Bigg Boss Kannada 12; ಮೊದಲ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆಯನ್ನೆ ಈಗಲೂ ಪಡೆಯೋಕೆ ಆಗುತ್ತಾ?’: ಸುದೀಪ್‍ ಪ್ರಶ್ನೆ

ಈ ವರ್ಷ ‘ಬಿಗ್‍ ಬಾಸ್‍’ ಕಾರ್ಯಕ್ರಮವನ್ನು ಸುದೀಪ್‍ ನಡೆಸಿಕೊಡುತ್ತಾರೋ, ಇಲ್ಲವೋ ಎಂಬ ಕನ್ನಡಿಗರ ಮಿಲಿಯನ್‍ ಡಾಲರ್‌ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸುದೀಪ್‍, ‘ಬಿಗ್‍ ಬಾಸ್ – ಸೀಸನ್‍ 12’ (Bigg Boss Kannada 12) ಕಾರ್ಯಕ್ರಮವನ್ನು ನಡೆಸಿಕೊಡುವುದಷ್ಟೇ ಅಲ್ಲ, ಇನ್ನೂ ನಾಲ್ಕು ಸೀಸನ್‍ಗಳ ನಿರೂಪಣೆ ಮಾಡಲಿದ್ದಾರಂತೆ. ಹಾಗಂತ ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ. ‘ಬಿಗ್‍ ಬಾಸ್‍ – ಸೀಸನ್‍ 11’ ತಮ್ಮ ಕೊನೆಯ ಸೀಸನ್‍ ಆಗಲಿದೆ ಎಂದು ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲೇ ಸುದೀಪ್‍ ಘೋಷಿಸಿದ್ದರು. ಈ…

Read More

‘Sangeetha Bar and Restaurant’ನಲ್ಲಿ ಕೋಮಲ್‍ಗೇನು ಕೆಲಸ?

ಕೋಮಲ್‍ ಅಭಿನಯದ ಚಿತ್ರಗಳು ಒಂದರಹಿಂದೊಂದು ಶುರುವಾಗುತ್ತಲೇ ಇವೆ. ಆದರೆ, ಬಿಡುಗಡೆ ಮಾತ್ರ ಆಗುತ್ತಿಲ್ಲ. ಕೋಮಲ್‍ ಕೈಯಲ್ಲಿ ಸದ್ಯಕ್ಕೆ ನಾಲ್ಕು ಚಿತ್ರಗಳಿದ್ದು, ನಾಲ್ಕು ಚಿತ್ರಗಳು ನಿರ್ಮಾಣ ವಿವಿಧ ಹಂತಗಳಲ್ಲಿವೆ. ಹೀಗಿರುವಾಗಲೇ, ಕೋಮಲ್‍ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ. ಅಂದಹಾಗೆ, ಕೋಮಲ್‍ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ (Sangeetha Bar and Restaurant) ಎಂದು ಹೆಸರಿಡಲಾಗಿದ್ದು, ಈ ಚಿತ್ರವನ್ನು ಸಂದೇಶ್‍್ ಶೆಟ್ಟಿ ಅಜ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್‍ ಈ ಹಿಂದೆ ‘ಕತ್ತಲೆ ಕೋಣೆ’, ‘ಇನಾಂದಾರ್’ ಮತ್ತು ‘ಗುಂಮ್ಟಿ’ ಚಿತ್ರಗಳನ್ನು ನಿರ್ಮಿಸಿದ್ದು,…

Read More

Adonditthu kaala; 16 ವರ್ಷದ ಹುಡುಗನಾದ Vinay Rajkumar …

ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ವಿನಯ್‍ ರಾಜಕುಮಾರ್ (Vinay Rajkumar) ಅಭಿನಯದ ‘ಅಂದೊಂದಿತ್ತು ಕಾಲ’ ಅದ್ಯಾಕೋ ಕುಂಟುತ್ತಾ ಸಾಗಿ, ಇದೀಗ ಕೊನೆಗೂ ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ. ಕೆಲವು ದಿನಗಳ ಹಿಂದೆ, ಚಿತ್ರದ ಮೊದಲ ಹಾಡನ್ನು ಗಣೇಶ್‍ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದರು. ಇದೀಗ ‘ಅರೇರೇ ಯಾರೋ ಇವಳು …’ ಎಂಬ ಎರಡನೇ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಇಡೀ ರಾಜ್ಯಕ್ಕೆ 10ನೇ ತರಗತಿಯಲ್ಲಿ ಫಸ್ಟ್ ಬಂದ ಮಲ್ಲಸಂದ್ರದಲ್ಲಿರುವ ಬಿ.ಎನ್.ಆರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಬಿಡುಗಡೆ ಮಾಡಿಸಲಾಯಿತು….

Read More

‘ಸ್ನೇಹದ ಕಡಲಲ್ಲಿ’ ಸುಮಂತ್‍; ಇಂದಿನಿಂದ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ

ಹಿರಿಯ ನಟ ಸುಮನ್‍, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕರಾಗಿ ಬಂದ ಅವರು ಪೋಷಕ ನಟರಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್‌ ಸುವರ್ಣದಲ್ಲಿ ಇಂದಿನಿಂದ (ಮೇ 12) ಹೊಸ ಧಾರಾವಾಹಿ ‘ಸ್ನೇಹದ ಕಡಲಲ್ಲಿ’ (Snehada Kadalalli) ಆರಂಭವಾಗಲಿದೆ. ಪ್ರೀತಂ ಶೆಟ್ಟಿ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿದೆ.  ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್, ಚಂದು ಗೌಡ ಹಾಗೂ ಕಾವ್ಯ ಮಹದೇವ್ ಕಾಣಿಸಿಕೊಳ್ಳುತ್ತಿದ್ದಾರೆ. ‘ಸ್ನೇಹದ ಕಡಲಲ್ಲ’…

Read More