
‘ಭಾರ್ಗವ’ನಾದ Upendra; Naganna ನಿರ್ದೇಶನದಲ್ಲಿ ಹೊಸ ಚಿತ್ರ
‘UI’ ಚಿತ್ರದ ನಂತರ ಉಪೇಂದ್ರ (Upendra) ಯಾವೊಂದು ಚಿತ್ರವನ್ನೂ ಒಪ್ಪಿರುವ ಸುದ್ದಿ ಇರಲಿಲ್ಲ. ಈ ಮಧ್ಯೆ, ‘ಸೂರಪ್ಪ’ ಬಾಬು (Surappa Babu) ನಿರ್ಮಾಣದ ಮತ್ತು ನಾಗಣ್ಣ (Naganna) ನಿರ್ದೇಶನದ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇದೀಗ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಯುಗಾದಿ ಹಬ್ಬದಂದು ಚಿತ್ರ ಘೋಷಣೆಯಾದಾಗಲೇ, ಅಕ್ಷಯ ತೃತೀಯ ದಿನದಂದು ಚಿತ್ರದ ಹೆಸರು ಘೋಷಣೆ ಆಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಚಿತ್ರದ ಘೋಷಣೆ ಆಗಿದ್ದು, ಚಿತ್ರಕ್ಕೆ…