
ನಾನು ಆಗ ಇದ್ದಿದ್ದರೆ Ravichandran ಅವರಿಗೆ ನಾಯಕಿಯಾಗಿರುತ್ತಿದ್ದೆ ಎಂದ Sreeleela
ರವಿಚಂದ್ರನ್ (Ravichandran) ಅವರ ಜೊತೆಗೆ ನಾಯಕಿಯಾಗಿ ಅಭಿನಯಿಸಬೇಕು ಎಂಬುದು ಹಲವು ನಾಯಕಿಯರ ಆಸೆಯಾಗಿತ್ತು. ಅದೇ ರೀತಿ, ರವಿಚಂದ್ರನ್ ಅವರು ಹೀರೋ ಆಗಿ ನಟಿಸುವಾಗ ತಾನು ಇದ್ದಿದ್ದರೆ ಅವರಿಗೆ ಖಂಡಿತಾ ನಾಯಕಿಯಾಗಿರುತ್ತಿದ್ದೆ ಎಂದು ನಟಿ ಶ್ರೀಲೀಲಾ (Sreeleela) ಹೇಳಿಕೊಂಡಿದ್ದಾರೆ. ಈ ಶುಕ್ರವಾರ (ಜುಲೈ 18) ಬಿಡುಗಡೆಯಾಗುತ್ತಿರುವ ಕಿರೀಟಿ ಅಭಿನಯದ ‘ಜೂನಿಯರ್’ ಚಿತ್ರದ ಮೂಲಕ ಶ್ರೀಲೀಲಾ, ಕೆಲವು ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶುರುವಾದಾಗ, ಶ್ರೀಲೀಲಾ ಅಷ್ಟು ದೊಡ್ಡ ನಟಿಯಾಗಿರಲಿಲ್ಲ. ಈ ಮೂರು ವರ್ಷಗಳಲ್ಲಿ ಅವರು…