
L2: Empuraan; ಕರ್ನಾಟಕಕ್ಕೆ ‘L2E: ಎಂಪುರಾನ್’ ಚಿತ್ರ ತಂದ ಹೊಂಬಾಳೆ ಫಿಲಂಸ್
ಈ ವರ್ಷದ ಬಹುನಿರೀಕ್ಷಿತ ಮಲಯಾಳಂ ಚಿತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ‘L2E: ಎಂಪುರಾನ್’ (L2: Empuraan) ಚಿತ್ರ ಸಹ ಒಂದು. ಮಾರ್ಚ್ 27ರಂದು ಈ ಚಿತ್ರವು ಬಿಡುಗಡೆಯಾಗುತ್ತಿದ್ದು, ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆಯು ವಿತರಿಸುತ್ತಿದೆ. ‘L2E: ಎಂಪುರಾನ್’ ಚಿತ್ರವು 2019ರಲ್ಲಿ ಬಿಡುಗಡೆಯಾದ ‘ಲೂಸಿಫರ್’ ಚಿತ್ರದ ಮುಂದುವರೆದ ಭಾಗವಾಗಿದ್ದು, ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ನಟ ಪೃಥ್ವಿರಾಜ್ ಸುಕುಮಾರನ್ ಮೊದಲ ಬಾರಿಗೆ ನಿರ್ದೇಶಕರಾದರು. ಈ ಚಿತ್ರ ಯಶಸ್ವಿಯಾಗುವುದಷ್ಟೇ ಅಲ್ಲ, ತೆಲುಗಿನಲ್ಲಿ ರೀಮೇಕ್ ಸಹ ಆಗಿತ್ತು. ಈ ಚಿತ್ರದ ಯಶಸ್ಸಿನಿಂದ…