Megastar Chiranjeevi; ಒಂದೂವರೆ ವರ್ಷಗಳ ನಂತರ ಸೆಟ್ಟೇರಿತು ಚಿರಂಜೀವಿ ಹೊಸ ಸಿನಿಮಾ

ಚಿರಂಜೀವಿ (Megastar Chiranjeevi) ಅಭಿನಯದ ಚಿತ್ರವೊಂದು ಸೆಟಟೇರಿ ಒಂದೂವರೆ ವರ್ಷಗಳೇ ಆಗಿವೆ. 2023ರ ಆಗಸ್ಟ್ ತಿಂಗಳಲ್ಲಿ ಅವರ ‘ವಿಶ್ವಂಭರ’ ಚಿತ್ರವು ಸೆಟ್ಟೇರಿತ್ತು. ಆ ಚಿತ್ರ ಈ ವರ್ಷದ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಕಾರಣಾಂತರಗಳಿಂದ ತಡವಾಗಿ ಚಿತ್ರ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರವನ್ನು ಜುಲೈ 24ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಒಂದು ಪಕ್ಷ ಚಿತ್ರ ಇನ್ನೂ ತಡವಾದರೆ, ಚಿರಂಜೀವಿ ಹುಟ್ಟುಹಬ್ಬದ ಸಂದರ್ಭದಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ….

Read More

Arjun Janya’s 45 The Movie Teaser; ಕಮರ್ಷಿಯಲ್‍ ಚಿತ್ರದಲ್ಲಿ ತತ್ವ ಹೇಳೋಕೆ ಹೊರಟ ಅರ್ಜುನ್‍; ‘45’ ಟೀಸರ್ ಬಿಡುಗಡೆ

ಸಂಕ್ರಾಂತಿ ಹಬ್ಬಕ್ಕೆ ‘45’ ಚಿತ್ರದ ಒಂದು ಟೀಸರ್ ಬಿಡಗಡೆಯಾಗಿತ್ತು. ಈಗ ಯುಗಾದ ಹಬ್ಬಕ್ಕೆ ಇನ್ನೊಂದು ಟೀಸರ್ ಬಿಡುಗಡೆಯಾಗಿದೆ. ಮೊದಲ ಟೀಸರ್‍ನಲ್ಲಿ ಶಿವರಾಜಕುಮಾರ್ ಪಾತ್ರವನ್ನು ಪರಿಚಯಿಸಿದ್ದ ನಿರ್ದೇಶಕ ಅರ್ಜುನ್‍ ಜನ್ಯ, ಈ ಬಾರಿ ಮೂರು ಪಾತ್ರಗಳನ್ನು ಪರಿಚಯಿಸಿದ್ದಾರೆ. ಒರಾಯನ್‍ ಮಾಲ್‍ನ ಪಿವಿಆರ್‌ನಲ್ಲಿ ನಡೆದ ಈ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ, ಅರ್ಜುನ್‍ ಜನ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದು ನನಗೆ ಬಹಳ ಇಷ್ಟವಾದ…

Read More

Brat Tiltle Launch: ಕೃಷ್ಣ ಎಂಬ ‘ಬ್ರ್ಯಾಟ್‍’; ಪ್ಯಾನ್‍ ಇಂಡಿಯಾ ಸಿನಿಮಾದೊಂದಿಗೆ ಬಂದ ಶಶಾಂಕ್

‘ಡಾರ್ಲಿಂಗ್‍’ ಕೃಷ್ಣ (Darling Krishna) ಅಭಿನಯದಲ್ಲಿ ಇನ್ನೊಂದು ಚಿತ್ರವನ್ನು ಮಾಡುತ್ತಿರುವುದಾಗಿ ನಿರ್ದೇಶಕ ಶಶಾಂಕ್‍ (Shashank) ಕಳೆದ ವರ್ಷವೇ ಘೋಷಿಸಿದ್ದರು. ಆದರೆ, ಆ ಚಿತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿ, ಮಾಧ್ಯಮದವರೆದುರು ಬಂದಿದ್ದಾರೆ ಶಶಾಂಕ್‍. ಈ ಚಿತ್ರದ ಶೀರ್ಷಿಕೆ ಅನಾವರಣ ಶುಕ್ರವಾರ ಆಗಿದೆ. (Brat Tiltle Launch) ಶಶಾಂಕ್‍ ನಿರ್ದೇಶನದ ಹೊಸ ಚಿತ್ರದ ಹೆಸರು ‘ಬ್ರ್ಯಾಟ್‍’. ಶೀರ್ಷಿಕೆ ಅನಾವರಣ ಮಾಡುವುದರ ಜೊತೆಗೆ, ಚಿತ್ರದ ಸಾರವನ್ನು ಹೇಳುವ ಹಾಡನ್ನು ಆನಂದ್‍ ಆಡಿಯೋದಲ್ಲಿ ಬಿಡುಗಡೆ…

Read More

Ram Charan; ಪೆಡ್ಡಿಯಾಗಿ ಮಿಂಚಲಿದ್ದಾರೆ ರಾಮ್‌ ಚರಣ್‌ ; ಲುಕ್‌ ಹೇಗಿದೆ ನೋಡಿ..

ರಾಮ್ ಚರಣ್ (Ram Charan) ನಟನೆಯ ‘ಆರ್ 16’ ಸಿನಿಮಾಕ್ಕೆ ‘ಪೆಡ್ಡಿ’ (Peddi) ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಬಾಯಲ್ಲಿ ಬೀಡಿ ಹಚ್ಚಿಕೊಂಡಿರುವ ಉದ್ದ ಕೂದಲಿನಲ್ಲಿ ರಾಮ್‌ ಚರಣ್‌ ಲುಕ್ ಸಖತ್ ರಗಡ್ ಆಗಿದೆ. ಪೋಸ್ಟರ್‌ ಪಕ್ಕಾ ಮಾಸ್‌ ಸಿನಿಮಾದಂತಿದೆ . A FIGHT FOR IDENTITY!! ಎಂದು ರಾಮ್‌ ಚರಣ್‌ ತಮ್ಮ ಲುಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೆಡ್ಡಿಯಲ್ಲಿ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕಾಣಿಸಿಕೊಳ್ಳಲಿದ್ದಾರೆ….

Read More