
Di Di Dikki; ಗಣೇಶ್ ಮಗನ ಜೊತೆಗೆ ‘ಡಿ ಡಿ ಢಿಕ್ಕಿ’ ಹೊಡೆಯುತ್ತಿದ್ದಾರೆ ಪ್ರೇಮ್
‘ನೆನಪಿರಲಿ’ ಪ್ರೇಮ್ (Nenapirali Prem) ಇತ್ತೀಚೆಗಷ್ಟೇ ‘ಸ್ಪಾರ್ಕ್’ (Spark) ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಅದರ ಜೊತೆಗೆ ಅವರು ನಟಿ ಮತ್ತು ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ರಂಜಿನಿ ರಾಘವನ್ (Ranjani Raghavan) ನಿರ್ದೇಶನದ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಚಿತ್ರತಂಡ ಇಷ್ಟು ದಿನ ಗೌಪ್ಯವಾಗಿಟ್ಟಿತ್ತು. ಈಗ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು, ಚಿತ್ರಕ್ಕೆ ‘ಡಿ ಡಿ ಢಿಕ್ಕಿ’ (Di Di Dikki) ಎಂಬ ಹೆಸರನ್ನು ಇಡಲಾಗಿದೆ. ‘ಡಿ ಡಿ ಢಿಕ್ಕಿ’ ಚಿತ್ರವನ್ನು ನಿರ್ದೇಶಕ ಜಡೇಶ್ ಕೆ. ಹಂಪಿ, ರಾಮಕೃಷ್ಣ…