ!

‘ಛೂ ಮಂತರ್’ ಚಿತ್ರದ ನಂತರ ಮೇಘನಾ ಗಾಂವ್ಕರ್ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಒಂದು ಸಹಿ ಸುದ್ದಿ ನೀಡಿದ್ದಾರೆ. ಅಷ್ಟೇ ಅಲ್ಲ, ಇದು ಮದುವೆ ಸುದ್ದಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ಏನಿದು ಸುದ್ದಿ? ಮೇಘನಾ ಗಾಂವ್ಕರ್‌ (Meghana Gaonkar) ಇದೀಗ ಡಾ. ಮೇಘನಾ ಗಾಂವ್ಕರ್‌ ಆಗಿದ್ದು ಪಿಎಚ್‍ಡಿ ಪಡೆದಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್‍ ಮೀಡಿಯಾದ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಮೇಘನಾ, ತಮ್ಮ ಆರು ವರ್ಷಗಳ ಸತತ ಪರಿಶ್ರಮ ಫಲ…

Read More

Vijay Rargavendra in Rudrabhishekam; ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ವಿಜಯ ರಾಘವೇಂದ್ರ

ಕರ್ನಾಟಕದ ಜನಪ್ರಿಯ ಜಾನಪದ ಕಲೆಗಳಲ್ಲಿ ವೀರಗಾಸೆ (Veeragase) ಸಹ ಒಂದು. ವೀರಗಾಸೆ ಕಲೆ ಹಾಗೂ ಅದರ ಅಧಿದೇವರಾದ ವೀರಭದ್ರ (veerabhadra) ದೇವರ ಇತಿಹಾಸವನ್ನು ಹೇಳುವ ‘ರುದ್ರಾಭಿಷೇಕಂ’(Rudrabhishekam) ಎಂಬ ಚಿತ್ರ ತಯಾರಾಗುತ್ತಿದ್ದು, ವೀರಗಾಸೆ ಗೆಟಪ್‍ನಲ್ಲಿ ವಿಜಯ್‍ ರಾಘವೇಂದ್ರ (Vijaya Rargavendra) ಕಾಣಿಸಿಕೊಂಡಿದ್ದಾರೆ. ವೀರಗಾಸೆ ಕುಟುಂಬವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಆ ಕಲೆಯ ಮೂಲ, ಆ ಕಲಾವಿದರ ಇತಿಹಾಸವನ್ನು ಕಮರ್ಷಿಯಲ್ ಕಥೆಯ ಮೂಲಕ ಹೇಳುವ ಪ್ರಯತ್ನವೇ ‘ರುದ್ರಾಭಿಷೇಕಂ’. ವಸಂತ್‍ ಕುಮಾರ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇತ್ತೀಚೆಗೆ…

Read More