
ಚಿತ್ರಮಂದಿರಗಳಲ್ಲಿ ‘Ajnathavasi’ ನೋಡದವರಿಗೆ ಓಟಿಟಿಯಲ್ಲಿ ನೋಡಲು ಅವಕಾಶ
ಹೇಮಂತ್ ರಾವ್ ನಿರ್ಮಾಣದ, ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ‘ಅಜ್ಞಾತವಾಸಿ’ (Ajnathavasi) ಚಿತ್ರವು ಏಪ್ರಿಲ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಸಾಕಷ್ಟು ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಚಿತ್ರ, ಬಾಕ್ಸ್ ಆಫೀಸ್‍ನಲ್ಲಿ ಅಷ್ಟೇನೂ ದೊಡ್ಡ ಸದ್ದು ಮಾಡಲಿಲ್ಲ. ಈಗ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. ಈಗ ಚಿತ್ರವು ಜೀ 5ನಲ್ಲಿ ಇದೇ ಮೇ 28ರಿಂದ ಸ್ಟ್ರೀಮ್ ಆಗಲು ಸಜ್ಜಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿವೆ. ಈ ಚಿತ್ರದ ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಜೀ ಕನ್ನಡ…