
ಮಾರ್ಚ್ 1ರಿಂದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
ಬೆಂಗಳೂರು: 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2025ರ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾದ ಚಲನಚಿತ್ರಗಳ ಪಟ್ಟಿ ಪ್ರಕಟ. ಚಲನಚಿತ್ರೋತ್ಸವವು (BIFFes) ಮಾರ್ಚ್ 1ರಿಂದ ಆರಂಭವಾಗಲಿದ್ದು, ಸುಮಾರು 60 ದೇಶಗಳಿಂದ 200ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶನ ಕಾಣಲಿವೆ.

Kiccha Sudeep; ಸುದೀಪ್ ಕಿಚ್ಚ, ಸೋದರಳಿಯ ಪಚ್ಚ; ಸಂಚಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ
ಸುದೀಪ್ (sudeep) ಸೋದರಳಿಯ ಸಂಚಿತ್ ಸಂಜೀವ್ (Sanchith sanjeev) ಅಲಿಯಾಸ್ ಸಂಚಿ ಅಭಿನಯದಲ್ಲಿ ಜನವರಿಯಲ್ಲಿ ಹೊಸ ಚಿತ್ರ ಪ್ರಾರಂಭವಾಗಿತ್ತು. ಆದರೆ, ಚಿತ್ರದ ಮುಹೂರ್ತವಾದರೂ ಚಿತ್ರದ ಹೆಸರು ಘೋಷಣೆಯಾಗಿರಲಿಲ್ಲ. ಫೆ.5ರಂದು ಸಂಚಿ ಹುಟ್ಟುಹಬ್ಬದ ಸಂದರ್ಭದಲ್ಲಿ ಶೀರ್ಷಿಕೆ ಅನಾವರಣಗೊಳಿಸುವುದಾಗಿ ಚಿತ್ರತಂಡದವರು ಹೇಳಿಕೊಂಡಿದ್ದರು. ಅದರಂತೆ ಇದೀಗ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂಬ ಹೆಸರನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ಸಂಚಿತ್‍ನ ಮೊದಲ ನೋಟದ ಪೋಸ್ಟರ್ ಹಾಗೂ ಪ್ರೋಮೋ ಸಹ ಬಿಡುಗಡೆಯಾಗಿದೆ. ಸುದೀಪ್ ಈ ಪ್ರೋಮೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ…

Vinodh Rajkumar; ಲೀಲಾವತಿ ಸ್ಮಾರಕ ಭವನದಲ್ಲಿ ‘ಶಾಲೆ’ ಪ್ರಾರಂಭ
ಕಳೆದ ತಿಂಗಳು ನಟಿ ಲೀಲಾವತಿ ಅವರ ಸ್ಮಾರಕ ಉದ್ಘಾಟನೆಯಾಗಿದ್ದು ನೆನಪಿರಬಹುದು. ಸೋಲದೇವನಹಳ್ಳಿಯ ತಮ್ಮ ಜಮೀನಿನಲ್ಲಿ ತಾಯಿಯ ಸ್ಮಾರಣಾರ್ಥ ಈ ಸ್ಮಾರಕವನ್ನು ವಿನೋದ್ ರಾಜ್ ಕಟ್ಟಿಸಿದ್ದಾರೆ. ಈಗ ಡಾ. ಲೀಲಾವತಿ ಸ್ಮಾರಕ ಭವನದಲ್ಲಿ ಸದ್ದಿಲ್ಲದೆ ಒಂದು ಚಿತ್ರದ ಮುಹೂರ್ತ ನೆರವೇರಿದೆ. ಅದೇ ‘ಶಾಲೆ’. ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಬಿ.ಆರ್ ನಿರ್ದೇಶಿಸುತ್ತಿರುವ, ನಾಗು ಶ್ರೀ ಎಸ್.ಎನ್. ನಿರ್ಮಾಣದ ಚಿತ್ರ ‘ಶಾಲೆ’. ಈ ಚಿತ್ರದ ಮುಹೂರ್ತ ಲೀಲಾವತಿ ಸ್ಮಾರಕದಲ್ಲಿ ನಡೆದಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ವಿನೋದ್ ರಾಜ್…