Biggboss season 12 : ಬಿಗ್‌ ಸರ್‌ಪ್ರೈಸ್‌ ಸ್ಪರ್ಧಿಗಳ ಎಂಟ್ರಿ, ಅಸಲಿ ಆಟ ಶುರು …….

ಪ್ರತಿ ಬಾರಿಯೂ ತನ್ನದೆ ಆದ ವಿಭಿನ್ನ ಥೀಮ್‌ ಆಯ್ಕೆ ಮಾಡುವ (Biggboss)ಬಿಗ್‌ಬಾಸ್‌ ಈ ಸಲಿ ಊಹೆಗೂ ಮೀರಿದ ಹಾಗೆ ಬಿಗ್‌ ಥೀಮ್‌ನೊಂದಿಗೆ ಸ್ಪರ್ಧಿಗಳು ಟಿವಿಯಲ್ಲಿ ಕಾಣಿಸಿಕೊಳ್ಳಲು ತಯಾರಾಗಿದೆ.
ಕನ್ನಡ ಬಿಗ್‌ಬಾಸ್‌ ಎಂದ ಕೂಡಲೆ ನೆನಪಾಗೋದು (kiccha sudeep) ಕಿಚ್ಚ ಸುದೀಪ್‌ ಅವರ ಒಂದು ವೇದ ವಾಕ್ಯ ಕೇವಲ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಮೀಸಲಿಡದೆ ,ನೋಡುವ ವೀಕ್ಷಕರಿಗೂ ಸಹ ಕಲಿಕೆಯ ಒಂದು ಭಾಗ ಆಗಿದೆ. ಅದೇ ರೀತಿಯಾಗಿ ಈ ಭಾರಿ ಬಿಗ್‌ಬಾಸ್‌ 12 ಎಂಬುದು ಭಾರತೀಯ ಸಾಂಸ್ಕೃತಿಕ ನಗರ ಎಂಬಂತೆ ಭಾಸವಾಗುತ್ತಿದೆ.

ಪ್ರತಿಬಾರಿಯೂ ಬಿಗ್‌ಬಾಸ್‌ ನಲ್ಲಿ ಒಂದು ವಿಭನ್ನ ವ್ಯಕ್ತಿತ್ವವನ್ನ ಒಂದೇ ಜಾಗದಲ್ಲಿ ಕೂಡಿಹಾಕುವಂತಿರುತ್ತದೆ,ಹಾಗೆಯೆ ಪ್ರತಿಯೊಬ್ಬರು ತನ್ನದೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದವರು ಬಿಗ್‌ಬಾಸ್‌ ವೇದಿಕೆಗೆ ಅವಕಾಶ ಮಾಡಿಕೊಡುತ್ತಾರೆ. ಅದೇರೀತಿ ಈ ಬಾರಿಯೂ ಸಹ ಡಿಫ್‌ರೆಂಟ್‌ ಯಾಂಗಲ್‌ನ ಸ್ಪರ್ಧಿಗಳನ್ನ ಬರಮಾಡಿದ್ದಾರೆ.

(Biggboss) ಬಿಗ್‌ಬಾಸ್‌ 12 ರಲ್ಲಿ ವಿಶೇಷವೆಂದರೆ ʼ ಮೈಸೂರಿನ ಅರಮನೆ ಆವರಣದ ನೋಟ, ಪಾರಂಪರಿಕ ಶೈಲಿಯ ಹಂಪಿಯಲ್ಲಿ ದೇವಿಯ ದೇಗುಲ, ಆಗಿನ ಕಾಲದ ಕಲಾಕೃತಿಗಳು ಹಾಗೂ ವಿಭಿನ್ನ ಪರಂಪರೆ ಇಮೇಜ್‌ಗಳ ಸೆಟಪ್‌ ಇದೆ, ಇನ್ನೂ ಆಟ ಯಾವರೀತಿ ಇರುತ್ತೆ ಅನ್ನೋದನ್ನ ನೋಡ್ಲೆಬೇಕು .

