
Rachitha Ram ವಿರುದ್ಧ ಕ್ರಮ ಕೈಗೊಳ್ಳಿ; ವಾಣಿಜ್ಯ ಮಂಡಳಿಗೆ ನಾಗಶೇಖರ್ ಆಗ್ರಹ
‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ಬರದೆ ಆಟ ಆಡಿಸುತ್ತಿರುವ ನಟಿ ರಚಿತಾ ರಾಮ್(Rachitha Ram) ವಿರುದ್ಧ ನಾಗಶೇಖರ್ ಸಿಡಿದಿದ್ದಿದ್ದಾರೆ. ಮಂಗಳವಾರ ತಮ್ಮ ತಂಡದ ಸದಸ್ಯರ ಜೊತೆಗೆ ವಾಣಿಜ್ಯ ಮಂಡಳಿಗೆ ಹೋಗಿ ರಚಿತಾ ರಾಮ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ರಚಿತಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಿರ್ಮಾಪಕರು ಒಂದು ಚಿತ್ರಕ್ಕೆ ಕೋಟ್ಯಂತರ ಬಂಡವಾಳ ಹೂಡಿರುತ್ತಾರೆ. ಕಲಾವಿದರಿಗೆ ಸಂಭಾವನೆ, ಗೌರವ, ಊಟ ಎಲ್ಲವೂ ಕೊಟ್ಟಿರುತ್ತಾರೆ. ಕಲಾವಿದರು…