ಹಸು, ಹುಲಿಯಾದ ಕಥೆ ‘Maarnami’; ಟೀಸರ್‌ ಬಿಡುಗಡೆ

‘ಗಿಣಿರಾಮ’ ಧಾರಾವಾಹಿಯಲ್ಲಿ ಗಮನಸೆಳೆದಿದ್ದ ರಿತ್ವಿಕ್‍ ಮಾತಾಡ್‍, ಇದೀಗ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಾರ್ನಮಿ’ (Maarnami) ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಿದ್ದು, ಈ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಶೇಷವೆಂದರೆ, ಇತ್ತೀಚೆಗೆ ರಿತ್ವಿಕ್‍ ಹುಟ್ಟುಹಬ್ಬದಂದೇ ಟೀಸರ್‌ ಬಿಡುಗಡೆ ಆಗಿದೆ. ‘ಸಿಂಪಲ್‍’ಸ ಸುನಿ ಮತ್ತು ಕಾರ್ತಿಕ್‍ ಮಹೇಶ್‍ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ‘ಮಾರ್ನಮಿ’ ಚಿತ್ರವನ್ನು ಗುಣಾಧ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿ, ಶಿಲ್ಪಾ ನಿಶಾಂತ್‍ ನಿರ್ಮಿಸಿದ್ದಾರೆ. ರಿತ್ವಿಕ್‍ಗೆ ನಾಯಕಿಯಾಗಿ ಚೈತ್ರಾ ಆಚಾರ್‌ ನಟಿಸಿದ್ದು, ಸೋನು ಒಂದು ಪ್ರಮುಖ ಪಾತ್ರದಲ್ಲಿ…

Read More

Eltuu Muthaa – ನವಿಲು ಹಾಗೂ ಸರ್ಪದ ನಡುವಿನ ಸಂಘರ್ಷ

ನವಿಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆ ‘ಎಲ್ಟು ಮುತ್ತಾ’ ಮುಗ್ದ ಸ್ವಭಾವದ ನವೀಲನ್ನು ಕೆಣಕಿದರೆ, ಅದು ಕೆರಳಿದರೆ,‌ ಆಗ ಕಾಳಿಂಗ ಸರ್ಪವನ್ನು ಕೊಲ್ಲುತ್ತದಂತೆ. ಇಂಥದ್ದೊಂದು ಕಥೆಯನ್ನು ಇಟ್ಟುಕೊಂಡು ಹೊಸಬರ ತಂಡವೊಂದು ಸದ್ದಿಲ್ಲದೆ ‘ಎಲ್ಟು ಮುತ್ತಾ’ (Eltuu Muthaa) ಎಂಬ ಚಿತ್ರವನ್ನು ಮಾಡಿ ಮುಗಿಸಿದೆ. ಕಳೆದ ವರ್ಷ ಪ್ರಾರಂಭವಾದ ಈ ಚಿತ್ರವು, ಇದೀಗ ಮುಕ್ತಾಯವಾಗಿದ್ದು, ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಕಥೆಯ ಸಾರ ಹೇಳುವ ಕೆಣಕು ನೋಟ ಇಲ್ಲಿದೆ..

Read More

ಯೂಟ್ಯೂಬ್‌ ʻಪೇ ಪರ್‌ ವೀವ್‌ʼಗೆ ತೆಲೆಕೆಡಿಸಿಕೊಂಡ Netflix; OTTಗೆ ಪರ್ಯಾಯ ಆಗುತ್ತಾ YouTube

ಉಚಿತ ಮನರಂಜನೆಗಳನ್ನು ನೀಡುತ್ತಿರುವ YouTube ಮುಂದೊಂದು ದಿನ ಓಟಿಟಿಗಳಿಗೆ ದೊಡ್ಡ ಸ್ಪರ್ಧಾಳು ಆಗಲಿದೆಯಾ ಎಂಬ ಪ್ರಶ್ನೆ ಇತ್ತೀಚೆಗೆ ಮೂಡಿ ಬಂದಿದೆ. ಇದಕ್ಕೆ ಕಾರಣ ಇತ್ತೀಚೆಗೆ ನೆಟ್‌ಫಿಕ್ಸ್‌ ನಡೆ. ಹೌದು, ಆಮೀರ್ ಖಾನ್‍ ಅಭಿನಯದ ‘Sitaare Zameen Par’ ಚಿತ್ರವು ಜೂನ್‍.20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಡಿಜಿಟಲ್‍ ಹಕ್ಕುಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಕ್ಕುಗಳನ್ನು ಪಡೆಯುವುದಕ್ಕೆ Netflix 125 ಕೋಟಿ ರೂ. ಆಫರ್ ನೀಡಿದೆ ಎಂದು ಹೇಳಲಾಗುತ್ತಿದೆ. 125 ಕೋಟಿ ಕೊಟ್ಟದ್ದು ದೊಡ್ಡ ವಿಷಯವೇನಲ್ಲ ಏಕೆಂದರೆ,…

Read More

‘ಸಾಲುಮರದ ತಿಮ್ಮಕ್ಕ’ನ ಪಾತ್ರದಲ್ಲಿ ನಟಿ Soujanya…

ಕರ್ನಾಟಕದಲ್ಲಿ ‘ವೃಕ್ಷಮಾತೆ’ ಎಂದೇ ಖ್ಯಾತರಾಗಿರುವ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಈಗ ಸಿನಿಮಾ ರೂಪದಲ್ಲಿ ಬರಲಿದೆ. ವೃಕ್ಷಗಳನ್ನೇ ಮಕ್ಕಳಾನ್ನಾಗಿ ಕಂಡು ಲೆಕ್ಕವಿಲ್ಲದಷ್ಟು ಮರಗಳನ್ನು ಬೆಳೆಸಿ ಪೋಷಿಸಿ ಇಡೀ ಜಗತ್ತಿಗೆ ಮಾದರಿಯಾಗಿರುವ ತಿಮ್ಮಕ್ಕನವರ ಕುರಿತ ಈ ಚಿತ್ರವನ್ನು ಶ್ರೀ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ಕುಮಾರ್ ಎಚ್.ಆರ್, ಸೌಜನ್ಯ ಡಿ.ವಿ, ಎ. ಸಂತೋಷ್ ಮುರಳಿ ಹಾಗೂ ಶ್ರೀ ನಿರ್ಮಾಣದ ಈ ಚಿತ್ರವು ಡಾ. ನೆಲ್ಲಿಕಟ್‍ಟೆ ಎಸ್. ಸಿದ್ದೇಶ್ ಅವರ…

Read More