admin

Sanju Weds Geetha 2

‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡಕ್ಕೀಗ ನಿರಾಳ; ತಡೆಯಾಜ್ಞೆ ತೆರವು ಗೊಳಿಸಿದ ನ್ಯಾಯಲಯ

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆದುರಾದ ಸಂಕಷ್ಟ ಇದೀಗ ಬಗೆಹರಿದಿದೆ. ಚಿತ್ರವು ಶುಕ್ರವಾರ (ಜನವರಿ 10) ಬಿಡುಗಡೆ ಆಗಬೇಕಿತ್ತು. ಆದರೆ, ಹೈದರಾಬಾದ್‍ನ ನ್ಯಾಯಾಲಯವು ಚಿತ್ರದ ಬಿಡುಗಡೆ ಮೇಲೆ ತಡೆಯಾಜ್ಞೆ ನೀಡಿದ್ದರಿಂದ, ಚಿತ್ರವು ಅಂದುಕೊಂಡಂತೆ ಬಿಡುಗಡೆ ಆಗಲಿಲ್ಲ. ಇದೀಗ ನ್ಯಾಯಲಯವು ತಡೆಯಾಜ್ಞೆನ್ನು ತೆರವುಗೊಳಿಸಿದ್ದು, ಸಮಸ್ಯೆ ಎದುರಾದಷ್ಟೇ ಬೇಗ ಪರಿಹಾರವೂ ಸಿಕ್ಕಿದೆ. ಚಿತ್ರದ ಬಿಡುಗಡೆಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡ ನಿರಾಳವಾಗಿದ್ದು, ಸದ್ಯದಲ್ಲೇ ಚಿತ್ರದ ಹೊಸ…

Read More
Actor Kishore

BIFFESನ ರಾಯಭಾರಿಯಾಗಿ ನಟ ಕಿಶೋರ್ ನೇಮಕ

ಕೆಲವೇ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಿಕಾಗೋಷ್ಠಿ ಮಾಡಿ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕುರಿತಾಗಿ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಇದೀಗ ಚಿತ್ರೋತ್ಸವ ಸಮಿತಿಯಿಂದ ಇನ್ನೊಂದು ಸುದ್ದಿ ಬಂದಿದ್ದು, ನಟ ಕಿಶೋರ್‍ ಈ ಬಾರಿ ಚಿತ್ರೋತ್ಸವದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಮೂಲದ ಕಿಶೋರ್‍, ತೆಲುಗು ಮತ್ತು ತಮಿಳು ಸೇರಿದಂತೆ ಬೇರೆ ಭಾಷೆಯ ಚಿತ್ರಗಳಲ್ಲೂ ತಮ್ಮ ಪ್ರತಿಭೆಯಿಂದ ಹೆಸರು ಮಾಡಿದವರು. ಇದೀಗ ಅವರು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFES) ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕಳೆದ ಬಾರಿ ನಟ ಧನಂಜಯ್‍ ರಾಯಭಾರಿಯಾಗಿದ್ದು,…

Read More
Game Changer Ram Charan

Game Changer; ತೆಲುಗಿನ ‘ಗೇಮ್‍ ಚೇಂಜರ್’ನಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ

ದೊಡ್ಡ ಬಜೆಟ್‍ನ ಮತ್ತು ಬಹುನಿರೀಕ್ಷೆಯ ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆ ಆದಾಗಲೆಲ್ಲಾ, ಕನ್ನಡ ಚಿತ್ರಗಳಿಗೆ ಸಮಸ್ಯೆ ಎದುರಾಗುತ್ತದೆ. ಇದೀಗ ರಾಮ್‍ಚರಣ್‍ ತೇಜ ಅಭಿನಯದ ‘ಗೇಮ್‍ ಚೇಂಜರ್‍’ ಚಿತ್ರದಿಂದ ತಮಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂದು ‘ಛೂ ಮಂತರ್’ ನಿರ್ಮಾಪಕ ತರುಣ್ ಶಿವಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇಂದು ಶರಣ್‍ ಅಭಿನಯದ ‘ಛೂ ಮಂತರ್’, ‘ಟೆಡ್ಡಿ ಬೇರ್‍’ ಮತ್ತು ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದರ ಜೊತೆಗೆ ತೆಲುಗಿನ ನಿರೀಕ್ಷಿತ ಚಿತ್ರವಾದ ರಾಮ್‍ಚರಣ್‍…

Read More
Manada Kadalu turra Song

ಹುಚ್ಚನಿಂದ ಸ್ಫೂರ್ತಿ ಪಡೆದು ‘ತುರ್ರಾ’ ಹಾಡು ಬರೆದ ಯೋಗರಾಜ್ ಭಟ್

‘ಮನದ ಕಡಲು’ ಚಿತ್ರಕ್ಕೆ ಸಂಬಂಧಿಸಿದಂತೆ ವಾರಕ್ಕೊಂದು ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ ನಿರ್ದೇಶಕ ಯೋಗರಾಜ್‍ ಭಟ್‍. ಮೊದಲು ಚಿತ್ರದ ಮೊದಲ ನೋಟ ಬಿಡುಗಡೆಯಾಯಿತು. ಆ ನಂತರ ‘ಹೂ ದುಂಬಿಯ ಕಥೆಯ’ ಎಂಬ ಹಾಡನ್ನು ಅವರು ಬಿಡುಗಡೆ ಮಾಡಿದರು. ಈಗ ಚಿತ್ರದ ಎರಡನೇ ಹಾಡನ್ನು ಇದೀಗ ಬಿಡುಗಡೆ ಮಾಡಲಾಗಿದೆ. ‘ತುರ್ರಾ’ ಎಂಬ ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ವಿ. ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ. ನೆಲಮಂಗಲದ ಬಳಿಯಿರುವ…

Read More