Admin

Golden Star Ganesh ಅಭಿನಯದಲ್ಲಿ ‘ಭರ್ಜರಿ’ ಚೇತನ್‍ ಹೊಸ ಚಿತ್ರ; ಅಕ್ಟೋಬರ್‌ನಲ್ಲಿ ಪ್ರಾರಂಭ 

ಸುಮಾರು ಎರಡು ವರ್ಷಗಳ ಹಿಂದೆ ಶುರುವಾಗಿತ್ತು ‘ಭರ್ಜರಿ’ ಚೇತನ್‍ ನಿರ್ದೇಶನದ ಹೊಸ ಚಿತ್ರ ‘ಬರ್ಮ’. ಆ ಚಿತ್ರವನ್ನು ಆದಷ್ಟು ಬೇಗ ಮುಗಿಸಿ, ಬಿಡುಗಡೆ ಮಾಡುವುದಾಗಿ ಚೇತನ್‍ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಚಿತ್ರ ಇನ್ನೂ ಬಿಡುಗಡೆಯಾಗಿರಲಿಲ್ಲ. ಆ ಚಿತ್ರ ಯಾವಾಗ ಬಿಡುಗಡೆಯೋ ಗೊತ್ತಿಲ್ಲ. ಅದಕ್ಕೂ ಮೊದಲೇ ಗಣೇಶ್‍ (Golden Star Ganesh) ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಅವರು ಘೋಷಿಸಿದ್ದಾರೆ.  ಇಂದು ಗಣೇಶ್‍ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಗಣೇಶ್‍ ಅಭಿನಯದ ಹೊಸ ಚಿತ್ರದ ಘೋಷಣೆಯಾಗಿದ್ದು, ಈ ಚಿತ್ರವನ್ನು ಚೇತನ್‍ ನಿರ್ದೇಶನ…

Read More
Malavika Mohanan

ಸುದೀಪ್‍ಗೆ ನಾಯಕಿಯಾದ Malavika Mohanan; ಸದ್ಯದಲ್ಲೇ ಹೊಸ ಚಿತ್ರ ಪ್ರಾರಂಭ

ಸುಮಾರು ಒಂಬತ್ತು ವರ್ಷಗಳ ಹಿಂದೆ ಬಿಡುಗಡೆಯಾದ ಪ್ರೀತಂ ಗುಬ್ಬಿ ನಿರ್ದೇಶನದ ‘ನಾನು ಮತ್ತು ವರಲಕ್ಷ್ಮೀ’ ಚಿತ್ರದ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿ ಮಾಳವಿಕಾ ಮೋಹನನ್ (Malavika Mohanan), ಕನ್ನಡಕ್ಕೆ ಬಂದಿದ್ದರು. ಆ ನಂತರ ಅವರು ಯಾವುದೇ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ಅವರು ಕನ್ನಡಕ್ಕೆ ಮತ್ತೊಮ್ಮೆ ರೀಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದು, ಸುದೀಪ್‍ ಅಭಿನಯದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಕಳೆದ ವರ್ಷ ಯಶಸ್ವಿಯಾದ ಚಿತ್ರಗಳ ಪೈಕಿ ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರವೂ ಒಂದು. ಈ ಚಿತ್ರದ…

Read More

‘ಹೆಜ್ಜೆ ಮೂಡದ ಹಾದಿ’, ‘JUNGLE MANGAL’ ಆದಾಗ …

ನಿರ್ದೇಶಕ ರಕ್ಷಿತ್‍ ಕುಮಾರ್‌ ತಮ್ಮ ಚಿತ್ರದ ಟ್ರೇಲರನ್ನು ಯೋಗರಾಜ್‍ ಭಟ್ಟರಿಗೆ ತೋರಿಸುವುದಕ್ಕೆ ಹೋಗಿದ್ದರಂತೆ. ಟ್ರೇಲರ್‌ ನೋಡಿದ ಭಟ್ಟರು, ಚಿತ್ರಕ್ಕೆ ಏನು ಹೆಸರಿಟ್ಟಿದ್ದೀರಾ ಎಂದು ಕೇಳಿದ್ದಾರೆ. ಅಲ್ಲಿಯವರೆಗೂ ನಿರ್ದೇಶಕರು ಚಿತ್ರಕ್ಕೆ ‘ಹೆಜ್ಜೆ ಮೂಡದ ಹಾದಿ’ ಎಂದು ಹೆಸರಿಡುವುದಕ್ಕೆ ಯೋಚಿಸಿದ್ದರು. ಭಟ್ಟರು ಹೊಸ ಐಡಿಯಾ ಕೊಟ್ಟಿದ್ದಾರೆ. ‘ಜಂಗಲ್‍ ಮಂಗಲ್‍’ (JUNGLE MANGAL) ಎಂದಿಡಿ ಎಂದು ಸಲಹೆ ಕೊಟ್ಟಿದ್ದಾರೆ. ಯಶ್‍ ಶೆಟ್ಟಿ ಅಭಿನಯದ ‘ಜಂಗಲ್‍ ಮಂಗಲ್‍’ ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಸಹ್ಯಾದ್ರಿ…

Read More

ಹೊಸ ಅವತಾರದಲ್ಲಿ Rashmika Mandanna; ಮತ್ತೊಂದು ಪ್ಯಾನ್‍ ಇಂಡಿಯಾ ಚಿತ್ರದಲ್ಲಿ …

ಭಾರತದ ಅತ್ಯಂತ ಬೇಡಿಕೆಯ ಮತ್ತು ಬ್ಯುಸಿ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ (Rashmika Mandanna). ಸಾಲುಸಾಲು ಚಿತ್ರದಗಳಲ್ಲಿ ನಟಿಸುತ್ತಿರುವ ರಶ್ಮಿಕಾ, ಇದೀಗ ‘ಮೈಸಾ’ (Mysaa) ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಮೈಸಾ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದು, ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ವಿಶೇಷವೆಂದರೆ, ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಸೆಲೆಬ್ರಿಟಿ ಈ…

Read More