666 operation dream theatre

ರೆಟ್ರೋ ಲುಕ್‌ನಲ್ಲಿ ಧನಂಜಯ್; ಇಲ್ಲಿದೆ ‘666 Operation Dream Theatre’ ಚಿತ್ರದ ಫಸ್ಟ್‌ ಲುಕ್

ಹೇಮಂತ್‍ ರಾವ್ ನಿರ್ದೇಶನದ ‘666 Operation Dream Theatre’ ಚಿತ್ರವು ಘೋಷಣೆಯಿಂದಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ತಿಂಗಳು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತವಾಗಿ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ, ಇದೀಗ ಧನಂಜಯ್‍ ಅವರ ಫಸ್ಟ್ ಲುಕ್‍ ಬಿಡುಗಡೆ ಮಾಡಿದೆ. ಧನಂಜಯ್‌, ‘666 ಆಪರೇಷನ್ ಡ್ರೀಮ್ ಥಿಯೇಟರ್ ‘ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರೆಟ್ರೋ ಲುಕ್‍ನಲ್ಲಿ ಧನಂಜಯ ಪ್ರತ್ಯಕ್ಷರಾಗಿದ್ದಾರೆ. ಈ ಪೋಸ್ಟರ್‌ಗಳು ಡಾ. ರಾಜಕುಮಾರ್‌ ಅಭಿನಯದ 999 ಸರಣಿಯ ಬಾಂಡ್‍ ಚಿತ್ರಗಳನ್ನು ನೆನಪಿಸುತ್ತವೆ….

Read More
Yours Sincerely Raam

ಆಂಜನೇಯ ಅವತಾರವೆತ್ತಿದ ಗಣೇಶ್; ‘Yours Sincerely Raamʼ ಚಿತ್ರದ ಪೋಸ್ಟರ್ ಬಿಡುಗಡೆ

ಕನ್ನಡ ಚಿತ್ರರಂಗದ ತ್ಯಾಗರಾಜರು ಎಂದೇ ಖ್ಯಾತಿ ಪಡೆದಿರುವ ರಮೇಶ್‌ ಅರವಿಂದ್‌ ಹಾಗೂ ಗಣೇಶ್‌ ಜೊತೆಯಾಗಿ ನಟಿಸುತ್ತಿರುವ ‘Yours Sincerely Raamʼ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಂದು ಗಣೇಶ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಹೊಸ ಪೋಸ್ಟರ್‌ ಬಿಡುಗಡೆ ಮಾಡಿ ಗಣೇಶ್‍ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಗಣೇಶ್‌ ಜನ್ಮದಿನಕ್ಕೆ ಅನಾವರಣಗೊಂಡಿರುವ ಪೋಸ್ಟರ್‌ನಲ್ಲಿ ಗಣೇಶ್‌ ಹಿಂದೆಂದೂ ಕಾಣದ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಅವತಾರದಲ್ಲಿ ಮಳೆ ಹುಡ್ಗ ದರ್ಶನ ಕೊಟ್ಟಿದ್ದಾರೆ. ಹಿಮಾಲಯದ ಬ್ಯಾಕ್‌ ಡ್ರಾಪ್‌ ನಲ್ಲಿ ಮೂಡಿ…

Read More

‘Sangeetha Bar and Restaurant’ನಲ್ಲಿ ಕೋಮಲ್‍ಗೇನು ಕೆಲಸ?

ಕೋಮಲ್‍ ಅಭಿನಯದ ಚಿತ್ರಗಳು ಒಂದರಹಿಂದೊಂದು ಶುರುವಾಗುತ್ತಲೇ ಇವೆ. ಆದರೆ, ಬಿಡುಗಡೆ ಮಾತ್ರ ಆಗುತ್ತಿಲ್ಲ. ಕೋಮಲ್‍ ಕೈಯಲ್ಲಿ ಸದ್ಯಕ್ಕೆ ನಾಲ್ಕು ಚಿತ್ರಗಳಿದ್ದು, ನಾಲ್ಕು ಚಿತ್ರಗಳು ನಿರ್ಮಾಣ ವಿವಿಧ ಹಂತಗಳಲ್ಲಿವೆ. ಹೀಗಿರುವಾಗಲೇ, ಕೋಮಲ್‍ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ. ಅಂದಹಾಗೆ, ಕೋಮಲ್‍ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ (Sangeetha Bar and Restaurant) ಎಂದು ಹೆಸರಿಡಲಾಗಿದ್ದು, ಈ ಚಿತ್ರವನ್ನು ಸಂದೇಶ್‍್ ಶೆಟ್ಟಿ ಅಜ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್‍ ಈ ಹಿಂದೆ ‘ಕತ್ತಲೆ ಕೋಣೆ’, ‘ಇನಾಂದಾರ್’ ಮತ್ತು ‘ಗುಂಮ್ಟಿ’ ಚಿತ್ರಗಳನ್ನು ನಿರ್ಮಿಸಿದ್ದು,…

Read More

Golden Star Ganesh ಅಭಿನಯದಲ್ಲಿ ‘ಭರ್ಜರಿ’ ಚೇತನ್‍ ಹೊಸ ಚಿತ್ರ; ಅಕ್ಟೋಬರ್‌ನಲ್ಲಿ ಪ್ರಾರಂಭ 

ಸುಮಾರು ಎರಡು ವರ್ಷಗಳ ಹಿಂದೆ ಶುರುವಾಗಿತ್ತು ‘ಭರ್ಜರಿ’ ಚೇತನ್‍ ನಿರ್ದೇಶನದ ಹೊಸ ಚಿತ್ರ ‘ಬರ್ಮ’. ಆ ಚಿತ್ರವನ್ನು ಆದಷ್ಟು ಬೇಗ ಮುಗಿಸಿ, ಬಿಡುಗಡೆ ಮಾಡುವುದಾಗಿ ಚೇತನ್‍ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಚಿತ್ರ ಇನ್ನೂ ಬಿಡುಗಡೆಯಾಗಿರಲಿಲ್ಲ. ಆ ಚಿತ್ರ ಯಾವಾಗ ಬಿಡುಗಡೆಯೋ ಗೊತ್ತಿಲ್ಲ. ಅದಕ್ಕೂ ಮೊದಲೇ ಗಣೇಶ್‍ (Golden Star Ganesh) ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಅವರು ಘೋಷಿಸಿದ್ದಾರೆ.  ಇಂದು ಗಣೇಶ್‍ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಗಣೇಶ್‍ ಅಭಿನಯದ ಹೊಸ ಚಿತ್ರದ ಘೋಷಣೆಯಾಗಿದ್ದು, ಈ ಚಿತ್ರವನ್ನು ಚೇತನ್‍ ನಿರ್ದೇಶನ…

Read More