Siddaramaiah-Meets-Shivarajkumar

Siddaramaiah Meets Shivarajkumar; ಶಿವರಾಜಕುಮಾರ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಡಿಸೆಂಬರ್‌ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆಂದು ಅಮೇರಿಕಾಗೆ ಹೋಗಿದ್ದ ಶಿವರಾಜಕುಮಾರ್‌, ಭಾನುವಾರವಷ್ಟೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಅವರನ್ನು ಚಿತ್ರರಂಗದವರು, ಅಭಿಮಾನಿಗಳು ಮತ್ತು ಹಿತೈಷಿಗಳು ಭವ್ಯವಾಗಿ ಬರಮಾಡಿಕೊಂಡಿದ್ದಾರೆ. ಶಿವರಾಜಕುಮಾರ್‌ ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಕ್ಯಾನ್ಸರ್‍ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಮಧ್ಯೆ, ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಶಿವರಾಜಕುಮರ್‌ ( Shivarajkumar) ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಸೋಮವಾರ ಬೆಳಿಗ್ಗೆ ಶಿವರಾಜಕುಮಾರ್ ಮನೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಕೆಲವು ಸಮಯ ಅವರ ನಿವಾಸದಲ್ಲಿ ಕಳೆಯುವುದರ ಜೊತೆಗೆ ಆದಷ್ಟು ಬೇಗ ಗುಣಮುಖರಾಗಿ ಎಂದು…

Read More
Chikkanna-new film director-producer-AP-Arjuns-Lakshmiputra

Chikkanna; ಕರೊನಾ ಸಮಯದಲ್ಲಿ ಹುಟ್ಟಿಕೊಂಡ ತಾಯಿ-ಮಗನ ಕಥೆ ‘ಲಕ್ಷ್ಮೀಪುತ್ರ’

ಕೆಲವು ದಿನಗಳ ಹಿಂದೆ ಚಿಕ್ಕಣ್ಣ ಅಭಿನಯದಲ್ಲಿ ‘ಲಕ್ಷ್ಮೀಪುತ್ರ’ ಎಂಬ ಚಿತ್ರವನ್ನು ಘೋಷಿಸಿದ್ದರು ಎ.ಪಿ. ಅರ್ಜುನ್‍. ಈಗ ಆ ಚಿತ್ರದ ಮುಹೂರ್ತ ಸದ್ದಿಲ್ಲದೆ ಬೆಂಗಳೂರಿನಲ್ಲಿ ನೆರವೇರಿದೆ. ನಾಗರಬಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಎ.ಪಿ. ಅರ್ಜುನ್ ಫಿಲಂಸ್ ಅಡಿಯಲ್ಲಿ ಈ ಚಿತ್ರವನ್ನು ಅರ್ಜುನ್‍ ಪತ್ನಿ ನಿರ್ಮಿಸಿದರೆ, ಅರ್ಜುನ್‍ ಚಿತ್ರಗಳಿಗೆ ಕೆಲಸ ಮಾಡಿದ್ದ ವಿಜಯ್‍ ಸ್ವಾಮಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಎ.ಪಿ. ಅರ್ಜುನ್‍ ಕಥೆ ಬರೆದಿದ್ದಾರಂತೆ. ‘ಲಕ್ಷ್ಮೀಪುತ್ರ’ ಚಿತ್ರವು…

Read More
Sanchi, Kiccha Sudeep, Sanchith New Movie

Sanchith Sanjeev; ಕೊನೆಗೂ ಶುರುವಾಯ್ತು ಸುದೀಪ್‍ ಸೋದರಳಿಯನ ಚಿತ್ರ

ಸುದೀಪ್‍ ಅವರ ಅಕ್ಕನ ಮಗ ಸಂಚಿತ್ ಸಂಜೀವ್‍ ಅಲಿಯಾಸ್‍ ಸಂಚಿ ಅಭಿನಯದಲ್ಲಿ ಎರಡೂವರೆ ವರ್ಷಗಳ ಹಿಂದೆ ‘ಜಿಮ್ಮಿ’ ಎಂಬ ಚಿತ್ರ ಘೋಷಣೆಯಾಗಿತ್ತು. ಚಿತ್ರದಲ್ಲಿ ಸಂಚಿ ಹೀರೋ ಅಷ್ಟೇ ಅಲ್ಲ, ನಿರ್ದೇಶಕರಾಗಿಯೂ ಚಿತ್ರರಂಗಕ್ಕೆ ಪರಿಚಿತರಾಗಬೇಕಿತ್ತು. ಆದರೆ, ಕಾರಣಾಣಂತರಗಳಿಂದ ಚಿತ್ರ ಶುರುವಾಗಲೇ ಇಲ್ಲ. ಈಗ ಸಂಚಿ ಇನ್ನೊಂದು ಚಿತ್ರದ ಮೂಲಕ ಹೀರೋ ಆಗುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಚಿತ್ರದ ಮುಹೂರ್ತವಾಗಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ಕ್ಲಾಪ್‍ ಮಾಡಿದರೆ, ಅಶ್ವಿನಿ ಪುನೀತ್ ರಾಜಕುಮಾರ್…

Read More
Kiccha-Sudeep-Turns-Down-Karnataka-State-Film-Award

Kiccha Sudeep; ಅತ್ಯುತ್ತಮ ನಟ ಪ್ರಶಸ್ತಿಯನ್ನು ತಿರಸ್ಕರಿಸಿದ ಸುದೀಪ್‍; ಅರ್ಹರಿಗೆ ಕೊಡಲು ಮನವಿ

2019ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು (Karnataka State Film Award) ಬುಧವಾರ ಘೋಷಣೆಯಾಗಿದೆ. ಪ್ರಶಸ್ತಿಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ, ತಮಗೆ ಸಿಕ್ಕ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸುದೀಪ್‍ (Kichcha Sudeep) ತಿರಸ್ಕರಿಸಿದ್ದಾರೆ. ಈ ಪ್ರಶಸ್ತಿಯನ್ನು ಅರ್ಹರಿಗೆ ಕೊಡಿ ಎಂದು ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಪೈಲ್ವಾನ್‍’ ಚಿತ್ರದ ಅಭಿನಯಕ್ಕಾಗಿ ಸುದೀಪ್‍ ಅವರಿಗೆ ರಾಜ್ಯ ಸರ್ಕಾರವು ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಿತ್ತು. ಇದು ಅವರಿಗೆ ಸಿಗುತ್ತಿರುವ ಎರಡನೇ ಪ್ರಶಸ್ತಿ. ಈ ಹಿಂದೆ ‘ನಂದಿ’ ಚಿತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಸುದೀಪ್‍ಗೆ…

Read More