Vijay Rargavendra in Rudrabhishekam; ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ವಿಜಯ ರಾಘವೇಂದ್ರ

ಕರ್ನಾಟಕದ ಜನಪ್ರಿಯ ಜಾನಪದ ಕಲೆಗಳಲ್ಲಿ ವೀರಗಾಸೆ (Veeragase) ಸಹ ಒಂದು. ವೀರಗಾಸೆ ಕಲೆ ಹಾಗೂ ಅದರ ಅಧಿದೇವರಾದ ವೀರಭದ್ರ (veerabhadra) ದೇವರ ಇತಿಹಾಸವನ್ನು ಹೇಳುವ ‘ರುದ್ರಾಭಿಷೇಕಂ’(Rudrabhishekam) ಎಂಬ ಚಿತ್ರ ತಯಾರಾಗುತ್ತಿದ್ದು, ವೀರಗಾಸೆ ಗೆಟಪ್‍ನಲ್ಲಿ ವಿಜಯ್‍ ರಾಘವೇಂದ್ರ (Vijaya Rargavendra) ಕಾಣಿಸಿಕೊಂಡಿದ್ದಾರೆ. ವೀರಗಾಸೆ ಕುಟುಂಬವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಆ ಕಲೆಯ ಮೂಲ, ಆ ಕಲಾವಿದರ ಇತಿಹಾಸವನ್ನು ಕಮರ್ಷಿಯಲ್ ಕಥೆಯ ಮೂಲಕ ಹೇಳುವ ಪ್ರಯತ್ನವೇ ‘ರುದ್ರಾಭಿಷೇಕಂ’. ವಸಂತ್‍ ಕುಮಾರ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇತ್ತೀಚೆಗೆ…

Read More

45 The Movie Teaser Releasing on Ugadi: ಸಂಕ್ರಾಂತಿಗೊಂದು ಟೀಸರ್, ಯುಗಾದಿಗೆ ‘45’ ಚಿತ್ರದ ಇನ್ನೊಂದು ಟೀಸರ್

ಸಂಕ್ರಾಂತಿ ಹಬ್ಬದಂದು ‘45’ ಚಿತ್ರದ ಟೀಸರ್ ಬಿಡುಗಡೆ ಆಗುವುದರ ಜೊತೆಗೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಈ ಟೀಸರ್‌ನಲ್ಲಿ ಬರೀ ಶಿವರಾಜಕುಮಾರ್ ಮಾತ್ರ ಕಾಣಿಸಿಕೊಂಡಿದ್ದರು. ಇದೀಗ ಚಿತ್ರದ ಇನ್ನೊಂದು ಟೀಸರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು, ಈ ಟೀಸರ್‌ನಲ್ಲಿ ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. (45 The Movie Teaser Releasing on Ugadi) ‘45’ ಚಿತ್ರದ ಹೊಸ ಟೀಸರ್, ಇದೇ ಯುಗಾದಿ ಪ್ರಯುಕ್ತ ಮಾರ್ಚ್‍ 30ರಂದು ಸಂಜೆ…

Read More

Sapthami Gowda: ಅಂಬಿಕಳಾದ ಸಪ್ತಮಿ; ‘ದಿ ರೈಸ್‍ ಆಫ್‍ ಅಶೋಕ’ಚಿತ್ರಕ್ಕೆ ನಾಯಕಿ

ಕಳೆದ ವರ್ಷ ಬಿಡುಗಡೆಯಾದ ಯುವ ರಾಜಕುಮಾರ್‌ ಅಭಿನಯದ ‘ಯುವ’ ಚಿತ್ರದ ನಂತರ ಸಪ್ತಮಿ ಗೌಡ (Sapthami Gowda) ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಬಿಟ್ಟರೆ, ಕನ್ನಡದಲ್ಲಿ ಸಪ್ತಮಿ ಯಾವೊಂದು ಚಿತ್ರದಲ್ಲಿ ನಟಿಸುತ್ತಿರುವ ವಿಷಯವೂ ಬಹಿರಂಗವಾಗಿರಲಿಲ್ಲ. ಹೀಗಿರುವಾಗಲೇ, ಸತೀಶ್‍ ನೀನಾಸಂ ಅಭಿನಯದ ‘ದಿ ರೈಸ್‍ ಆಫ್‍ ಅಶೋಕ’ (The Rise Of Ashoka) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಅಂಬಿಕಾ ಎಂಬ ಪಾತ್ರದಲ್ಲಿ ಸಪ್ತಮಿ ನಟಿಸುತ್ತಿದ್ದು, ಆಕೆಯ ಮೊದಲ ಪೋಸ್ಟರ್‌…

Read More

Toxic Release Date; ಯಶ್‍ ನಟನೆಯ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಪ್ರಕಟ…

ಯಶ್‍ (Yash) ಅಭಿನಯದ ‘ಟಾಕ್ಸಿಕ್‍’ (Toxic) ಚಿತ್ರದ ಚಿತ್ರೀಕರಣ ಕಳೆದ ಕೆಲವು ತಿಂಗಳುಗಳಿಂದ ಭರದಿಂದ ಸಾಗಿದೆ. ಚಿತ್ರವು ಈ ವರ್ಷದ ಏಪ್ರಿಲ್‍ 10ರಂದು ಬಿಡುಗಡೆ ಆಗುತ್ತದೆ (Toxic Release Date) ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಚಿತ್ರದ ಚಿತ್ರೀಕರಣವೇ ಮುಗಿಯದ ಕಾರಣ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಈಗ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ‘ಟಾಕ್ಸಿಕ್‍’ ಚಿತ್ರವು ಕಳೆದ ವರ್ಷದ ಆರಂಭದಲ್ಲಿ ಘೋಷಣೆಯಾಗಿತ್ತು. ಘೋಷಣೆಯ ದಿನವೇ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಅದರ ಪ್ರಕಾರ, ಚಿತ್ರವು 2025ರ…

Read More