ಬೇರೆ ಭಾಷೆ ಸಿನಿಮಾ ನೋಡ್ತೀರಾ, ಕನ್ನಡ ಸಿನಿಮಾ ಯಾಕೆ ನೋಡಲ್ಲ?: ಶಿವಣ್ಣ ಪ್ರಶ್ನೆ

‘ಬೇರೆ ಭಾಷೆ ಸಿನಿಮಾಗಳನ್ನೆಲ್ಲಾ ನೋಡುತ್ತಾರೆ. ನಮ್ಮ ಭಾಷೆಯ ಚಿತ್ರಗಳನ್ನು ಯಾಕೆ ನೋಡುವುದಿಲ್ಲ. ಇಲ್ಲೂ ಅದ್ಭುತವಾದ ತಂತ್ರಜ್ಞರು ಇದ್ದಾರೆ. ಅವರೆಲ್ಲರೂ ಬೆಳೆಯಬೇಕು ಎಂದರೆ, ನಿಮ್ಮೆಲ್ಲರ ಪ್ರೋತ್ಸಾಹ ಬೇಕು’ ಎಂದು ಶಿವರಾಜಕುಮಾರ್‌ (Shiva Rajkumar) ಹೇಳಿದ್ದಾರೆ. ಶಿವರಾಜಕುಮಾರ್ ಹೀಗೆ ಮಾತನಾಡಿದ್ದು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರದ ಪ್ರೀ-ರಿಲೀಸ್‍ ಇವೆಂಟ್‍ನಲ್ಲಿ. ಈ ಚಿತ್ರವು ಜೂನ್‍ 06ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಭಾನುವಾರ, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಚಿತ್ರದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…

Read More

ಜೂನ್‍ 06ರಂದು ಬಿಡಗಡೆ ಆಗ್ತಿಲ್ಲ ‘Ekka’; ಬಿಡುಗಡೆ ಯಾವಾಗ?

ಬಿಡುಗಡೆಗೆ 10 ದಿನಗಳಷ್ಟೇ ಇವೆ, ಆದರೆ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಬಹುಶಃ ಚಿತ್ರದ ಬಿಡುಗಡೆಗೆ ಮುಂದಕ್ಕೆ ಹೋಗಿರಬಹುದು ಎಂಬ ಗುಸುಗುಸು ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಅದೀಗ ನಿಜವಾಗಿದೆ ಅಷ್ಟೇ. ಜೂನ್‍ 06ರಂದು ಬಿಡುಗಡೆ ಆಗಬೇಕಿದ್ದ ಯುವ ರಾಜಕುಮಾರ್‍ ಚಿತ್ರವು ಮುಂದಕ್ಕೆ ಹೋಗಿದ್ದು, ಇದೀಗ ಜುಲೈ 18ರಂದು ಬಿಡುಗಡೆಯಾಗಲಿದೆ. ’ಎಕ್ಕ’ (Ekka) ಚಿತ್ರದ ಮುಹೂರ್ತದ ದಿನವೇ ಚಿತ್ರವನ್ನು ಜೂನ್‍ 06ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಚಿತ್ರದ ಬಿಡುಗಡೆ ಹತ್ತಿರ ಬಂದರೂ, ಬಿಡುಗಡೆಯ ಮಾತಿರಲಿಲ್ಲ….

Read More

ಕೆಡಿ – ದಿ ಡೆವಿಲ್‍’ ಚಿತ್ರದಲ್ಲಿ ಸುದೀಪ್‍? ಹೀಗೊಂದು ಗುಸುಗುಸು …

‘ಜೋಗಿ’ ಪ್ರೇಮ್‍ ನಿರ್ದೇಶನದ ‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ‘ಸೆಟ್‍ ಆಗೋಲ್ಲ ಕಣೆ ನಂಗೂ ನಿಂಗೂ…’ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ, ಚಿತ್ರದ ಬಗ್ಗೆ ಒಂದು ಗುಸುಗುಸು ಕೇಳಿ ಬರುತ್ತಿದೆ. ಅದೇನೆಂದರೆ, ನಟ ಸುದೀಪ್‍ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ‘ಕೆಡಿ – ದಿ ಡೆವಿಲ್‍’ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸುವುದರ ಜೊತೆಗೆ ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍ ಮುಂತಾದವರು ನಟಿಸಿದ್ದಾರೆ. ಈಗ ಬಂದಿರುವ ಸುದ್ದಿಯ…

Read More

Prabhas ಆಯ್ತು, ಈಗ Hrithik Roshan ಅಭಿನಯದಲ್ಲಿ Hombale Films ಚಿತ್ರ ನಿರ್ಮಾಣ

ರಿಷಭ್‍ ಶೆಟ್ಟಿ (Rishabh Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’  ಚಿತ್ರವನ್ನು ಹೊರತುಪಡಿಸಿದರೆ, ಹೊಂಬಾಳೆ ಫಿಲಂಸ್‍ (Hombale Films) ಯಾವುದೇ ಹೊಸ ಚಿತ್ರವನ್ನು ಶುರು ಮಾಡಿಲ್ಲ. ಪ್ರಭಾಸ್‍ (Prabhas) ಅಭಿನಯದ ಮೂರು ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದೆಯಾದರೂ, ಆ ಯಾವುದೇ ಚಿತ್ರಗಳು ಇನ್ನೂ ಶುರುವಾಗಿಲ್ಲ. ಹೀಗಿರುವಾಲೇ, ಹೊಂಬಾಳೆ ಫಿಲಂಸ್‍ ಸಂಸ್ಥೆಯು ಬಾಲಿವುಡ್‍ ನಟ ಹೃತಿಕ್‍ ರೋಶನ್ (Hrithik Roshan) ಅಭಿನಯದಲ್ಲಿ ಪ್ಯಾನ್‍ ಇಂಡಿಯಾ (Pan India) ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದೆ. ಈ ಸಂಬಂಧ, ಬುಧವಾರ…

Read More