Gajarama

ಫೆಬ್ರವರಿ 7ರಂದು ‘ಗಜರಾಮ’ನಾಗಿ ಬರಲಿದ್ದಾರೆ ರಾಜವರ್ಧನ್‍

ಕಳೆದ ವರ್ಷದ ಕೊನೆಯ ಶುಕ್ರವಾರದಂದು ರಾಜವರ್ಧನ್‍ ಅಭಿನಯದ ‘ಗಜರಾಮ’ ಚಿತ್ರವು ಬಿಡಗುಡೆಯಾಗಬೇಕಿತ್ತು. ಆದರೆ, ಡಿ. 25ರಂದು ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರವು ಬಿಡುಗಡೆಯಾದ ಕಾರಣ, ಅಂದು ‘ಗಜರಾಮ’ ಬರಲಿಲ್ಲ. ಮುಂದೆ ಯಾವಾಗ? ಎಂದು ಎಲ್ಲರೂ ಕೇಳುವಾಗಲೇ, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಇದೀಗ ಚಿತ್ರತಂಡ ಘೋಷಣೆ ಮಾಡಲಾಗಿದೆ. ‘ಗಜರಾಮ’ ಚಿತ್ರವನ್ನು ಫೆಬ್ರವರಿ 07ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಅದರಂತೆ ಅಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದು ‘ಗಜರಾಮ’ನಷ್ಟೇ ಅಲ್ಲ, ‘ಅನ್‍ಲಾಕ್‍ ರಾಘವ’, ‘ಎಲ್ಲೋ ಜೋಗಪ್ಪ ನಿನ್ನರಮನನೆ’,…

Read More
Theertharoopa-Thandeyavarige-Rachana-Inder

Theertha Roopa Thandeyavarige ;ಅಕ್ಷರಳಾದ ರಚನಾ ಇಂದರ್; ‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ನಾಯಕಿ ಸಿಕ್ಕಾಯ್ತು!

‘ಹೊಂದಿಸಿ ಬರೆಯಿರಿ’ ಚಿತ್ರದ ನಂತರ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಮತ್ತೊಂದು ಚಿತ್ರ ‘ತೀರ್ಥರೂಪ ತಂದೆಯವರಿಗೆ’. ಈ ಚಿತ್ರ ಕಳೆದ ವರ್ಷವೇ ಪ್ರಾರಂಭವಾಗಿ ಒಂದಿಷ್ಟು ಚಿತ್ರದ ಚಿತ್ರೀಕರಣ ಸಹ ಆಗಿತ್ತು. ಆದರೆ, ಚಿತ್ರದ ನಾಯಕಿ ಯಾರು ಎಂಬ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಚಿತ್ರಕ್ಕೆ ರಚನಾ ಇಂದರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ಡಾರ್ಲಿಂಗ್‍’ ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್‍ ಮಾಕ್ಟೇಲ್‍’ ಚಿತ್ರದ ಮೂಲಕ ಜನಪ್ರಿಯರಾದವರು ರಚನಾ ಇಂದರ್‍. ಆ ಚಿತ್ರದಲ್ಲಿ ಅವರ ‘ಹೆಂಗೆ ನಾವು …’ ಎಂಬ ಸಂಭಾಷಣೆಯಿಂದ…

Read More

Toxic Teaser: ಟಾಕ್ಸಿಕ್‌ನ ಕ್ರೇಜಿ಼ ಲುಕ್‌ ರಿವೀಲ್‌; ಯಶ್‌ ಬರ್ತ್‌ಡೇಗೆ ಕೆವಿಎನ್‌ನಿಂದ ಮಸ್ತ ಗಿಫ್ಟ್‌

2025ರ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ ಸಿನಿಮಾ ಝಲಕ್ ಬಿಡುಗಡೆಯಾಗಿದೆ. ಯಶ್‌ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಟಾಕ್ಸಿಕ್ ನಿರ್ಮಾಣ ಸಂಸ್ಥೆ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಬಿಡುಗಡೆ ಆದ ವಿಡಿಯೋದಲ್ಲಿ ಯಶ್‌ ಕಾರಿಂದ ಇಳಿದು ಪಬ್‌ಗೆ ಪ್ರವೇಶಿಸುತ್ತಾರೆ. ಇದನ್ನು ಗ್ಯಾಂಡ್‌ ಆಗಿ ಶೂಟ್‌ ಮಾಡಲಾಗಿದೆ. ಕೆಜಿಎಫ್‌ನಿಂದ ಯಶ್‌ನ ಮಾಸ್‌ ಹಾಗೇ ಕಂಟೀನ್ಯು ಆಗಿದೆ. ನೀಳವಾದ ಗಡ್ಡದಾರಿಯಾಗಿ ಸಿಗರೇಟ್‌ನ್ನು ಸ್ಟೈಲ್‌ ಆಗಿ ಸೇದುತ್ತಾ ಪಬ್‌ ಪ್ರವೇಶಿಸುವ ವಿಡಿಯೋ ಅಭಿಮಾನಿಗಳ ಶಿಳ್ಳೆ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನ ಇಲ್ಲ.

Read More
BengaluruI nternational Film Festival

BIFFes-2025; ಮಾರ್ಚ್ 01 ರಿಂದ 08ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಮಾರ್ಚ್ 01ರಿಂದ 08ರವರೆಗೆ ಬೆಂಗಳೂರಿನಲ್ಲಿನಡೆಯಲಿದ್ದು, ಈ ಬಾರಿ 13 ಚಿತ್ರಮಂದಿರಗಳಲ್ಲಿ 60ಕ್ಕೂ ಹೆಚ್ಚು ದೇಶಗಳ, 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿವೆ. ಈ ಚಿತ್ರಗಳ 400 ಪ್ರದರ್ಶನಗಳು ನಡೆಯಲಿವೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ನಾಗತಿಹಳ್ಳಿ ಚಂದ್ರಶೇಖರ್‍, ಧನಂಜಯ್‍, ನೀನಾಸಂ ಸತೀಶ್, ಭಾವನಾ, ಸಾಧು ಕೋಕಿಲ ಸೇರಿ ಹಲವರು ಭಾಗಿ‌ಯಾಗಿದ್ದಾರೆ. ಈ ವರ್ಷದ ಚಲನಚಿತ್ರೋತ್ಸವದ ವಿಷಯವಾಗಿ ʻಸರ್ವ ಜನಾಂಗದ ಶಾಂತಿಯ…

Read More