admin

Deepak-Subramanya-Mr-Rani.

Mr. Rani; ಸೈಕೋ ಜಯಂತ್, ರಾಣಿ ಯಾಕಾದ? ಫೆ. 07ರಂದು ಸಿಗಲಿದೆ ಉತ್ತರ

‘ಲಕ್ಷ್ಮೀ ನಿವಾಸ’ (Lakshmi Nivasa) ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರ ಮಾಡಿ ಸಾಕಷ್ಟು ಜನಪ್ರಿಯವಾಗಿರುವ ದೀಪಕ್ ಸುಬ್ರಹ್ಮಣ್ಯ (Deepak Subramanya) ಇದೀಗ ‘ಮಿಸ್ಟರ್‍ ರಾಣಿ’ (Mr Rani) ಯಾಗಿದ್ದು, ಈ ಚಿತ್ರವು ಇದೇ ಫೆ.07ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೆಜ್ಜೆ ಇಡುವ ಸಾಮಾನ್ಯ ಯುವಕನೊಬ್ಬ, ಅನಿವಾರ್ಯವಾಗಿ ನಾಯಕಿಯಾಗುವ ಕಥೆ ಈ ಚಿತ್ರದಲ್ಲಿದೆ. ನಾಯಕಿಯಾಗಿ ದೀಪಕ್‍ ಸುಬ್ರಹ್ಮಣ್ಯ ಕಾಣಿಸಿಕೊಂಡಿರುವುದು ವಿಶೇಷ. ಹಾಗೆ ನಾಯಕಿಯಾದ ನಾಯಕನು ಚಿತ್ರರಂಗದಲ್ಲಿ ಏನೆಲ್ಲಾ ಅನುಭವಿಸುತ್ತಾನೆ ಎನ್ನುವುದು ಚಿತ್ರದ ಕಥೆ. ಈ ಹಿಂದೆ ‘ಸೆಲ್ಪಿ…

Read More
Pranam Devaraj, Purathana Films

Pranam Devaraj; ಪ್ರಣಮ್ ಜತೆಗೆ ಪುರಾತನ ಫಿಲಂಸ್ ಮತ್ತೊಂದು ಚಿತ್ರ

ಪ್ರಣಮ್ ದೇವರಾಜ್ (Pranam Devaraj) ನಟನೆಯ ‘S/O ಮುತ್ತಣ್ಣ’ ಚಿತ್ರದ ಕೆಲಸಗಳು ಮುಗಿಯುತ್ತಾ ಬಂದಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಹೀಗಿರುವಾಗಲೇ, ಆ ಚಿತ್ರವನ್ನು ನಿರ್ಮಿಸಿದ್ದ ಪುರಾತನ ಫಿಲಂಸ್‍ (Purathana Films), ಪ್ರಣಮ್‍ ಜೊತೆಗೆ ಇನ್ನೊಂದು ಚಿತ್ರವನ್ನು ಘೋಷಿಸಿದೆ. ಕನ್ನಡ ಚಿತ್ರೋದ್ಯಮದಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಆಶಯ ಇಟ್ಟುಕೊಂಡಿರುವ ಪುರಾತನ ಫಿಲಂಸ್, ಇದೀಗ ‘ಪ್ರೊಡಕ್ಷನ್ ನಂ.2’ ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಮತ್ತೊಂದು ಚಿತ್ರವನ್ನು ಪ್ರಕಟಿಸಿದೆ. ಈ ಚಿತ್ರದಲ್ಲೂ ಸಹ ಪ್ರಣಮ್ ದೇವರಾಜ್ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ‘S/O…

Read More

Duniya Vijay; ‘ಮಾರುತ’ನಾದ ವಿಜಯ್‍; ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟ

ಶ್ರೇಯಸ್ ಮಂಜು ಮತ್ತು ಬೃಂದಾ ಆಚಾರ್ಯ ಅಭಿನಯದಲ್ಲಿ ಎಸ್‍. ನಾರಾಯಣ್‍, ಎರಡು ವರ್ಷಗಳ ಹಿಂದೆ ಒಂದು ಚಿತ್ರ ಪ್ರಾರಂಭಿಸಿದ್ದರು. ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರವಿದ್ದು, ಆ ಪಾತ್ರದಲ್ಲಿ ದೊಡ್ಡ ನಟರೊಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ, ಮಾತುಕತೆ ನಡೆಯುತ್ತಿದೆ ಎಂದು ನಾರಾಯಣ್‍ ಹೇಳಿದ್ದರು. ಈಗ ಆ ಚಿತ್ರಕ್ಕೆ ‘ದುನಿಯಾ’ ವಿಜಯ್‍ ಎಂಟ್ರಿಯಾಗಿದೆ. ಅಷ್ಟೇ ಅಲ್ಲ, ಚಿತ್ರಕ್ಕೆ ‘ಮಾರುತ’ ಎಂಬ ಹೆಸರನ್ನೂ ಇಡಲಾಗಿದೆ. ‘ದುನಿಯಾ’ ವಿಜಯ್‍ ಅಭಿನಯದಲ್ಲಿ ಎಸ್‍. ನಾರಾಯಣ್‍ ಇದಕ್ಕೂ ಮೊದಲು ‘ಚಂಡ’ ಹಾಗೂ ‘ದಕ್ಷ’ ಚಿತ್ರಗಳನ್ನು ನಿರ್ದೇಶನ…

Read More
Anamadheya Ashok Kumar

Anamadheya Ashok Kumar; ಅನಾಮಧೇಯನ ಹೆಸರು ಅಶೋಕ್ ಕುಮಾರ್; ಫೆ. 07ಕ್ಕೆ ಕಿಶೋರ್ ಅಭಿನಯದ ಚಿತ್ರ

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಥ್ರಿಲ್ಲರ್ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ಇದೀಗ ಕಿಶೋರ್ ಅಭಿನಯದ ‘ಅನಾಮಧೇಯ ಅಶೋಕ್‍ ಕುಮಾರ್‍’ (Anamadheya Ashok Kumar) ಸಹ ಒಂದು. ಈ ಚಿತ್ರದಲ್ಲಿ ಕಿಶೋರ್‍ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವು ಫೆಬ್ರವರಿ 07ರಂದು ಬಿಡುಗಡೆಯಾಗುತ್ತಿದೆ. ‘ಅನಾಮಧೇಯ ಅಶೋಕ್ ಕುಮಾರ್‍’ ಒಂದು ಥ್ರಿಲ್ಲರ್‍ ಚಿತ್ರವಾಗಿದ್ದು, ಒಬ್ಬ ಪತ್ರಕರ್ತ ಮತ್ತು ಪೊಲೀಸ್ ಅಧಿಕಾರಿಯ ಸುತ್ತ ಸುತ್ತುವ ಚಿತ್ರವಾಗಿದೆ. ಪತ್ರಕರ್ತನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಆಚಾರ್ & ಕೋ’…

Read More