ಗಂಡಸರ ಪಾಲಿಗೆ ಆಕೆ ರಹಸ್ಯ, ಆಕೆಯ ಹೆಸರು ಭ್ರಮರಿ…

‘ಅವಳ‌ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ‌ ಮೇಲೆ ಉಳಿದೇ ಇಲ್ಲ. ಗಂಡಸರ ಪಾಲಿಗೆ ಆಕೆ ರಹಸ್ಯ. ಆಕೆಯ ಹೆಸರು ಭ್ರಮರಿ …’ ಈ ಸಾಲುಗಳ ಮೂಲಕ ನಟಿ ಹೆಬಾ ಪಟೇಲ್‌ ಅವರನ್ನು ಪರಿಚಯಿಸಲಾಗಿದೆ. ಕನ್ನಡಿಗರು ಹೆಬಾ ಪಟೇಲ್‌ ಅವರನ್ನು ಮರೆತಿರುವುದಕ್ಕೆ ಸಾಕು. ಏಕೆಂದರೆ, ಸುಮಾರು 10 ವರ್ಷಗಳ ಹಿಂದೆ ಶರಣ್‍ ಅಭಿನಯದ ‘ಅಧ್ಯಕ್ಷ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಹೆಬಾ ಪಟೇಲ್‍, ಆ ನಂತರ ಕನ್ನಡದಲ್ಲಿ ನಟಿಸಿರಲಿಲ್ಲ. ಕನ್ನಡಕ್ಕಿಂತೆ ತೆಲುಗು ಚಿತ್ರರಂಗದಲ್ಲೇ…

Read More
yash Toxic movie

ಕುಟುಂಬದವರು ಹೆಮ್ಮೆ ಪಡುವ ಕೆಲಸ ಮಾಡಿ; ಅಭಿಮಾನಿಗಳಲ್ಲಿ ಯಶ್ ಕರೆ

ಕೆಲವು ವರ್ಷಗಳಿಂದ ಯಶ್‍ ತಮ್ಮ ಹುಟ್ಟುಹಬ್ಬವನ್ನು (ಜನವರಿ 08) ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಊರಿನಲ್ಲಿರುವುದಿಲ್ಲ ಎಂಬ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯಾದರೂ ಯಶ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಬಾರಿಯೂ ಬೇಸರವಾಗಿದೆ. ಯಶ್‍ ಈ ಬಾರಿಯೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅಭಿಮಾನಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಈ ಬಾರಿ ಮನಸ್ಸಿಗೆ ನೋವಾಗುವಂತೆ ಮಾಡಬೇಡಿ ಎಂದು ಮನವಿ ಮಾಡಿರುವ ಯಶ್‍, ‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ…

Read More
Dhananjay

ಮದುವೆ ಸಂಭ್ರಮದಲ್ಲಿ ತನ್ನೂರಿನ ಶಾಲೆಗೆ ಹೈಟೆಕ್‌ ಸ್ಪರ್ಶ ಕೊಡಿಸಿದ ಧನಂಜಯ್‍

ನಟ-ನಿರ್ಮಾಪಕ ಧನಂಜಯ್‍ ಮದುವೆ ತಯಾರಿಯಲ್ಲಿದ್ದಾರೆ. ಫೆಬ್ರವರಿ 16ರಂದು ಅವರು ಮೈಸೂರಿನಲ್ಲಿ ಧನ್ಯತಾ ಜೊತೆಗೆ ವಿವಾಹವಾಗಲಿದ್ದು, ಅದಕ್ಕೂ ಮೊದಲು ಸಮಯ ಸಿಕ್ಕಾಗಲೆಲ್ಲಾ ಗಣ್ಯರಿಗೆ ಮದುವೆ ಆಮಂತ್ರಣ ನೀಡುತ್ತಿದ್ದಾರೆ. ಈಗಾಗಲೇ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ ಸೇರಿದಂತೆ ಹಲವರಿಗೆ ಮದುವೆಗೆ ಆಮಂತ್ರಣ ನೀಡಿದ್ದಾರೆ. ಈ ಮಧ್ಯೆ, ಅವರು ತಾವು ಹುಟ್ಟಿದ ಊರಿನ ಶಾಲೆಯಲ್ಲಿ ಓದದೇ ಇದ್ದರೂ ತವರೂರಿನ ಶಾಲೆಗೆ ಹೊಸ ರೂಪ ನೀಡುತ್ತಿದ್ದಾರೆ. ತಮ್ಮ ಮದುವೆಯ ಸಂದರ್ಭವನ್ನು ಸಾರ್ಧಕಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ…

Read More
Loose Maada Yogesh Sidlingu 2 Release Date

‘ಸಿದ್ಲಿಂಗು 2’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ …

ಕಳೆದ ವರ್ಷ ದಸರಾ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ವಿಜಯಪ್ರಸಾದ್‍. ಆದರೆ, ಅವರು ಅಂದುಕೊಂಡಂತೆ ಆಗಲಿಲ್ಲ. ಇದೀಗ ಪ್ರೇಮಿಗಳ ದಿನದಂದು ಸಿದ್ಲಿಂಗು 2’ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದ್ದು, ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 12 ವರ್ಷಗಳ ಹಿಂದೆ ‘ಸಿದ್ಲಿಂಗು’ ಚಿತ್ರದ ಮೂಲಕ ನಿರ್ದೇಶಕರಾದವರು ವಿಜಯಪ್ರಸಾದ್‍. ಈಗ ಆ ಚಿತ್ರದ ಮುಂದುವರೆದ ಭಾಗದೊಂದಿಗೆ ಅವರು ವಾಪಸ್ಸಾಗುತ್ತಿದ್ದಾರೆ. ಯೋಗಿ ಇಲ್ಲೂ ಮುಂದುವರೆಯಲಿದ್ದು, ನಾಯಕಿಯಾಗಿ ಸೋನು ಕಾಣಿಸಿಕೊಂಡಿದ್ದಾರೆ. ಜೊತೆಗೆ ಆ ಚಿತ್ರದಲ್ಲಿ ಅಭಿನಯಿಸಿದ್ದ ಗಿರಿಜಾ…

Read More