admin

landlord-Duniya-vijay

Duniya Vijay as Landlord: ಭೀಮ ಈಗ ‘ಲ್ಯಾಂಡ್‌ ಲಾರ್ಡ್‌’; ‘ಕಾಟೇರ’ ನಿರ್ದೇಶಕರಿಂದ ಭೂ ಒಡೆತನದ ಹೋರಾಟದ ಕಥೆ

ದುನಿಯಾ ವಿಜಯ್‌ ಜನ್ಮದಿನದಂದು ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಭೀಮ ಚಿತ್ರದ ಯಶಸ್ಸಿನ ನಂತರ ವಿಜಯ್‌ ಅವರೇ ಮತ್ತೊಂದು ಸಿನಿಮಾ ತಮಗೆ ತಾವೇ ನಿರ್ದೇಶಿಸಿಕೊಳ್ಳುತ್ತಾರೆ ಎಂಬ ಮಾತು ಗಾಂಧೀನಗರದಲ್ಲಿತ್ತು. ಆದರೆ, ದರ್ಶನ್‌ಗೆ ಕಾಟೇರ ಮಾಡಿದ ಜಡೇಶ್‌ ಹಂಪಿ ಅವರು ದುನಿಯಾ ವಿಜಯ್‌ ಅವರ 29ನೇ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ಲ್ಯಾಂಡ್‌ ಲಾರ್ಡ್‌’ ಎಂದು ಹೆಸರಿಡಲಾಗಿದೆ. ವಿಜಯ್‌ ಹುಟ್ಟು ಹಬ್ಬದಂದು ಟೈಟಲ್‌ ರಿವಿಲ್‌ ಮಾಡಲಾಗಿದೆ. ರಾಚಯ್ಯ ಎಂಬ ಪಾತ್ರದಲ್ಲಿ ವಿಜಯ್‌ ಕಾಣಿಸಿಕೊಳ್ಳಲಿದ್ದಾರೆ. ಹಾಡು ಮತ್ತು ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣ…

Read More
Naveen Shankar Nodidavaru Enantare

Nodidavaru Enantare: ನೋಡಿದವರು ಏನಂತಾರೆ ಎನ್ನುತ್ತಲೇ ಟ್ರೇಲರ್‌ ಬಿಡುಗಡೆ ಮಾಡಿದ ಚಿತ್ರ ತಂಡ

ಕ್ಷೇತ್ರಪತಿ ಎಂಬ ರೈತಾಪಿ ವರ್ಗ ಮತ್ತು ಜೀತ ಪದ್ಧತಿಯ ವಿಚಾರದ ಕಥೆಯಲ್ಲಿ ಮನೋಜ್ಞವಾಗಿ ನಟಿಸಿ ಮೆಚ್ಚುಗೆ ಪಡೆದಿದ್ದ ನಟ ನವೀನ್‌ ಶಂಕರ್‌ ಈಗ ಮಿಡಲ್‌ ಕ್ಲಾಸ್‌ ಮನಸ್ಥಿತಿಗಳ ಕಥೆಯ ಜೊತೆ ಬಂದಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ ʻನೋಡಿದವರು ಏನಂತಾರೆʼ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಪಾತ್ರಕ್ಕೆ ಹೊಸ ತನವನ್ನು ತಂದಿದ್ದಾರೆ. “ಟ್ರೇಲರ್ ನೋಡಿ ಎಮೋಷನಲ್ ಆದೆ. ತಾಯಿಗಿಂತ ಪ್ರಪಂಚದಲ್ಲಿ ದೊಡ್ಡದು ಏನಿಲ್ಲ. ಮ್ಯೂಸಿಕ್ ಡೈರೆಕ್ಟರ್ ಅದ್ಭುತ ಕೆಲಸ ಮಾಡಿದ್ದಾರೆ. ಇದು ಕ್ರಿಯೇಟಿವ್ ಜಾನರ್ ಸಿನಿಮಾ. ಇಂತಹ ಸಿನಿಮಾಗಳಿಗೆ…

Read More
Shivaraj-kumar-Upendra-raj-b-shetty-45-movie

ಸ್ವಾತಂತ್ರ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ ‘45’!

ಶಿವರಾಜಕುಮಾರ್‍, ಉಪೇಂದ್ರ ಮತ್ತು ರಾಜ್‍ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿರುವ ಈ ಚಿತ್ರವು ಬೇಗ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಚಿತ್ರವು ಇನ್ನೂ ಏಳು ತಿಂಗಳುಗಳ ನಂತರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ‘45’ ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲೊಂದು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಟೊರೊಂಟೋದ ಖ್ಯಾತ VFX ಸಂಸ್ಥೆಯಾದ MARZನಲ್ಲಿ…

Read More
Chikkanna-New-Movie-Lakshmipura

Lakshmiputra; ಚಿಕ್ಕಣ್ಣ ಈಗ ‘ಲಕ್ಷ್ಮೀಪುತ್ರ’; ಎ.ಪಿ. ಅರ್ಜುನ್‍ ನಿರ್ಮಾಣದಲ್ಲಿ ಹೊಸ ಚಿತ್ರ

ನಿರ್ದೇಶಕ ಎ.ಪಿ. ಅರ್ಜುನ್‍ಗೆ (A P Arjun) ನಿರ್ಮಾಣ ಹೊಸದೇನಲ್ಲ. ಅವರು ‘ಕಿಸ್‍’ ಚಿತ್ರವನ್ನು ತಮ್ಮ ಎ.ಪಿ. ಅರ್ಜುನ್‍ ಫಿಲಂಸ್‍ ಸಂಸ್ಥೆಯ ಮೂಲಕ ನಿರ್ಮಿಸಿದ್ದರು. ಅದರ ನಂತರ ವಿರಾಟ್‍ ಅಭಿನಯದಲ್ಲಿ ‘ಅದ್ಧೂರಿ ಲವ್ವರ್‍’ ಎಂಬ ಚಿತ್ರವನ್ನು ಘೋಷಿಸಿದ್ದರು. ಆ ಚಿತ್ರ ಸದ್ಯಕ್ಕೆ ಅರ್ಧಕ್ಕೆ ನಿಂತಿದೆ ಎಂದು ಹೇಳಲಾಗಿದ್ದು, ಅದು ಮುಗಿಯುವುದಕ್ಕೂ ಮೊದಲೇ ಅರ್ಜುನ್‍ ಹೊಸ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರು ಚಿಕ್ಕಣ್ಣ (Chikkanna) ಅಭಿನಯದಲ್ಲಿ ‘ಲಕ್ಷ್ಮೀಪುತ್ರ’ (Lakshmiputra) ಎಂಬ ಚಿತ್ರದ ನಿರ್ಮಾಣಕ್ಕೆ ಕೈ…

Read More