admin

Thimmanna-Mottegalu-Dallas-Premiere

Timmana Mottegalu; ಅಮೇರಿಕಾದಲ್ಲಿ ಪ್ರದರ್ಶನವಾಯ್ತು ರಕ್ಷಿತ್‍ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ …

ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ರಕ್ಷಿತ್‍ ತೀರ್ಥಹಳ್ಳಿ (Rakshit Teerthahalli) ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ (Timmana Mottegalu) ಚಿತ್ರವು ಇದಕ್ಕೂ ಮೊದಲು ಕೊಲ್ಕತ್ತಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವ ಮತ್ತು ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಿತ್ತು. ದಾದಾ ಸಾಹೇಬ್‍ ಫಾಲ್ಕೆ ಚಿತ್ರೋತ್ಸವದಲ್ಲಿ ಜ್ಯೂರಿಯ ವಿಶೇಷ ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ ‘ತಿಮ್ಮನ ಮೊಟ್ಟೆಗಳು’ ಚಿತ್ರವು ಅಮೇರಿಕಾಗೆ ಪಯಣ ಬೆಳೆಸಿದೆ. ಚಿತ್ರವು ಅಮೇರಿಕಾದ ಡಲ್ಲಾಸ್‍ ನಗರದ ಮಲ್ಟಿಪ್ಲೆಕ್ಸ್ನಲ್ಲಿ ಪ್ರೀಮಿಯರ್‍ ಪ್ರದರ್ಶನ ಕಂಡಿದ್ದು, ಡಲ್ಲಾಸ್‍ನಲ್ಲಿರುವ…

Read More
Simple Suni'Gatha Vaibhava Dushyanth and Ashika Ranganath

Gatha Vaibhava; ಪೋರ್ಚುಗಲ್‌ನಲ್ಲಿ ‘ಗತವೈಭವ’ ಶೂಟಿಂಗ್ ಮುಗಿಸಿದ ‘ಸಿಂಪಲ್’ ಸುನಿ

ದುಷ್ಯಂತ್‍ (Dushyanth) ಮತ್ತು ಅಶಿಕಾ ರಂಗನಾಥ್‍ (Ashika Ranganath) ಅಭಿನಯದಲ್ಲಿ ಸುಮಾರು ಎರಡು ವರ್ಷಗಳ ಹಿಂದೆಯೇ ‘ಗತವೈಭವ’ (Gatha Vaibhava) ಎಂಬ ಚಿತ್ರ ಪ್ರಾರಂಭಿಸಿದ್ದರು ನಿರ್ದೇಶಕ ‘ಸಿಂಪಲ್‍’ ಸುನಿ (Simple Suni). ಚಿತ್ರದ ಚಿತ್ರೀಕರಣ ಪ್ರಾರಂಭವಾದ ಸುದ್ದಿ ಇತ್ತಾದರೂ, ನಂತರ ಚಿತ್ರ ಏನಾಯಿತು ಎಂದೇ ಗೊತ್ತಿರಲಿಲ್ಲ. ಇದೀಗ ಸುನಿ ಸದ್ದಿಲ್ಲದೆ ಚಿತ್ರವನ್ನು ಮುಗಿಸಿದ್ದಾರೆ. ಅಷ್ಟೇ ಅಲ್ಲ, ಇದೇ ವರ್ಷ ಬಿಡುಗಡೆ ಮಾಡುವುದಕ್ಕೂ ಸಜ್ಜಾಗಿದ್ದಾರೆ. ಹೌದು, ‘ಗತವೈಭವ’ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರು, ಪೋರ್ಚುಗಲ್‍ ಮುಂತಾದ ಕಡೆ 100ಕ್ಕೂ ಹೆಚ್ಚು…

Read More
Rajavardhan-Gajarama

Gajarama; ಪೈಲ್ವಾನ್ ಅವತಾರದಲ್ಲಿ ಕಾಣಿಸಿಕೊಂಡ ರಾಜವರ್ಧನ್ …

ರಾಜವರ್ಧನ್‍ ನಾಯಕನಾಗಿ ಅಭಿನಯಿಸಿರುವ ‘ಗಜರಾಮ’ ಚಿತ್ರವು ಫೆಬ್ರವರಿ 07ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ರಾಜವರ್ಧನ್‍ ಪೈಲ್ವಾನ್‍ ಆಗಿ ಕಾಣಿಸಿಕೊಂಡಿದ್ದಾರೆ. ‘ಗಜರಾಮ’ (Gajarama) ಚಿತ್ರದ ಟ್ರೇಲರ್‍ ಆನಂದ್‍ ಆಡಿಯೋದಲ್ಲಿ ಬಿಡುಗಡೆಯಾಗಿದ್ದು, 2 ನಿಮಿಷ 46 ಸೆಕೆಂಡ್‍ಗಳ ಟ್ರೇಲರ್‌ನಲ್ಲಿ ಆಕ್ಷನ್, ಎಮೋಷನ್ ದೃಶ್ಯಗಳು ಗಮನ ಸೆಳೆಯುತ್ತಿವೆ. ರಾಜವರ್ಧನ್‌ ಕುಸ್ತಿಕಣದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದು, ಕಬೀರ್ ಸಿಂಗ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ‘ಶಿಷ್ಯ’ ದೀಪಕ್‍ ಅಭಿನಯಿಸಿದ್ದು, ತಪಸ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಬಲದಲ್ಲಿ…

Read More
Nenapirali-Pream-Sharanya-Shetty

Sharanya Shetty; ‘ನೆನಪಿರಲಿ’ ಪ್ರೇಮ್‍ ಹೊಸ ಚಿತ್ರಕ್ಕೆ ಶರಣ್ಯ ಶೆಟ್ಟಿ ನಾಯಕಿ

ಶರಣ್ಯ ಶೆಟ್ಟಿ (Sharanya Shetty) ಇದುವರೆಗೂ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’, ‘ಫಾರೆಸ್ಟ್’ ಮುಂತಾದ ಚಿತ್ರಗಳೆಲ್ಲಾ ಬಹುನಾಯಕಿಯರ ಚಿತ್ರವಾಗಿತ್ತು. ಇದೀಗ ಅವರು ಮೊದಲ ಬಾರಿಗೆ ಒಂಟಿ ನಾಯಕಿಯಾಗಿ ಆಯ್ಕೆಯಾಗಿದ್ದು, ‘ನೆನಪಿರಲಿ’ ಪ್ರೇಮ್‍’ (Nenapirali Prem) ಎದುರು ಹೊಸ ಚಿತ್ರವೊಂದರಲ್ಲಿ ಅವರು ನಾಯಕಿಯಾಗಿ ಆಯ್ಕೆಯಾಗಿರುವುದು ವಿಶೇಷ. ಕಳೆದ ವರ್ಷ ಪ್ರೇಮ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಚಿತ್ರದ ಮುಹೂರ್ತವಾಗಿತ್ತು. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಶತ್ರು’ ಚಿತ್ರದಲ್ಲಿ ಅವರು ಮಾಸ್‍ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈಗ ಈ ಚಿತ್ರದಲ್ಲಿ ಅವರು ಪುನಃ…

Read More