
BIFFes-2025; ಮಾರ್ಚ್ 01 ರಿಂದ 08ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಮಾರ್ಚ್ 01ರಿಂದ 08ರವರೆಗೆ ಬೆಂಗಳೂರಿನಲ್ಲಿನಡೆಯಲಿದ್ದು, ಈ ಬಾರಿ 13 ಚಿತ್ರಮಂದಿರಗಳಲ್ಲಿ 60ಕ್ಕೂ ಹೆಚ್ಚು ದೇಶಗಳ, 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿವೆ. ಈ ಚಿತ್ರಗಳ 400 ಪ್ರದರ್ಶನಗಳು ನಡೆಯಲಿವೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ನಾಗತಿಹಳ್ಳಿ ಚಂದ್ರಶೇಖರ್, ಧನಂಜಯ್, ನೀನಾಸಂ ಸತೀಶ್, ಭಾವನಾ, ಸಾಧು ಕೋಕಿಲ ಸೇರಿ ಹಲವರು ಭಾಗಿಯಾಗಿದ್ದಾರೆ. ಈ ವರ್ಷದ ಚಲನಚಿತ್ರೋತ್ಸವದ ವಿಷಯವಾಗಿ ʻಸರ್ವ ಜನಾಂಗದ ಶಾಂತಿಯ…