‘ಕೌಂತೇಯ’ನಾದ Achyuth Kumar; ಹೊಸ ಕ್ರೈಂ ಸ್ಟೋರಿಗೆ ಚಾಲನೆ

‘ಕೌಂತೇಯ’ ಎಂದರೆ ಮಹಾಭಾರತದ ಕರ್ಣನ ಇನ್ನೊಂದು ಹೆಸರು. ಇದೀಗ ಇದೇ ಹೆಸರಿಟ್ಟುಕೊಂಡು, ಒಂದು ಚಿತ್ರ ಸದ್ದಿಲ್ಲದೆ ಪ್ರಾರಂಭವಾಗಿದೆ. ಹಾಗಂತ ಇದು ಪೌರಾಣಿಕ ಚಿತ್ರವಲ್ಲ, ಇದೊಂದು ಕ್ರೈಂ ಸ್ಟೋರಿಯಂತೆ. ಕಥೆಗೆ ಇದೇ ಹೆಸರು ಸೂಕ್ತ ಎಂದು ಈ ಹೆಸರು ಇಡಲಾಗಿದೆ. ‘ಕೌಂತೇಯ’ ಚಿತ್ರದ ಮುಹೂರ್ತ ಇತ್ತೀಚೆಗೆ ಸದ್ದಿಲ್ಲದೆ ಮುಗಿದಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ (Achyuth Kumar) ಹಾಗೂ ಶರಣ್ಯ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಹಿರಿಯ ನಟ ಶಶಿಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‍ ಮಾಡಿ ಚಿತ್ರತಂಡಕ್ಕೆ ಶುಭ…

Read More

ದೆವ್ವದ ಜೊತೆಗೆ ಬಂದ ಸುಧಾರಾಣಿ, ಎರಡೇ ಪಾತ್ರಗಳ ಸುತ್ತ ‘ಘೋಸ್ಟ್’

ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರದ ಮೂಲಕ ನಾಯಕಿಯಾದ ಸುಧಾರಾಣಿ, ಕಳೆದ 39 ವರ್ಷಗಳಲ್ಲಿ ನೂರಾರು ಚಿತ್ರಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದಾರೆ. ಈಗ ಮೊದಲ ಬಾರಿಗೆ ಅವರು ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಚಿತ್ರ ನಿರ್ಮಾಣ ಎಂದರೆ ಅದು ಪೂರ್ಣಪ್ರಮಾಣದ ಚಿತ್ರವಲ್ಲ, ಕಿರುಚಿತ್ರ. ಹೆಸರು ‘ಘೋಸ್ಟ್ – ದಿ ದೆವ್ವ’ (Ghost – The Devva). ಸುಧಾರಾಣಿ (Sudharani) ನಿರ್ಮಿಸಿ, ನಟಿಸಿದ ‘ಘೋಸ್ಟ್’, ಸಸ್ಪೆನ್ಸ್ ಥ್ರಿಲ್ಲರ್ ಅಂಶವನ್ನು ಹೊಂದಿದ್ದು, ಜಗತ್ತಿನಲ್ಲಿ ಒಳ್ಳೆಯದು ಹೇಗಿದೆಯೋ ಹಾಗೆಯೇ ಕೆಟ್ಟದ್ದು ಇದೆ ಎಂಬ ಅಂಶವನ್ನು ಸಾರುತ್ತದೆ….

Read More

ಪ್ರಭಾಸ್ ನಟನೆಯ ‘The Raja Saab’ ಬಿಡುಗಡೆ ಯಾವಾಗ ಗೊತ್ತಾ?

ಪ್ರಭಾಸ್‍ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರದ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂದಿದೆ. ಈ ಮಧ್ಯೆ, ಪ್ರಭಾಸ್‍ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಪ್ರಭಾಸ್‍ ಅಭಿನಯದ ಚಿತ್ರವೊಂದರ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕಾದಿರುವಾಗಲೇ, ಕೊನೆಗೂ ಉತ್ತರ ಸಿಕ್ಕಿದೆ. ಪ್ರಭಾಸ್‌ ನಟನೆಯ ‘ರಾಜಾ ಸಾಬ್’ (The Raja Saab) ಸಿನಿಮಾದಿಂದ ಬಿಗ್ ಅಪ್ಡೇಡ್ ಹೊರಬಿದ್ದಿದೆ. ಚಿತ್ರವು ಇದೇ ವರ್ಷದ ಡಿಸೆಂಬರ್ 5ರಂದು ‘ದಿ ರಾಜಾ ಸಾಬ್’ ಚಿತ್ರವು ತೆರೆಗೆ ಬರಲಿದೆ. ಇದೇ ಜೂನ್ 16ರಂದು ಟೀಸರ್…

Read More

ಮುಗಿಯಿತು `The Devil’ ಚಿತ್ರದ ಮಾತಿನ ಭಾಗದ ಚಿತ್ರೀಕರಣ …

ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡುವುದಕ್ಕೆ ನ್ಯಾಯಾಲಯವು ದರ್ಶನ್‍ಗೆ ಕೆಲವೇ ದಿನಗಳ ಹಿಂದಷ್ಟೇ ಅನುಮತಿ ನೀಡಿದೆ. ಸದ್ಯದಲ್ಲೇ ದರ್ಶನ್‍ (Thoogudeepa Darshan) ವಿದೇಶಕ್ಕೆ ಹಾರಲಿದ್ದು, ‘ದಿ ಡೆವಿಲ್‍’ (The Devil) ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಮಧ್ಯೆ, ಚಿತ್ರತಂಡದಿಂದ ಸುದ್ದಿಯೊಂದು ಬಂದಿದ್ದು, ‘ದಿ ಡೆವಿಲ್‍’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣ ಕೆಲವು ತಿಂಗಳುಗಳ ಹಿಂದೆಯೇ ಶುರುವಾಗಿತ್ತು. ಆದರೆ, ಚಿತ್ರ ಯಾವ ಹಂತದಲ್ಲಿದೆ? ಎಷ್ಟು ಮುಗಿದಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ….

Read More