Admin

ದರ್ಶನ್‍ ಜೀವನ ಹಾಳು ಮಾಡಿಕೊಂಡ್ರು; ರಮ್ಯಾ ಬೇಸರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್‍ ಬಗ್ಗೆ ರಮ್ಯಾ ಹಿಂದೊಮ್ಮೆ ಮಾತನಾಡಿ, ಅಭಿಮಾನಿಗಳಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಈಗ ದರ್ಶನ್‍ ಬಗ್ಗೆ ಇನ್ನೊಮ್ಮೆ ಮಾತನಾಡಿರುವ ಅವರು, ದರ್ಶನ್‍ ಕಷ್ಟಪಟ್ಟು ಮೇಲೆ ಬಂದು ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ ಎಂದು ಬೇಸರದಿಂದ ಹೇಳಿದ್ದಾರೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ರಮ್ಯಾ, ‘ಸುಪ್ರೀಂ ಕೋರ್ಟ್ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ’ ಎಂದು ಹೇಳಿದರು. ದರ್ಶನ್‍ ಕುರಿತು ಮಾತನಾಡಿರುವ…

Read More

ಯಶ್‍ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲಿ ರುಕ್ಮಿಣಿ ವಸಂತ್‍?

ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರದ ಚಿತ್ರೀಕರಣ ಕಳೆದ ಕೆಲವು ತಿಂಗಳುಗಳಿಂದ ಭರದಿಂದ ಸಾಗಿದೆ. ಇದೀಗ ಚಿತ್ರದ ಕುರಿತು ಇನ್ನೊಂದು ಸುದ್ದಿ ಬಂದಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದ ರುಕ್ಮಿಣಿ ವಸಂತ್‍, ಈ ಚಿತ್ರದಲ್ಲೊಂದು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದಲ್ಲಿ ರುಕ್ಮಿಣಿ ವಸಂತ್‍ ನಟಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ವರ್ಷ ಕೇಳಿಬಂದಿತ್ತು. ಆ ಸುದ್ದಿ ಇತ್ತೀಚೆಗೆ ನಿಜವಾಗಿದೆ. ಸ್ವತಃ ಚಿತ್ರತಂಡದವರೇ, ಚಿತ್ರದಲ್ಲಿ ರುಕ್ಮಿಣಿ ವಸಂತ್‍…

Read More

Zee 5 ಜೊತೆ ಕೈ ಜೋಡಿಸಿದ KRG ಸ್ಟುಡಿಯೋಸ್‍; ವೆಬ್ ಸಿರೀಸ್ ನಿರ್ಮಾಣ

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್‍ ನೇತೃತ್ವದ KRG ಸ್ಟುಡಿಯೋಸ್ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಚಿತ್ರ ನಿರ್ಮಾಣ ಹಾಗೂ ವಿತರಣೆಯಲ್ಲಿ ಹೆಸರು ಮಾಡಿರುವ KRG ಸ್ಟುಡಿಯೋಸ್ ವೆಬ್ ಸಿರೀಸ್ ನಿರ್ಮಾಣಕ್ಕಿಳಿದೆ. Zee 5 ಜೊತೆ ಕೈ ಜೋಡಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ವೆಬ್‍ ಸರಣಿಗಳ ನಿರ್ಮಾಣಕ್ಕೆ ಕೈಹಾಕಿದೆ. ಮೊದಲ ಹಂತವಾಗಿ ‘ಶೋಧ’ ಎಂಬ ವೆಬ್ ಸರಣಿಯನ್ನು KRG ನಿರ್ಮಿಸಿದೆ. ಈ ವೆಬ್‍ ಸರಣಿಯನ್ನು ಸುನೀಲ್ ಮೈಸೂರು ನಿರ್ದೇಶಿಸಿದ್ದು, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸರಣಿಯಾಗಿದೆ….

Read More

ತಮಿಳು ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ರಜನಿಕಾಂತ್‍ ‘Coolie’

ರಜನಿಕಾಂತ್‍ ಅಭಿನಯದ ‘ಕೂಲಿ’ (Coolie) ಹೊಸ ದಾಖಲೆಯನ್ನೇ ಬರೆದಿದೆ. ಮೊದಲನೆಯದಾಗಿ, ಜಗತ್ತಿನಾದ್ಯಂತ ಮೊದಲ ದಿನ ಸುಮಾರು 6.8 ಲಕ್ಷ ಟಿಕೆಟ್‍ಗಳು ಮಾರಾಟವಾಗಿದ್ದವು. ಅಡ್ವಾನ್ಸ್ ಬುಕ್ಕಿಂಗ್‍ನಿಂದಲೇ 50 ಕೋಟಿ ರೂ. ಗಳಿಕೆಯಾಗಿದೆ ಎಂದು ಹೇಳಲಾಗಿತ್ತು. ಇದಕ್ಕೂ ಮೊದಲು ಯಾವ ಚಿತ್ರವೂ ಇಂಥದ್ದೊಂದು ದಾಖಲೆ ಮಾಡಿರಲಿಲ್ಲ. ಈಗ ಚಿತ್ರವು ಮೊದಲ ದಿನ 151 ಕೋಟಿ ರೂ. ಗಳಿಕೆ ಮಾಡುವ ಹೊಸ ದಾಖಲೆ ಮಾಡಿದೆ. ಚಿತ್ರವು ಮೊದಲ ದಿನವೇ ಚಿತ್ರದ ಗಳಿಕೆ 100 ಕೋಟಿ ರೂ. ಮೀರಬಹುದು ಎಂದು ಮೊದಲೇ ಅಂದಾಜಿಸಲಾಗಿತ್ತು….

Read More