ಈ ಭಾರಿ (Biggboss) ಬಿಗ್‌ಬಾಸ್‌ ಸ್ಪರ್ಧಿಗಳಾದ ಖಳ ನಟನಾಗಿ ಗುರುತಸಿಕೊಂಡಿದ್ದ ಕಾಕ್ರೋಜ್‌ ಸುಧಿ, ಕೆಂಡಸಂಪಿಗೆ ಧಾರವಾಹಿಯಲ್ಲಿ ಜನಪ್ರಿಯ ಕಂಡ ಕಾವ್ಯ,ಕೋಟಿ ಬೆಲೆ ಬಾಳುವ ನಾಯಿಗಳ ಮಾರಾಟದಲ್ಲಿ ಪ್ರಖ್ಯಾತ ಕಂಡ ಡಾಗ್‌ ಸತೀಶ್‌ , ಗಿಚ್ಚಿಗಿಲಿಗಿಲಿ ಹಾಸ್ಯವನ್ನು ಕನ್ನಡದ ಜನತೆಯಲ್ಲಿ ಮನೆಮಾತಾದ ಗಿಲ್ಲಿ ನಟ,ಮಾಧ್ಯಮದಿಂದ ನಿರೂಪಕಿಯಾದ ಜಾನ್ವಿ , ಗೀತಾ ಸೀರಿಯಲ್‌ ನಲ್ಲಿ ನಟ ಧನುಷ್‌ ,ಮಜಾಭಾರತದಿಂದ ಜನರ ಮನಸ್ಸು ಗೆದ್ದ ಚಂದ್ರಪ್ರಭಾ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಮಾಸ್‌ ಲುಕ್‌ ಮಂಜು ಭಾಷಿಣಿ , ಮನದಕಡಲು ಸಿನಿಮಾದ ನಾಯಕಿ ರಾಶಿಕಾ , ಅಭಿಷೇಕ್‌ ಶ್ರೀಕಾಂತ್‌ ದೊಡ್ಮನೆ ,ಮಲ್ಲಮ್ಮ, ಅಶ್ವಿನಿ ಎಸ್‌ ಎನ್‌ , ಧ್ರುವಂತ್‌, ಮಂಗಳೂರು ರಕ್ಷಿತಾ, ಕರಿಬಸಪ್ಪ, ಮಾಳು , ಸ್ಪಂದನ ,ಅಶ್ವಿನಿ ಗೌಡ ಹಾಗೂ RJ ಅಮಿತ್‌ ಸೇರಿ ಬಿಗ್‌ಬಾಸ್‌ ಗೆ ಎಂಟ್ರಿ ಕೊಟ್ಟಿದ್ದಾರೆ.

ಹೀಗೆ ಪ್ರತಿಬಾರಿಯೂ ಆಗಮಿಸಿದ ಸ್ಪರ್ಧಿಗಳು ಜನರ ಮೆಚ್ಚುಗೆ ಪಡೆದು ಗೆಲುವಿನ ಬುನಾದಿ ಹಿಡಿದವರು , ಈ ಬಾರಿಯೂ ಸಹ ಯಾವ ರೀತಿಯ ಮೆಚ್ಚುಗೆಗೆ ಗುರಿಯಾಗುವರ ಕಾದಾಟವನ್ನ ನೋಡಬೇಕಾಗಿದೆ.

ವಿಶೇಷವೆಂದರೆ ಮೊದಲನೆ ದಿನವೇ ಎಲಿಮಿನೇಟ್‌ ಮಾಡಬೇಕೆಂಬ ಬಿಗ್‌ಬಾಸ್‌ ನಿಯಮ, ಜನರಿಗೆ ಹೆಚ್ಚಿನ ಕುತೂಹಲವನ್ನುಂಟುಮಾಡಿದೆ. ಸದ್ಯಕ್ಕೆ ಯಾರು, 19 ಸ್ಪರ್ಧಿಗಳಲ್ಲಿ ಗೆಲುವಿಗಾಗಿ ಯಾರೆಲ್ಲ ಹರಸಾಹಸ ಪಡುತ್ತಾರೆ ಕೊನೆಗೆ ಗೆಲುವಿನ ಪಟ್ಟ ಯಾರಿಗೆ…? ಸಿಗುತ್ತೆ . ಸಿಕ್ಕಿರುವಂತಹ ವೇದಿಕೆಯಲ್ಲಿ ಹೇಗೆಲ್ಲಾ ಬಳಸಿಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.




3 thoughts on “Biggboss season 12 : ಬಿಗ್‌ ಸರ್‌ಪ್ರೈಸ್‌ ಸ್ಪರ್ಧಿಗಳ ಎಂಟ್ರಿ, ಅಸಲಿ ಆಟ ಶುರು …….

  1. It’s fascinating how easily we fall into patterns when gaming – loss aversion is real! Seeing platforms like big bunny app download prioritize user experience & security is a good sign for Philippine players. Responsible gaming is key!

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!