Admin

ಕನ್ನಡ ಚಿತರರಂಗದಲ್ಲಿ ‘ಮತ್ತೆ ಮಳೆ ಹೊಯ್ಯುತ್ತಿದೆ’ …

ಮುಂಗಾರು ಮಳೆ’ ಚಿತ್ರದ ನಂತರ ಮಳೆ ಚಿತ್ರಗಳ ಟ್ರೆಂಡ್‍ ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ, ಸಾಲುಸಾಲು ಮಳೆಯ ಚಿತ್ರಗಳು, ಪ್ರೇಮಕಥೆಗಳು ಬಿಡುಗಡೆಯಾದವು. ಆಗ ಶುರುವಾದ ಮಳೆ, ಈಗಲೂ ಹೊಯ್ಯುತ್ತಲೇ ಇದೆ. ‘ಮತ್ತೆ ಮಳೆ ಹೊಯ್ಯುತ್ತಿದೆ’ ಎಂಬ ಹೊಸಬರ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ. ‘ಎಲ್ಲ ನೆನಪಾಗುತಿದೆ …’ ಎಂಬ ಅಡಿಬರಹವಿರುವ ಈ ಚಿತ್ರಕ್ಕೆ ಮೂರು ದಶಕಗಳಿಂದ ಸಹಾಯಕ ಕಲಾ ನಿರ್ದೇಶಕರಾಗಿರುವ ಗಂಗಾಧರ್, ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ್ಸ್‍ ಬ್ಯಾನರ್ ಅಡಿಯಲ್ಲಿ ಪತ್ನಿ ಸುಮ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಹಲವು ವರ್ಷಗಳಿಂದ…

Read More

ಉಪೇಂದ್ರ ಹೊಸ ಚಿತ್ರ ʻನೆಕ್ಸ್ಟ್‌ ಲೆವೆಲ್‌ʼಗೆ Aradhana Ram ನಾಯಕಿ

ಕಾಟೇರ’ ಚಿತ್ರ ದೊಡ್ಡ ಯಶಸ್ಸು ಸಾಧಿಸಿದರೂ, ಆ ಚಿತ್ರದ ನಾಯಕಿ ಆರಾಧನಾ ರಾಮ್‍ (Aradhana Ram) ಯಾಕೋ ಇನ್ನೊಂದು ಚಿತ್ರವನ್ನು ಒಪ್ಪಿರಲಿಲ್ಲ. ಯಾವಾಗ ಕೇಳಿದರೂ, ‘ಸದ್ಯದಲ್ಲೇ ಘೋಷಣೆ ಆಗಲಿದೆ’ ಎಂದು ಆರಾಧನಾ ಮತ್ತು ಅವರ ತಾಯಿ ಮಾಲಾಶ್ರೀ ಹೇಳುತ್ತಲೇ ಇದ್ದರು. ಆದರೆ, ಈ ಒಂದೂವರೆ ವರ್ಷದಲ್ಲಿ ಆರಾಧನಾ ಯಾವೊಂದು ಚಿತ್ರದಲ್ಲೂ ನಟಿಸಲಿಲ್ಲ. ಇದೀಗ ಆರಾಧನಾ ಸದ್ದಿಲ್ಲದೆ, ದೊಡ್ಡ ಚಿತ್ರಕ್ಕೇ ನಾಯಕಿಯಾಗಿದ್ದಾರೆ. ಉಪೇಂದ್ರ ಅಭಿನಯಿಸುತ್ತಿರುವ ‘ನೆಕ್ಸ್ಟ್ ಲೆವೆಲ್‍’ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರಂತೆ. ‘ಕಾಟೇರ’ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ…

Read More
sangeetha sringeri

ಹಾರರ್ ಚಿತ್ರದಲ್ಲಿ Sangeetha Sringeri; ನಿಶ್ಚಿತ್‍ಗೆ ನಾಯಕಿ

ಬಿಗ್‍ ಬಾಸ್‍’ (BIGG BOSS)ಗೆ ಹೋಗಿ ಬಂದರೂ, ಅಲ್ಲಿ ಸಾಕಷ್ಟು ಮಿಂಚಿದರೂ ಸಂಗೀತಾ ಶೃಂಗೇರಿ (Sangeetha Sringeri) ಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರ ಯಾಕೋ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಕಳೆದ ವರ್ಷ ಬಿಡುಗಡೆಯಾದ ‘ಮಾರಿಗೋಲ್ಡ್’ ಚಿತ್ರ ಬಿಟ್ಟರೆ, ಸಂಗೀತ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ಆಕೆ ಹೊಸ ಚಿತ್ರ ಒಪ್ಪಿಕೊಂಡ ಸುದ್ದಿಯಾಗಲಿಲ್ಲ. ‘ಮಾರಿಗೋಲ್ಡ್’ ಚಿತ್ರ ಸಹ ಕೆಲವು ವರ್ಷಗಳ ಹಿಂದೆ ಶುರುವಾಗಿದ್ದು. ಅದು ತಡವಾಗಿ ಕಳೆದ ವರ್ಷ ಬಿಡುಗಡೆಯಾಗಿತ್ತು. ಈಗ್ಯಾಕೆ ಈ ವಿಷಯವೆಂದರೆ, ಸಂಗೀತಾ ಹೊಸ ಚಿತ್ರವೊಂದನ್ನು…

Read More
Loose mada yogi

‘ಯೋಗಿ’ ಆಯ್ತು, ಈಗ ‘ಲೂಸ್‍ ಮಾದ’ನಾದ ಲೂಸ್ ಮಾದ Yogi …

ಇಷ್ಟು ದಿನ ಯಾಕೆ ಯಾರೂ ಯೋಗಿ ಅಭಿನಯದಲ್ಲಿ ಇಂಥದ್ದೊಂದು ಶೀರ್ಷಿಕೆ ಇಟ್ಟು ಚಿತ್ರ ಮಾಡಲಿಲ್ಲವೋ ಗೊತ್ತಿಲ್ಲ. ಯೋಗಿ ಅಭಿನಯದಲ್ಲಿ ‘Yogi’ ಎಂಬ ಚಿತ್ರ ಕೆಲವು ವರ್ಷಗಳ ಹಿಂದೆ ಬಂದಿತ್ತಾದರೂ, ‘ಲೂಸ್‍ ಮಾದ’ ಎಂಬ ಶೀರ್ಷಿಕೆಯನ್ನು ಯಾರೂ ಮುಟ್ಟಿರಲಿಲ್ಲ. ಇದೀಗ ‘ಲೂಸ್‍ ಮಾದ’ ಎಂಬ ಶೀರ್ಷಿಕೆಯಡಿ ಚಿತ್ರ ಪ್ರಾರಂಭವಾಗಿದೆ. ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ‘ದುನಿಯಾ’ ಚಿತ್ರದಲ್ಲಿ ‘ಲೂಸ್ ಮಾದ’ ಎಂಬ ಪಾತ್ರವನ್ನು ಯೋಗೇಶ್ ಅವರು ಮಾಡಿದ್ದರು. ಆ ನಂತರ ಯೋಗಿ, ‘ಲೂಸ್ ಮಾದ’ ಅಂತಲೇ ಜನಪ್ರಿಯರಾದರು….

Read More